ನಟ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬ : ‘ಯುವರತ್ನ’ ಉಚಿತ ಪ್ರದರ್ಶನ ಎಲ್ಲೆಲ್ಲಿ ಗೊತ್ತಾ ?

ಕನ್ನಡ ಸಿನಿರಂಗದಲ್ಲಿ ಮಾರ್ಚ್ 17ಕ್ಕೆ ಎರಡೆರಡೂ ಸಂಭ್ರಮ ಎಂದರೆ ತಪ್ಪಾಗಲ್ಲ. ಅಂದು ನಟ ಪುನೀತ್‌ ರಾಜ್‌ಕುಮಾರ್‌ (Puneeth Rajkumar’s Birthday) 48ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಇನ್ನೊಂದೆಡೆ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ “ಕಬ್ಜ” ಬಿಡುಗಡೆಯಾಗುತ್ತಿದೆ. ಅದರಲ್ಲೂ ಅಪ್ಪು ಅಪಾರ ಸಂಖ್ಯೆ ಅಭಿಮಾನಿಗಳನ್ನು ಅಗಲಿ ಆಗಲೇ ಒಂದೂವರೆ ವರ್ಷ ಕಳೆದಿದೆ. ಆದರೂ ಕೂಡ ಮೆಚ್ಚಿನ ನಟನನ್ನು ಕಳೆದುಕೊಂಡ ನೆನಪು ಮಾತ್ರ ಇನ್ನು ಯಾರಲ್ಲೂ ಕಡಿಮೆ ಆಗಿಲ್ಲ. ಹೀಗಾಗಿ ವರ್ಷದಿಂದ ವರ್ಷಕ್ಕೆ ನಟ ಪುನೀತ್‌ ಅಭಿಮಾನಿಗಳ ಸಂಭ್ರಮ ಹೆಚ್ಚಾಗುತ್ತಾಲೇ ಇದೆ. ಅದಕ್ಕೆ ಇನ್ನಷ್ಟು ಹೆಚ್ಚಾಗಲೆಂದು ಅಪ್ಪು ಹುಟ್ಟುಹಬ್ಬದಂದು “ಯುವರತ್ನ” ಸಿನಿಮಾವನ್ನು (Yuvaratna Movie Free Show) ಉಚಿತ ಪ್ರದರ್ಶನ ನೀಡಲು ಸಿನಿತಂಡ ತಿರ್ಮಾನಿಸಿದೆ.

ಅಪ್ಪು ಜೀವಂತ ಇದ್ದಾಗ ಕೂಡ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಬಹಳ ವಿಶೇಷವಾಗಿ ಆಚರಿಸಿಕೊಂಡು ಬಂದಿದ್ದಾರೆ. ಅದರಂತೆ ಈ ಬಾರೀ ಕೂಡ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ತೀರ್ಮಾನಿಸಿದ್ದಾರೆ. ಅದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ನಾಳೆ (ಮಾರ್ಚ್ 16)ರಂದು ನಟ ಪುನೀತ್‌ ಅಭಿನಯದ ‘ಯುವರತ್ನ’ ಸಿನಿಮಾವನ್ನು ಬೆಂಗಳೂರಿನ ಜೆಪಿ ನಗರದ ಸಿದ್ಧಲಿಂಗೇಶ್ವರ ಸಿನಿಮಂದಿರದಲ್ಲಿ ಉಚಿತ ಪ್ರದರ್ಶನ ನೀಡಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ.

‘ಯುವರತ್ನ’ ಸಿನಿಮಾ ರಾತ್ರಿ 9.30ಕ್ಕೆ ವಿಶೇಷ ಪ್ರದರ್ಶನ ಮಾಡಲಾಗುತ್ತದೆ. ಆ ಬಳಿಕ ರಾತ್ರಿ 12 ಗಂಟೆಗೆ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಾಗುತ್ತದೆ. ಮಾರ್ಚ್ 17ರ ಬೆಳಗ್ಗೆ 9 ಗಂಟೆಗೆ ರಕ್ತದಾನ ಶಿಬಿರವನ್ನು ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ. ಜೆಪಿ ನಗರದ ದೊಡ್ಮನೆ ಅಭಿಮಾನಿಗಳ ಸಂಘ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ. ಇನ್ನುಳಿದಂತೆ ಹಲವೆಡೆ ಅಪ್ಪು ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಅಷ್ಟೇ ಅಲ್ಲದೇ ನಟ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಕೊನೆಯ ಸಾಕ್ಷ್ಯಚಿತ್ರ “ಗಂಧದಗುಡಿ”ಯನ್ನು ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆ ಮಾಡುತ್ತಿರುವುದು ವಿಶೇಷವಾಗಿದೆ.

ಇದನ್ನೂ ಓದಿ : ನಟ ಧನಂಜಯ್‌ ಅಭಿನಯದ “ಗುರುದೇವ ಹೊಯ್ಸಳ” ಸಿನಿಮಾದ ಟ್ರೈಲರ್‌ ಡೇಟ್‌ ಫಿಕ್ಸ್

ಇದನ್ನೂ ಓದಿ : ಟಿವಿ ಶೋ ‘ನುಕ್ಕಡ್’ ಖ್ಯಾತಿಯ ಹಿರಿಯ ನಟ ಸಮೀರ್ ಖಾಕರ್ ಇನ್ನಿಲ್ಲ

ಇನ್ನೊಂದು ಕಡೆ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ ಮಾರ್ಚ್ 17ಕ್ಕೆ ರಿಲೀಸ್ ಆಗುತ್ತಿದೆ. ಈಗಾಗಲೇ ಇಡೀ ಸಿನಿತಂಡ ಈ ಸಿನಿಮಾವನ್ನು ಪುನೀತ್ ರಾಜ್‌ಕುಮಾರ್ ಅವರಿಗೆ ಅರ್ಪಣೆ ಮಾಡುವುದಾಗಿ ಅನೌನ್ಸ್ ಮಾಡಿದೆ. ಹಾಗಾಗಿ ಅದೇ ದಿನ ಸಿನಿಮಾ ಕೂಡ ಬಿಡುಗಡೆಯಾಗುತ್ತಿದೆ. ರಿಯಲ್‌ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶಿವರಾಜ್‌ಕುಮಾರ್ ಅಭಿನಯದ ‘ಕಬ್ಜ’ ಈಗಾಗಲೇ ಕ್ರೇಜ್ ಹುಟ್ಟಾಕಿದೆ. ಒಂದೆಡೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದರೆ, ಇನ್ನೊಂದು ಕಡೆ ಅಪ್ಪುಗೆ ಗೌರವ ಸೂಚಿಸಲು ‘ಕಬ್ಜ’ ಬಿಡುಗಡೆಯಾಗುತ್ತಿರುವ ಖುಷಿಯಲ್ಲಿದ್ದಾರೆ.

Yuvaratna Movie Free Show : Actor Puneeth Rajkumar’s Birthday: Do you know where the free show of ‘Yuvaratna’ is?

Comments are closed.