Amaranth fasting Satyagraha : ಮಂಗಳೂರು : ಹಿಂದೂ ವಿರೋಧಿ ನಡೆ ಕೈಬಿಡಲಿ, ಇಲ್ಲವಾದ್ರೆ ಉಪವಾಸ ಸತ್ಯಾಗ್ರಹ ಧರ್ಮಸಭೆಯಲ್ಲಿ ಸ್ವಾಮೀಜಿಗಳ ಎಚ್ಚರಿಕೆ

ಮಂಗಳೂರು : ರಾಜ್ಯ ಸರಕಾರ ಹಿಂದೂ ವಿರೋಧಿ ನಡೆಯನ್ನು ಕೈಬಿಡಬೇಕು, ಇಲ್ಲವಾದ್ರೆ ಸಂತರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ (Amaranth fasting Satyagraha) ಕೈಗೊಳ್ಳಲಾಗುವುದು ಎಂದು ಮಂಗಳೂರಿನಲ್ಲಿ (Mangalore News) ನಡೆದ ಧರ್ಮಸಭೆಯಲ್ಲಿ ಹಿಂದೂ ಸ್ವಾಮೀಜಿಗಳು ರಾಜ್ಯ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.

ರಾಜ್ಯ ಸರಕಾರ ಮತಾಂತರ ನಿಷೇಧ ಕಾಯ್ದೆ ಹಾಗೂ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ವಾಪಾಸ್‌ ಪಡೆಯಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿಂದು ಕರಾವಳಿಯ ಸ್ವಾಮೀಜಿಗಳ ನೇತೃತ್ವದಲ್ಲಿ ಧರ್ಮಸಭೆ ನಡೆಯಿತು. ಗುರುಪುರ, ಮಾಣಿಲ, ಒಡಿಯೂರು, ಕೇಮಾರು ಸ್ವಾಮೀಜಿಗಳು ಧರ್ಮಸಭೆಯಲ್ಲಿ ಪಾಲ್ಗಂಡಿದ್ದರು. ಅಲ್ಲದೇ ವಿಶ್ವಹಿಂದೂ ಪರಿಷತ್‌ ಹಾಗೂ ಭಜರಂಗದಳ ಕಾರ್ಯಕರ್ತರು ಮುಖಂಡರು ಭಾಗಿಯಾಗಿದ್ದರು.

ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಮತಾಂತರ ನಿಷೇಧ ಕಾಯ್ದೆಯನ್ನು ವಾಪಾಸ್‌ ಪಡೆಯವುದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದ್ರೆ ರಾಜ್ಯ ಸರಕಾರ ವಿರುದ್ದ ಅಮರಣಾಂತ ಸತ್ಯಾಗ್ರಹವನ್ನು ಕೈಗೊಳ್ಳಲಾಗುತ್ತದೆ. ಅಲ್ಲದೇ ಈ ಕುರಿತು ಸ್ವಾಮೀಜಿಗಳು ಸುಪ್ರೀಂ ಕೋರ್ಟ್‌ ಕದ ತಟ್ಟುತ್ತೇವೆ ಎಂದು ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : Heavy Rainfall Alert : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಜುಲೈ 10ರ ವರೆಗೆ ಭಾರೀ ಮಳೆ ಸಾಧ್ಯತೆ

ಇದನ್ನೂ ಓದಿ : ಬೈಂದೂರು : ರಸ್ತೆ ಮರ ತೆರವು ಕಾರ್ಯಾಚರಣೆ ; ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಜಸ್ಟ್‌ ಮಿಸ್‌

ರಾಜ್ಯ ಸರಕಾರ ಹಿಂದೂ ಸಂಸ್ಕೃತಿಯ ಮೂಲ ಕೇಂದ್ರಬಿಂದುಗೆ ಕೈ ಹಾಕುವ ಬದಲು, ಮೂಲ ಸೌಕರ್ಯ ಕೊಡುವ ಬಗ್ಗೆ ಆಲೋಚನೆ ಮಾಡಬೇಕು. ಶ್ರದ್ದಾ ಬಿಂದುವಿನ ಮೇಲೆ ಆಕ್ರಮಣ ಮಾಡುವ ಕಾರ್ಯವನ್ನು ಮಾಡಬಾರದು ಎಂದು ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ ತಿಳಿಸಿದ್ದಾರೆ.

Amaranth fasting Satyagraha : Mangalore : Stop anti-Hindu action, or else go on a fast, warn Swamijis in Dharma Sabha

Comments are closed.