COVID Advisory to Schools : ಕೊರೊನಾ ಸೋಂಕು ಹೆಚ್ಚಳದ ನಡುವೆಯೇ ಶಾಲೆಗಳಲ್ಲಿ ಮಾರ್ಗಸೂಚಿ ಜಾರಿ

COVID Advisory to Schools : ದೇಶದಲ್ಲಿ ಕೋವಿಡ್​ ತಹಬಧಿಗೆ ಬಂದಿದೆ. ಇನ್ನು ಚಿಂತೆ ಬೇಡ ಎಂದು ನಿಟ್ಟುಸಿರು ಬಿಡುವುದರೊಳಗೆಯೇ ದೇಶದಲ್ಲಿ ಕೊರೊನಾ ಮಾರಿ ಮತ್ತೊಮ್ಮೆ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ. ಈ ತಿಂಗಳಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ. ಮಾರ್ಚ್ ತಿಂಗಳಿಗಿಂತ ಏಪ್ರಿಲ್​ ತಿಂಗಳಲ್ಲಿ ಪಾಸಿಟಿವಿಟಿ ದರವು 1.62 ಪ್ರತಿಶತ ಏರಿಕೆ ಕಂಡಿದೆ. ಪ್ರತಿನಿತ್ಯ 15 ಪ್ರತಿಶತ ಮಕ್ಕಳಲ್ಲಿ ಕೊರೊನಾ ಪ್ರಕರಣಗಳು ವರದಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಶಾಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಗುರುಗ್ರಾಮ್​ ಶಿಕ್ಷಣ ಇಲಾಖೆಯು ಹೇಳಿದೆ.
ಸೋಮವಾರದಂದು ಹರಿಯಾಣ ಸರ್ಕಾರವು ಗುರುಗ್ರಾಮ್​, ಫರೀದಾಬಾದ್​, ಸೋನಿಪತ್​ ಹಾಗೂ ಜಜ್ಜರ್​ ಜಿಲ್ಲೆಗಳಲ್ಲಿ ಮಾಸ್ಕ್​ ಧರಿಸುವುದನ್ನು ಕಡ್ಡಾಯಗೊಳಿಸಿತ್ತು.


ಇನ್ನು ಶಾಲೆಗಳಲ್ಲಿಯೂ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಾಲೆಗಳಲ್ಲಿ ಥರ್ಮಲ್​ ಸ್ಕ್ರೀನಿಂಗ್​ ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಮತ್ತು ಫೇಸ್​ ಮಾಸ್ಕ್​ಗಳನ್ನು ಧರಿಸುವುದು ಕಡ್ಡಾಯವಾಗಿದೆ. ಈ ನಿಯಮಗಳ ಪಾಲನೆ ಸರಿಯಾಗಿ ಆಗಿದೆಯೇ ಎಂದು ತಿಳಿದುಕೊಳ್ಳಲು ಸಿಬ್ಬಂದಿಯನ್ನು ನೇಮಿಸಬೇಕು. ಶಾಲೆಗಳಲ್ಲಿ ಕೋವಿಡ್​ ಮಾರ್ಗಸೂಚಿಗಳು ಸರಿಯಾಗಿ ಪಾಲನೆಯಾಗಿದೆಯಾ ಎಂದು ತಿಳಿದುಕೊಳ್ಳಲು ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಎಂದು ಸಲಹೆಯಲ್ಲಿ ತಿಳಿಸಲಾಗಿದೆ.

ಕೊರೊನಾದ ಯಾವುದೇ ಲಕ್ಷಣಗಳನ್ನು ಹೊಂದಿರುವ ಮಗುವನ್ನು ಶಾಲೆಗೆ ಬರಲು ಅನುಮತಿಸಬಾರದು. ತರಗತಿಗಳಲ್ಲಿ ಯಾವ ಮಗುವಿಗೂ ಕೊರೊನಾ ಸೋಂಕು ಇಲ್ಲ ಎಂಬುದನ್ನು ಪ್ರತಿನಿತ್ಯ ಖಾತ್ರಿ ಪಡಿಸಿಕೊಳ್ಳಬೇಕು. ಮಗುವು ಪಾಸಿಟಿವ್​ ವರದಿಯನ್ನು ಪಡೆದುಕೊಂಡಲ್ಲಿ ಅವನು ಅಥವಾ ಅವಳು ಏಳು ದಿನಗಳ ಕಾಲ ಐಸೋಲೇಷನ್​ನಲ್ಲಿ ಇರುವುದು ಕಡ್ಡಾಯವಾಗಿದೆ. ಹಾಗೂ ಆ ಮಗುವಿನ ಪ್ರಾಥಮಿಕ ಸಂಪರ್ಕಿತರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಬೇಕು .

ಈ ನಡುವೆ ರಾಜ್ಯ ಆರೋಗ್ಯ ಇಲಾಖೆಯು ಕೊರೊನಾ ಪರೀಕ್ಷೆಯನ್ನು ಚುರುಕುಗೊಳಿಸಿದ್ದು ಪ್ರತಿ ದಿನ 3000 ಟೆಸ್ಟ್​ಗಳನ್ನು ಜಿಲ್ಲೆಯಲ್ಲಿ ನಡೆಸುತ್ತಿದೆ. ಗುರುಗ್ರಾಮ್​ ಜಿಲ್ಲೆಯಲ್ಲಿ 8 ರಿಂದ 10 ಕೋವಿಡ್​ ಟೆಸ್ಟಿಂಗ್​ ಕ್ಯಾಂಪ್​ಗಳನ್ನು ತೆರೆಯಲಾಗಿದೆ.

ಇದನ್ನು ಓದಿ : Athiya Shetty KL Rahul : ಹಸೆಮಣೆ ಏರಲು ಸಜ್ಜಾದ ಕೆ.ಎಲ್.ರಾಹುಲ್‌, ಆಥಿಯಾ ಶೆಟ್ಟಿ

ಇದನ್ನೂ ಓದಿ : Covid-19: ಬೂಸ್ಟರ್​ ಡೋಸ್​​ ಅಂತರವನ್ನು ಆರು ತಿಂಗಳಿಗೆ ಇಳಿಸುವಂತೆ ಸೀರಂ ಸಂಸ್ಥೆ ಮನವಿ

Face Masks, Thermal Screening: Gurugram Issues COVID Advisory to Schools Amid Spike in Cases

Comments are closed.