India Vs Pakistan World Cup match: ಭಾರತ Vs ಪಾಕಿಸ್ತಾನ ವಿಶ್ವಕಪ್ ಪಂದ್ಯ: 10 ಸೆಕೆಂಡ್ ಜಾಹೀರಾತಿಗೆ 30 ಲಕ್ಷ..!

ಬೆಂಗಳೂರು: India Vs Pakistan World Cup match : ಕ್ರಿಕೆಟ್ ಜಗತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳಿಗಿರುವ ಕ್ರೇಜೇ ಬೇರೆ. ಇಡೀ ಕ್ರಿಕೆಟ್ ಜಗತ್ತನ್ನೇ ತುದಿಗಾಲಲ್ಲಿ ನಿಲ್ಲಿಸುವ ತಾಕತ್ತು ಇಂಡಿಯಾ-ಪಾಕಿಸ್ತಾನ ಕ್ರಿಕೆಟ್ ಪಂದ್ಯಗಳಿದೆ. ಕಳೆದ 15 ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನ ತಂಡಗಳು ICC ಟೂರ್ನಿಗಳು ಮತ್ತು ಮತ್ತು ಏಷ್ಯಾಕಪ್ ಟೂರ್ನಿಯಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಇದೇ ಕಾರಣರಿಂದ ಇಂಡೋ-ಪಾಕ್ ಮ್ಯಾಚ್ಗೆ ಡಿಮ್ಯಾಂಡ್ ಜಾಸ್ತಿ.

ಈ ಬಾರಿಯ ಐಸಿಸಿ ವಿಶ್ವಕಪ್’ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವನ್ನು ಇಡೀ ಜಗತ್ತೇ ಚಾತಕ ಪಕ್ಷಿಯಂತೆ ಕಾಯುತ್ತಿದೆ. ವಿಶ್ವಕಪ್ ಟೂರ್ನಿಯ ಡಿಜಿಟಲ್ ರೈಟ್ಸ್, ಅಂದ್ರೆ ಆನ್ಲೈನ್ ಪ್ರಸಾರದ ಹಕ್ಕು ಡಿಸ್ನಿ ಸ್ಟಾರ್ ಸಂಸ್ಥೆ ಪಾಲಾಗಿದೆ. ಅಕ್ಟೋಬರ್ 15ರಂದು ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದ ಪ್ರಸಾರದ ವೇಳೆ 10 ಸೆಕೆಂಡ್ಗಳ ಜಾಹೀರಾತಿಗಾಗಿ ಡಿಸ್ನಿ+ಹಾಟ್ ಸ್ಟಾರ್ ಸಂಸ್ಥೆ ಬರೋರ್ಬರಿ 30 ಲಕ್ಷ ರೂ.ಗಳನ್ನು ನಿಗದಿ ಪಡಿಸಿದೆ. ಐಪಿಎಲ್ ಸಂದರ್ಭದಲ್ಲಿ 10 ಸೆಕೆಂಡ್’ಗಳ ಜಾಹೀರಾತು ಬೆಲೆ 18 ಲಕ್ಷವಿತ್ತು. ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಭಾರೀ ಡಿಮ್ಯಾಂಡ್ ಇರುವುದರಿಂದ ಜಾಹೀರಾತು ಮೊತ್ತದಲ್ಲಿ ಭಾರೀ ಏರಿಕೆಯಾಗಿದೆ.

ಇದು ಒಂದು ಕಡೆಯಾದ್ರೆ, ಅಕ್ಟೋಬರ್ 15ರಂದು ಭಾರತ Vs ಪಾಕಿಸ್ತಾನ ವಿಶ್ವಕಪ್ ಪಂದ್ಯ ನಡೆಯುವುದೇ ಅನುಮಾನ ಎನ್ನಲಾಗುತ್ತಿದೆ. ಕಾರಣ ನವರಾತ್ರಿ ಹಬ್ಬ. ಅಕ್ಟೋಬರ್ 15ರಿಂದ ಭಾರತದಲ್ಲಿ ನವರಾತ್ರಿ ಉತ್ಸವ ಆರಂಭವಾಗಲಿದೆ. ನವರಾತ್ರಿ ಹಬ್ಬದ ಮೊದಲ ದಿನವನ್ನು ಗುಜರಾತ್’ನಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಅದೇ ದಿನ ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯ ನಿಗದಿಯಾಗಿದೆ. ಈ ಕಾರಣದಿಂದ ಪಂದ್ಯಕ್ಕೆ ಭದ್ರತೆ ನೀಡುವುದು ಕಷ್ಟವಾಗಲಿದೆ. ಹೀಗಾಗಿ ಪಂದ್ಯದ ವೇಳಾಪಟ್ಟಿಯನ್ನು ಬದಲಾಯಿಸುವಂತೆ ಬಿಸಿಸಿಐಗೆ ಗುಜರಾತ್ ಪೊಲೀಸರು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಡೋ-ಪಾಕ್ ಪಂದ್ಯವನ್ನು ಅಕ್ಟೋಬರ್ 15ರ ಬದಲಾಗಿ ಅಕ್ಟೋಬರ್ 14ರಂದೇ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ.

ಇದನ್ನೂ ಓದಿ : India’s International Home Season 2023-24 : ಭಾರತದ ಬ್ಲಕ್ ಬಸ್ಟರ್ ತವರು ವೇಳಾಪಟ್ಟಿ ಪ್ರಕಟ, 2023-24ರಲ್ಲಿ ಟೀಮ್ ಇಂಡಿಯಾ ಮುಂದೆ ಬಿಗ್ ಚಾಲೆಂಜ್

ಇದನ್ನೂ ಓದಿ : India Vs West Indies ODI : ಭಾರತ Vs ವಿಂಡೀಸ್ ಪ್ರಥಮ ಏಕದಿನ: ಕೆನ್ನಿಂಗ್ಟನ್ ಓವಲ್ ಪಿಚ್ ರಿಪೋರ್ಟ್, ಲೈವ್ ಟೆಲಿಕಾಸ್ಟ್, ಪ್ಲೇಯಿಂಗ್ XI ಡೀಟೇಲ್ಸ್

Comments are closed.