ಭಾನುವಾರ, ಏಪ್ರಿಲ್ 27, 2025
HomeCoastal Newsಡ್ರಗ್ಸ್ ಲಿಂಕ್ ಕೇಸ್ : ನಿರೂಪಕಿ ಅನುಶ್ರೀ ವಿಚಾರಣೆ ಅಂತ್ಯ : ಸಿಸಿಬಿ ಮುಂದೆ ಹೇಳಿದ್ದೇನು...

ಡ್ರಗ್ಸ್ ಲಿಂಕ್ ಕೇಸ್ : ನಿರೂಪಕಿ ಅನುಶ್ರೀ ವಿಚಾರಣೆ ಅಂತ್ಯ : ಸಿಸಿಬಿ ಮುಂದೆ ಹೇಳಿದ್ದೇನು ಗೊತ್ತಾ ?

- Advertisement -

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ, ನಟಿ ಅನುಶ್ರೀ ಮಂಗಳೂರಿನಲ್ಲಿ ಸಿಸಿಬಿ ಹಾಗೂ ಎನ್ ಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಸುಮಾರು 4 ಗಂಟೆಗಳ ಕಾಲ ವಿಚಾರಣೆಗೆ ಹಾಜರಾಗಿ ಹೊರ ಬಂದ ಅನುಶ್ರೀ ಡ್ರಗ್ಸ್ ನಿಂದ ಸಮಾಜ ಮುಕ್ತವಾಗಲಿ ಎಂದಿದ್ದಾರೆ.

ಪಣಂಬಬೂರಿನಲ್ಲಿರುವ ಎಸಿಪಿ ಕಚೇರಿಯಲ್ಲಿ ನಡೆದ ವಿಚಾರಣೆಯಲ್ಲಿ ಎಸಿಪಿ ವಿನಯ್ ಅವರ ನೇತೃತ್ವದಲ್ಲಿ ವಿಚಾರಣೆಯನ್ನು ನಡೆಸಲಾ ಯಿತು. ಪ್ರಮುಖವಾಗಿ ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿತರಾಗಿರುವ ಕಿಶೋರ್ ಅಮನ್ ಶೆಟ್ಟಿ ಹಾಗೂ ತರುಣ್ ಅವರು ಅನುಶ್ರೀ ಅವರ ಹಸರನ್ನು ಬಾಯ್ಬಿಟ್ಟ ಹಿನ್ನೆಲೆಯಲ್ಲಿ ಈ ವಿಚಾರಣೆಯನ್ನು ನಡೆಸಲಾಗಿದೆ. ವಿಚಾರಣೆಯನ್ನು ಮುಗಿಸಿ ಹೊರಬಂದು ಮಾಧ್ಯಮದವರೊಂದಿಗೆ ಮಾತನಾಡಿದ ಅನುಶ್ರೀ, ಸಿಸಿಬಿ ಪೊಲೀಸರ ಎಲ್ಲಾ ಪ್ರಶ್ನೆಗೆ ಉತ್ತರಿಸಿದ್ದೇನೆ. ಮುಂದೆಯೂ ಸಹಕಾರ ಕೊಡುತ್ತೇನೆ. ನಾನು ಯಾವುದೇ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗವಹಿಸಿಲ್ಲ ಎಂದಿದ್ದಾರೆ.

ಸುಮಾರು 12 ವರ್ಷಗಳ ಹಿಂದೆ ತರಣು್ ಅವರ ಪರಿಚಯವಿದ್ದು, ಕಾರ್ಯಕ್ರಮವೊಂದಕ್ಕೆ ಅವರು ನನಗೆ ಕೋರಿಯಾಗ್ರಾಫರ್ ಆಗಿದ್ದರು. ಆ ನಂತರದಲ್ಲಿ ಅವರ ಡ್ಯಾನ್ಸ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೇನೆ. ಆದರೆ ಕಿಶೋರ್ ಹಾಗೂ ತರುಣ್ ಜೊತೆಗೆ ಯಾವುದೇ ಸಂಬಂಧವನ್ನು ನಾನು ಹೊಂದಿರಲಿಲ್ಲ ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟಿದ್ದೇನೆ ಎಂದರು.

ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ಅನ್ನೋದು ಭೂತದಂತಾಗಿದೆ. ಈ ಕೊಳೆಯನ್ನು ತೆಗೆಯಬೇಕು. ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗಕ್ಕೆ ಉತ್ತಮವಾದ ಗೌರವವಿದೆ. ಅದನ್ನು ಉಳಿಸಿಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ನಾನು ಸಹಕಾರವನ್ನು ನೀಡುತ್ತಿದ್ದೇನೆ.

ಮಾತ್ರವಲ್ಲ ಪೊಲೀಸರು ಆ ನಿಟ್ಟಿನಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಲದೇ ಸ್ಯಾಂಡಲ್ ವುಡ್ ನ ಹಲವು ಮಂದಿಯೂ ಡ್ರಗ್ಸ್ ವಿಚಾರಣೆಗೆ ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದಾರೆ. ಸಿಸಿಬಿ ಅಧಿಕಾರಿಗಳು ಮತ್ತೆ ಬರುವಂತೆ ಸೂಚನೆಯನ್ನು ನೀಡಿಲ್ಲ. ಒಂದೊಮ್ಮೆ ಅವರು ಕರೆದರೆ ತಾನು ವಿಚಾರಣೆಗೆ ಹಾಜರಾಗುತ್ತೇನೆ ಎಂದಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular