Agumbe Ghat Travel Ban : ಆಗುಂಬೆ ಘಾಟ್‌ ರಸ್ತೆಯಲ್ಲಿ ಬಿರುಕು : ಭಾರೀ ವಾಹನ ಸಂಚಾರಕ್ಕೆ ನಿಷೇಧ

ಉಡುಪಿ : Agumbe Ghat Travel Ban : ಕಳೆದೊಂದು ವಾರದಿಂದಲೂ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತೀರ್ಥಹಳ್ಳಿ – ಉಡುಪಿ ಸಂಪರ್ಕ ಕಲ್ಪಿಸುವ ಆಗುಂಬೆ ಘಾಟ್‌ ರಸ್ತೆಯಲ್ಲಿ ಸಣ್ಣ ಬಿರುಕು ಕಾಣಿಸಿಕೊಂಡಿದ್ದು, ರಸ್ತೆ ಅಲ್ಲಲ್ಲಿ ಕುಸಿಯುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಜುಲೈ 27 ರಿಂದ ಸೆಪ್ಟೆಂಬರ್‌ 15 ರ ವರೆಗೆ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿ ಉಡುಪಿ ಜಿಲ್ಲಾದಿಕಾರಿ ಡಾ.ಕೆ.ವಿದ್ಯಾ ಕುಮಾರಿ ಅವರು ಆದೇಶ ಹೊರಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ೧೬೯ ಎ ಹಾದು ಹೋಗಿರುವ ಆಗುಂಬೆ ಘಾಟ್‌ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರದಿಂದಲೇ ಬಿರುಕು ಹಾಗೂ ಭೂ ಕುಸಿತ ಉಂಟಾಗುತ್ತಿದೆ. ಸಾರ್ವಜನಿಕರ ಹಿತದೃಷ್ಟಿಯಿಂದಾಗಿ ಇದೀಗ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದ್ದು, ಲಘು ವಾಹನಗಳ ಸಂಚಾರಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಅಲ್ಲದೇ ಘನ ವಾಹನಗಳು ಬದಲಿ ಮಾರ್ಗವನ್ನು ಬಳಸಿಕೊಂಡು ಸಂಚರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಬದಲಿ ಮಾರ್ಗಗಳು :
ಆಗುಂಬೆ ಘಾಟ್‌ ರಸ್ತೆಯಲ್ಲಿ ಭಾರೀ ವಾಹನ ಸಂಚಾರಕ್ಕೆ ನಿಷೇಧ ಹೇರಿರುವ ಬೆನ್ನಲ್ಲೇ ಬದಲಿ ಮಾರ್ಗವನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. ಉಡುಪಿಯಿಂದ ತೀರ್ಥಹಳ್ಳಿ ಮಾರ್ಗದಲ್ಲಿ ಸಂಚರಿಸುವ ವಾಹನಗಳು ತೀರ್ಥಹಳ್ಳಿ – ಆಗುಂಬೆ- ಶೃಂಗೇರಿ – ಮಾಳಾಘಾಟ್‌- ಕಾರ್ಕಳ- ಉಡುಪಿ ಮಾರ್ಗದಲ್ಲಿ ಸಂಚರಿಸಬಹುದಾಗಿದೆ. ಅಲ್ಲದೇ ತೀರ್ಥಹಳ್ಳಿ – ಮಾಸ್ತಿಕಟ್ಟೆ-ಸಿದ್ದಾಪುರ – ಕುಂದಾಪುರ- ಉಡುಪಿ ಮಾರ್ಗದಲ್ಲಿಯೂ ಸಂಚಾರ ಮಾಡಬಹುದಾಗಿದೆ.

Agumbe Ghat Travel ban Road Crack Heavy rain Prohibition for heavy vehicular traffic Udupi dc Vidhya Kumari Order
ಆಗುಂಬೆ ಘಾಟ್‌ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ ಆದೇಶ ಪ್ರತಿ

ಇದನ್ನೂ ಓದಿ : Minister Lakshmi Hebbalkar : ಹಠಾತ್ ಪ್ರವಾಹ ಮುನ್ಸೂಚನೆ : ಎಚ್ಚರಿಕೆ ವಹಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

ಇದನ್ನೂ ಓದಿ : Soujanya Case : ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ : ಮರುತನಿಖೆಗೆ ಸಿಎಂ ಭೇಟಿಯಾದ ಪೋಷಕರು, ಜು.28ಕ್ಕೆ ಬೆಂಗಳೂರಲ್ಲಿ ಬೃಹತ್​​ ಧರಣಿ

Comments are closed.