Azan Controversy: ಮದರ್‌ ಥೆರೆಸಾ ಶಾಲೆಯಲ್ಲಿ ಮೊಳಗಿದ ಆಝಾನ್‌; ಹಿಂದೂಪರ ಸಂಘಟನೆಗಳಿಂದ ಆಕ್ರೋಶ

ಕುಂದಾಪುರ: (Azan Controversy) ಕುಂದಾಪುರ ತಾಲೂಕಿನ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಂದ ಆಝಾನ್‌ ಗೆ ನೃತ್ಯ ಮಾಡಿದ್ದಕ್ಕಾಗಿ ಹಿಂದೂಪರ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದ್ದು, ಹಿಂದೂ ವಿದ್ಯಾರ್ಥಿಗಳ ಮೇಲೆ ಒತ್ತಾಯಪೂರ್ವಕವಾಗಿ ಇಸ್ಲಾಂ ಆಚರಣೆಗಳನ್ನು ಹೇರಿಕೆ ಮಾಡುವ ಷಡ್ಯಂತ್ರದ ವಿರುದ್ದ ಹಿಂದೂ ಪರ ಸಂಘಟನೆಗಳಿಂದ ಇಂದು ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ.

ಶಂಕರನಾರಾಯಾಣ ಮದರ್‌ ಥೆರೆಸಾ ಮೆಮೋರಿಯಲ್‌ ಶಾಲೆಯಲ್ಲಿ ನಿನ್ನೆಯ ದಿನ ನಡೆದ ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಈ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಮಾಡಿದ ಸ್ವಾಗತ ನೃತ್ಯ(Azan Controversy) ಭಾರೀ ಚರ್ಚೆಗೆ ಎಡವು ಮಾಡಿಕೊಟ್ಟಿತು. ಸ್ವಾಗತ ನೃತ್ಯದಲ್ಲಿ ಹಿಂದೂ, ಕ್ರೈಸ್ತ ಹಾಗೂ ಇಸ್ಲಾಂ ಧರ್ಮದ ಹಾಡುಗಳಿಗೆ ಹಿಂದೂ ವಿದ್ಯಾರ್ಥಿನಿಯರಿಂದ ನೃತ್ಯ ನಡೆದಿದ್ದು, ಇದರಲ್ಲಿ ಆಝಾನ್‌ ಗೆ ವಿದ್ಯಾರ್ಥಿಗಳಿಂದ ನೃತ್ಯವನ್ನು ಮಾಡಿಸಿದ್ದರು. ಈ ರೀತಿಯಾಗಿ ಹಿಂದೂ ವಿದ್ಯಾರ್ಥಿನಿಯರಿಂದ ಒತ್ತಾಯಪೂರ್ವಕವಾಗಿ ನೃತ್ಯ ಮಾಡಿಸಿದ್ದಕ್ಕಾಗಿ ಸ್ಥಳದಲ್ಲೇ ಆಕ್ಷೇಪಗಳು ವ್ಯಕ್ತವಾಗಿದ್ದು, ವೇದಿಕೆಯ ಮೇಲಿದ್ದ ಬಿಜೆಪಿ ಮುಖಂಡ ಉಮೇಶ್‌ ಶೆಟ್ಟಿ ಖಂಡನೆ ಮಾಡಿದ್ದರು.

ಈ ಕಾರ್ಯಕ್ರಮಕ್ಕೆ ಶಾಲೆ ಮಾತ್ರವಲ್ಲ ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳೆಲ್ಲರೂ ಹೊಣೆಗಾರರು. ಇದು ಬರೀ ಶಾಲೆಯಿಂದ ನಡೆದ ಕ್ರೀಡಾಕೂಟವಲ್ಲ ಬದಲಾಗಿ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಕ್ರೀಡಾಕೂಟವಾಗಿದ್ದು, ಕ್ರೀಡಾಕೂಟದಲ್ಲಿ ನಡೆಯುವ ಎಲ್ಲಾ ಕಾರ್ಯಚಟುವಟಿಕೆಗಳನ್ನು ಮುಂಚಿತವಾಗಿಯೇ ಶಿಕ್ಷಣ ಇಲಾಖೆಯ ಗಮನಕ್ಕೆ ತರುವುದು ನಿಯಮ. ಆದರೆ ಶಿಕ್ಷಣ ಇಲಾಖೆಯೂ ಇದರ ಬಗ್ಗೆ ಗಮನ ಹರಿಸದೇ ಧರ್ಮಸಂಘರ್ಷಣೆಗೆ ಅನುವು ಮಾಡಿಕೊಟ್ಟಿರುವುದು ಎಲ್ಲರ ಆಕ್ರೋಷಕ್ಕೆ ಕಾರಣವಾಗಿದೆ. ಅಧಿಕಾರಿಗಳ ನಿರ್ಲಕ್ಷವೇ ಇದಕ್ಕೆ ಕಾರಣವಾಗಿದ್ದು, ಮದರ್‌ ಥೆರೆಸಾ ಶಾಲೆ ಅಲ್ಲದೇ ಶಿಕ್ಷಣ ಇಲಾಖೆಯೂ ನೇರ ಹೊಣೆಯಾಗಿದೆ.

