Amit Shah to Puttur: ನಾಳೆ ಪುತ್ತೂರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ

ಪುತ್ತೂರು: (Amit Shah to Puttur) ಕೇಂದ್ರ ಗೃಹ ಸಚಿವ ಅಮಿತ್‌ ಶಾ ನಾಳೆ ಪುತ್ತೂರಿಗೆ ಆಗಮಿಸಲಿದ್ದು, ಪುತ್ತೂರಿನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಅಮಿತ್‌ ಶಾ ಭಾಗಿಯಾಗಲಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್‌ ಸದಸ್ಯ ಎನ್‌ ರವಿಕುಮಾರ್‌ ಅಮಿತ್ ಶಾ ಭೇಟಿ ಬಗ್ಗೆ ಮಾಹಿತಿ ನೀಡಿದ್ದು, ಯಾವೆಲ್ಲಾ ಕಾರ್ಯಕ್ರಮಗಳಲ್ಲಿ ಅಮಿತ್‌ ಶಾ ಭಾಗಿಯಾಗಲಿದ್ದಾರೆ ಎಂದು ಈ ಕೆಳಗೆ ತಿಳಿಸಲಾಗಿದೆ.

ಫೆ.11ರಂದು ಏರ್‌ ಪೋರ್ಟ್‌ ನಿಂದ ಬಂದು ಕೆಂಜಾರು ಶ್ರೀದೇವಿ ಕಾಲೇಜಿನಲ್ಲಿ ಕೋರ್‌ ಕಮಿಟಿ ಸಭೆ ನಡೆಯಲಿದ್ದು, ಇದರಲ್ಲಿ ಆರು ಜಿಲ್ಲೆಗಳ ಬಿಜೆಪಿ ಮುಖಂಡರುಗಳು ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಮಧ್ಯಾಹ್ನ ಪುತ್ತೂರು ತಾಲೂಕಿನ ಈಶ್ವರಮಂಗಲದ ಶ್ರೀ ಪಂಚಮುಖಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಲಿದ್ದು, ಬಳಿಕ ಪಂಚಮುಖಿ ಆಂಜನೇಯ ಕ್ಷೇತ್ರದ ಪಕ್ಕದಲ್ಲೇ ಧರ್ಮಶ್ರೀ ಪ್ರತಿಷ್ಠಾನದ ವತಿಯಿಂದ ನಿರ್ಮಿಸಲಾದ ಭಾರತ್ ಮಾತಾ ಮಂದಿರವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಪುತ್ತೂರಿಗೆ ತೆರಳಿ ಸಂಜೆ ವಿವೇಕಾನಂದ ಕಾಲೇಜು ಮೈದಾನದಲ್ಲಿ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಇದಾದ ಬಳಿಕ ಮಂಗಳೂರಿನಲ್ಲಿ ಪೂರ್ವ ನಿಗದಿತ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಇನ್ನೂ ಅಮಿತ್‌ ಶಾ ಅವರ ರೋಡ್‌ ಶೋ ಕಾರ್ಯಕ್ರಮ ಕೂಡ ನಡೆಸಲು ಆಯೋಜನೆ ಮಾಡಲಾಗಿತ್ತು. ಆದರೆ ರೋಡ್‌ ಶೋ ನಡೆಯುವ ಮಾರ್ಗದಲ್ಲಿ ಕೊರಗಜ್ಜ ದೈವದ ಕೋಲವಿದ್ದು, ಭದ್ರತೆಯ ದೃಷ್ಠಿಯಿಂದ ಕೋಲ ನಡೆಸಲು ಸಮಸ್ಯೆಯಾಗಿತ್ತು. ಈ ಹಿನ್ನಲೆಯಲ್ಲಿ ಅಮಿತ್‌ ಶಾ ಅವರ ರೋಡ್‌ ಶೋ ರದ್ದುಪಡಿಸಲಾಗಿದೆ.

ಇದನ್ನೂ ಓದಿ : Amit Shah roadshow cancelled: ಕೊರಗಜ್ಜನ ದೈವ ಕೋಲಕ್ಕಾಗಿ ಮಂಗಳೂರಿನಲ್ಲಿ ಅಮಿತ್‌ ಶಾ ರೋಡ್‌ ಶೋ ರದ್ದು

ಇದನ್ನೂ ಓದಿ : ಪತ್ನಿ ಭವಾನಿಗೆ ಟಿಕೇಟ್ ನೀಡದಿದ್ದರೇ ಎಚ್.ಡಿ.ರೇವಣ್ಣ ಬಂಡಾಯ: ಎಚ್.ಡಿ.ಕುಮಾರಸ್ವಾಮಿ ಮಾದರಿಯಲ್ಲೇ ಎರಡು ಕ್ಷೇತ್ರದಲ್ಲಿ ಸ್ಪರ್ಧೆ

ಇನ್ನೂ ಅಮಿತ್‌ ಶಾ ಕರಾವಳಿಗೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಕೆಲವು ಟೀಕೆಗಳು ವ್ಯಕ್ತವಾಗುತ್ತಿದ್ದು, ಪ್ರಜಾಧ್ವನಿ ಯಾತ್ರಗೆ ಜನತೆಯ ಬೆಂಬಲ ನೋಡ ಬಿಜೆಪಿಗರಿಗೆ ದಿಗ್ಬ್ರಮೆಯಾಗಿದೆ. ಆದ್ದರಿಂದ ಪದೇ ಪದೇ ಪ್ರಧಾನಿ ಮೋದಿ ಹಾಗೂ ಸಚಿವರನ್ನು ಕರೆಸಿಕೊಳ್ಳುತ್ತಿದ್ದಾರೆ ಎಂಬ ಟೀಕೆಯ ಮಾತುಗಳು ಕೂಡ ಕೇಳಿಬರುತ್ತಿದೆ.

Amit Shah to Puttur: Union Home Minister Amit Shah to Puttur tomorrow

Comments are closed.