Harshika poonacha Bhuvan marriage : ಖ್ಯಾತ ನಟಿ ಹರ್ಷಿಕಾ ಪೂಣಚ್ಚ ಭುವನ್‌ ಮದುವೆ ಡೇಟ್‌ ಫಿಕ್ಸ್‌

ಕನ್ನಡ ಸಿನಿರಂಗದ ನಟಿ ಹರ್ಷಿಕಾ ಪೂರ್ಣಚ್ಚ ಮತ್ತು ಭುವನ್‌ ಹಸೆಮಣೆ (Harshika poonacha Bhuvan marriage) ಏರಲು ಸಿದ್ಧರಾಗಿದ್ದಾರೆ. ನಟಿ ಹರ್ಷಿಕಾ ಪೂರ್ಣಚ್ಚ ಹಾಗೂ ಭುವನ್‌ ಪೊನ್ನಣ್ಣ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಈ ಶ್ರಾವಣದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದಾರೆ. ಆರಂಭದ ದಿನದಿಂದಲೂ ಮದುವೆ ವಿಚಾರವಾಗಿ ತಪ್ಪಿಸಿಕೊಳ್ಳುತ್ತಿದ್ದ ಜೋಡಿ, ಇದೀಗ ಮದುವೆ ಆಮಂತ್ರಣ ನೀಡುವ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ.

ಇತ್ತೀಚೆಗಷ್ಟೇ ಕೊಡಗಿನ ಇಗ್ಗುತ್ತಪ್ಪ ದೇವಾಲಯದಲ್ಲಿ ಈ ಜೋಡಿ ಲಗ್ನಪತ್ರಿಕೆ ಕಾರ್ಯ ಸರಳವಾಗಿ ನಡೆಸಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಎರಡೂ ಕುಟುಂಬದ ಸದಸ್ಯರು ಮತ್ತು ಆತ್ಮೀಯರಷ್ಟೇ ಹಾಜರಿದ್ದರು. ನಟಿ ಹರ್ಷಿಕಾ ಪೂರ್ಣಚ್ಚ ಹಾಗೂ ಭುವನ್‌ ಪೊನ್ನಣ್ಣ ಅವರ ಮದುವೆ ಬರುವ ಆಗಸ್ಟ್‌ 24 ರಂದು ಕೊಡಗಿನಲ್ಲಿ ನಡೆಯಲಿದೆ. ಈ ಜೋಡಿ ಮದುವೆಯಲ್ಲಿ ಆತ್ಮೀಯರು, ಕುಟುಂಬಸ್ಥರು ಸೇರಿದಂತೆ ಸಿನಿಗಣ್ಯರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ : Ram Charan and Upasana : ಮಗಳಿಗೆ ಕ್ಲಿನ್ ಕಾರಾ ಹೆಸರಿಟ್ಟ ನಟ ರಾಮ್ ಚರಣ್‌ – ಉಪಾಸನಾ ಕೊನಿಡೆಲಾ

ಇದನ್ನೂ ಓದಿ : Laughing Buddha Movie : ನಟ ರಿಷಬ್‌ ಶೆಟ್ಟಿ ನಿರ್ಮಾಣದ ಲಾಫಿಂಗ್‌ ಬುದ್ಧ ಸಿನಿಮಾ ಚಿತ್ರೀಕರಣ ಮುಕ್ತಾಯ

ನಟಿ ಹರ್ಷಿಕಾ ಪೂರ್ಣಚ್ಚ ಹಾಗೂ ಭುವನ್‌ ಪೊನ್ನಣ್ಣ ಅವರ ಮದುವೆ ಆಮಂತ್ರಣ ಪತ್ರಿಕೆ ವಿಶೇಷವಾಗಿ ಕೊಡಗು ಭಾಷೆಯಲ್ಲೇ ಮುದ್ರಿಸಲಾಗಿದೆ. ಇನ್ನು ಜೋಡಿಗಳಿಬ್ಬರು ಕೊಡಿಗು ಸಂಪ್ರದಾಯದಂತೆಯೇ ಮದುವೆ ಆಗಲಿದ್ದು, ಮುಹೂರ್ತ ಕಾರ್ಯಗಳು ಬಹುತೇಕವಾಗಿ ಕೊಡಗಿನಲ್ಲಿ ನಡೆಯಲಿದೆ. ಈ ಜೋಡಿಗಳು ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಕರೋನಾ ಮಹಾಮಾರಿಯಂತಹ ಸಮಯದಲ್ಲಿ ಹಲವರಿಗೆ ಸಹಾಯಹಸ್ತ ನೀಡಿದ್ದಾರೆ.

Harshika Poonacha Bhuvan Marriage : Famous Actress Harshika Poonacha Bhuvan Marriage Date Fix

Comments are closed.