ಹಿಂದೂ ವಿದ್ಯಾರ್ಥಿಗಳ ಮೇಲೆ ಒತ್ತಾಯಪೂರ್ವಕವಾಗಿ ಇಸ್ಲಾಂ ಆಚರಣೆಗಳನ್ನು ಹೇರಿಕೆ ಮಾಡುವ ಮೂಲಕ ಹಿಂದೂ ಧರ್ಮಕ್ಕೆ ಅವಮಾನವನ್ನು ಮಾಡಿರುವುದಾಗಿ, ಹಿಂದೂಗಳ ಭಾವನೆಗಳಿಗೆ ದಕ್ಕೆ ಉಂಟುಮಾಡಿರುವ ಕುರಿತಾಗಿ ಶಂಕರನಾರಾಯಣ ಘಟಕದ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ ನಡೆಸಲು ಸಜ್ಜಾಗಿದ್ದು, ಇಂದು ಬೆಳಿಗ್ಗೆ ಸರಕಾರಿ ಪದವಿ ಪೂರ್ವ ಕಾಲೇಜು ವಠಾರ ಶಂಕರನಾರಾಯಣದಲ್ಲಿ ಪ್ರತಿಭಟನೆ ಆರಂಭವಾಗಿದೆ.

Dolon

ಮುಸ್ಲೀಮರು ನೆಲೆಯಾಗಲು ಬೇಕು ಕಲ್ಲುಕುಟಿಗನ ಅಪ್ಪಣೆ

ಹಿಂದೂ ಧರ್ಮದವರನ್ನು ಬಿಟ್ಟರೇ ಮುಸ್ಲೀಂ, ಇಸ್ಲಾಂ ಧರ್ಮದವರಿಗೆ ನೆಲೆಯಾಗಲು ಶಂಕರನಾರಾಯಣ ಗ್ರಾಮದಲ್ಲಿ ಅವಕಾಶವಿಲ್ಲ. ಅನಿವಾರ್ಯ ಪರಿಸ್ಥಿತಿಯಲ್ಲಿ ಈ ಗ್ರಾಮದಲ್ಲಿ ನೆಲೆಯಾಗಬೇಕೆಂದರೆ ಅಲ್ಲಿನ ಗ್ರಾಮವನ್ನು ಕಾಯುವ ದೈವ ಕಲ್ಲುಕುಟಿಗನ ಅಪ್ಪಣೆಯನ್ನು ಪಡೆಯಬೇಕು. ಮುಸ್ಲಿಮರು ನೆಲೆಯಾಗಲೂ ಕಲ್ಪನೆಯಲ್ಲೂ ಊಹಿಸದ ಊರಿನ ಒಂದು ಖಾಸಗಿ ಶಾಲೆಯಲ್ಲಿ ಮೊದಲ ಬಾರಿಗೆ ಆಝಾನ್‌ ಶಬ್ಧ ಕೇಳಿ ಬಂದಿದ್ದು, ಗ್ರಾಮಸ್ಥರು ಹಾಗೂ ಹಿಂದೂಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಹಿಂದಿನಿಂದಲೂ ಕೂಡ ಶಂಕರನಾರಾಯಣ ಮದರ್‌ ಥೆರೆಸಾ ಶಾಲೆಯಲ್ಲಿ ಹಿಂದೂಪರ ಚಟುವಟಿಕೆಗಳಿಗೆ ಅವಕಾಶವಿಲ್ಲ. ಇದರ ಕುರಿತಾಗಿ ಮುಂಚಿತವಾಗಿಯೂ ಹಿಂದೂ ಸಂಘಟನೆಗಳು ಎಚ್ಚರಿಕೆಯನ್ನು ನೀಡಿದ್ದರು. ಅಲ್ಲದೇ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿನಿಯರು ಹಣೆಗೆ ಕುಂಕುಮವನ್ನು ಇಡುವಂತಿಲ್ಲ, ತಲೆಗೆ ಹೂವು ಮುಡಿಯುವಂತಿಲ್ಲ, ಕೈಗೆ ಬಳೆ ತೊಡುವಂತಿಲ್ಲ ಎಂದು ಸಾರ್ವಜನಿಕವಾಗಿ ದೂರು ಕೇಳಿಬರುತ್ತಿದೆ. ಈ ರೀತಿಯ ನಿಯಮಗಳು ಹಿಂದೂಗಳ ಸಂಸ್ಕ್ರತಿಗೆ ದಕ್ಕೆಯುಂಟುಮಾಡುತ್ತಿವೆ. ಇವಷ್ಟೇ ಅಲ್ಲದೇ ಶಾಲೆಯಲ್ಲಿ ಈ ಹಿಂದೆ ಕಾರ್ಯಕ್ರಮವೊಂದರ ಮೆರವಣಿಗೆಯಲ್ಲಿ ರಾಷ್ಟ್ರ ದ್ವಜದ ಜೊತೆಗೆ ನೀಲಿ ಬಾವುಟವನ್ನು ಹಿಡಿದು ಮೆರವಣಿಗೆ ನಡೆಸಿರುವುದು ಹಲವು ಆಕ್ರೋಶಕ್ಕೆ ಕಾರಣವಾಗಿತ್ತು. ಈಗಾಗಲೇ ಹಿಜಾಬ್‌ ವಿರೋಧಿ ಸಂಘರ್ಷಗಳು ಕೊನೆಗೊಳ್ಳುತ್ತಿವೆ ಎನ್ನುವ ಹೊತ್ತಿನಲ್ಲೇ ಈ ಘಟನೆ ನಡೆದಿದ್ದು, ಹಿಂದೂಗಳು ಹಾಗೂ ಸ್ಥಳೀಯರು ಇದನ್ನು ಆಕ್ಷೇಪಿಸಿ ಪ್ರತಿಭಟಿಸಲು ಮುಂದಾಗಿದ್ದಾರೆ.

