ನಿಮ್ಮ ಮಗಳಿಗೆ ಮನೆಯೊಳಗೆ ಬದುಕುವುದನ್ನಲ್ಲ… ನಿಮ್ಮ ಮಗನಿಗೆ ಹೆಣ್ಣುಮಕ್ಕಳನ್ನು ಗೌರವಿಸಲು ಕಲಿಸಿ ಎಂಬ ಮಾತು ಸ್ತ್ರೀ ದೌರ್ಜನ್ಯದ ಸಂದರ್ಭದಲ್ಲಿ ಧ್ವನಿಸುತ್ತದೆ. ಇಂತಹುದೇ ಜವಾಬ್ದಾರಿಯುತ ಪೋಸ್ಟ್ ವೊಂದನ್ನು ನಟಿ ಮೇಘನಾ ಶೇರ್ ಮಾಡಿಕೊಂಡಿದ್ದು ಮಗನನ್ನು ಹೇಗೆ ಬೆಳೆಸಬೇಕಂಬ ತಿಳುವಳಿಕೆ ತೋರಿದ್ದಾರೆ.

ಹೌದು, ತಮ್ಮೆಲ್ಲ ನೋವುಗಳ ಜೊತೆಯಲ್ಲಿಯೇ ಸೆಲಿಬ್ರೆಟಿಯಾಗಿ ತಮಗಿರುವ ಸಾಮಾಜಿಕ ಜವಾಬ್ದಾರಿಯನ್ನು ಮರೆಯದ ಮೇಘನಾ ಸಮಾಜಕ್ಕೆ ಒಬ್ಬ ಉತ್ತಮ ನಾಗರೀಕನನ್ನು ನೀಡುವ ಕರ್ತವ್ಯ ನನ್ನದು.ಅದನ್ನು ನಾನು ನಿಭಾಯಿಸುತ್ತೇನೆ ಎಂಬ ವಾಗ್ದಾನ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ವೈರಲ್ ಆದ I am Raising A Son That Your Daughter Will Be Safe With. I Promise. ಈ ಪೋಸ್ಟ್ ನ್ನು ಮೇಘನಾ ಶೇರ್ ಮಾಡಿಕೊಂಡಿದ್ದು, ಈ ಮಾತಿನಂತೆ ಮಗನನ್ನು ಬೆಳೆಸುವ ಪ್ರಾಮಿಸ್ ಮಾಡಿದ್ದಾರೆ.

ತಂದೆ ಕಳೆದುಕೊಂಡ ಮಗುವನ್ನು ಹೀಗೆ ಧೈರ್ಯವಾಗಿ ತಂದೆ-ತಾಯಿ ಎರಡು ಸ್ಥಾನದಲ್ಲಿ ನಿಂತು ಪಾಲನೆ ಮಾಡುವುದರ ಜೊತೆಗೆ ಅವನನ್ನು ಸಮಾಜಕ್ಕೆ ಪೂರಕವಾಗಿ ಬೆಳೆಸುವ ವಾಗ್ದಾನ ಮಾಡಿದ ಮೇಘನಾಗೆ ನೆಟ್ಟಿಗರ ಮೆಚ್ಚುಗೆ ಹರಿದು ಬಂದಿದ್ದು, ನೀವು ನಿಜವಾಗಿಯೂ ಸ್ಟ್ರಾಂಗ್. ಶುಭವಾಗಲಿ. ಮಗನಿಗೆ ಒಳ್ಳೆಯ ಭವಿಷ್ಯವಿರಲಿ ಎಂದು ನೆಟ್ಟಿಗರು ಆಶಿರ್ವಾದ ಮಾಡ್ತಿದ್ದಾರೆ.

ಸದ್ಯ ಮೇಘನಾ ರಾಜ್, ಜ್ಯೂನಿಯರ್ ಚಿರು ಹಾಗೂ ಸುಂದರ ರಾಜ್, ಪ್ರಮೀಳಾ ದಂಪತಿಗಳು ಕೊರೋನಾ ಸೋಂಕಿಗೆ ಒಳಗಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.