Azan Controversy: ಘಟನೆ ಕುರಿತಾಗಿ ಪೋಷಕರು ಹಾಗೂ ಸ್ಥಳೀಯರಿಂದ ಆಕ್ರೋಶ

“ಈ ಶಾಲೆಗೆ ಮಕ್ಕಳನ್ನು ಕಳಿಸುವುದರಿಂದ ನಾಳೆ ನಮ್ಮ ಮಕ್ಕಳು ಹಿಂದೂಗಳಾಗಿ ಉಳಿಯುವುದಿಲ್ಲ. ಇದಕ್ಕೆ ಇವತ್ತಿನ ಆಝಾನ್‌ ಘಟನೆಯೆ ಸಾಕ್ಷಿ. ಮಕ್ಕಳಿಗೇ ಈ ರೀತಿಯಾಗಿ ಹಲವು ದಿನಗಳ ತಯಾರಿ ನೀಡಿರಬಹುದು ಎಂದಾದರೆ ಆ ಶಾಲೆಯಲ್ಲಿ ಮಕ್ಕಳು ಯಾವ ದರ್ಮದ ಬಗ್ಗೆ ಅಭ್ಯಾಸ ಮಾಡಬಹುದು ಎಂದು ಆಲೋಚಿಸಿ.. ಅಲ್ಲಿ ಹಣೆಗೆ ಕುಂಕುಮ ಇಟ್ಟು ಹೋಗುವ ಅವಕಾಶ ಹಿಂದೂ ಹೆಣ್ಣು ಮಕ್ಕಳಿಗಿಲ್ಲ ಎಂದಾದರೆ ನಾವು ಆ ಶಾಲೆಗೆ ಮಕ್ಕಳನ್ನು ಕಳುಹಿಸಬೇಕೆ” ಎಂದು ಪೋಷಕರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಆಜಾನ್‌ಗೆ ವಿದ್ಯಾರ್ಥಿನಿಯರು ನೃತ್ಯ ಮಾಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.ಇದಕ್ಕೆ ಸ್ಥಳೀಯ ಹಿಂದೂ ಪರ ಸಂಘಟನೆಗಳ ಖಂಡಿಸಿದ್ದು, ಶಾಲಾ ಆಡಳಿತ ಮಂಡಳಿ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದರು. ಕ್ಷಮೆ ಯಾಚಿಸದಿದ್ದರೆ ಪ್ರತಿಭಟಿಸುವ ಎಚ್ಚರಿಕೆ ನೀಡಿದರು. ಕೆಲಕಾಲ ಚರ್ಚೆ ನಡೆದು, ಶಾಲಾ ಆಡಳಿತ ಮಂಡಳಿ ವಿಷಾದ ವ್ಯಕ್ತಪಡಿಸಿದೆ.

ಇದನ್ನೂ ಓದಿ : Young Artist Vignesh R.G: ಇಂಟರ್‌ ನ್ಯಾಷನಲ್‌ ಆರ್ಟ್ ಐಕಾನ್‌; ಟಾಪ್‌ 100 ವಿಜೇತ ಸ್ಪರ್ಧಿಗಳಲ್ಲಿ ಉಡುಪಿಯ ವಿಘ್ನೇಶ್‌

ಇದನ್ನೂ ಓದಿ : Chithrapady Children Santhe : ಮಕ್ಕಳ ದಿನಾಚರಣೆ : ಚಿತ್ರಪಾಡಿ ಶಾಲೆಯಲ್ಲಿ ಗಮನ ಸೆಳೆದ ಮಕ್ಕಳ ಸಂತೆ

ಸ್ವಾಗತ ನೃತ್ಯದಲ್ಲಿ 30 ಸೆಕೆಂಡ್ ಆಜಾನ್‌ಗೆ ವಿದ್ಯಾರ್ಥಿಗಳು ನೃತ್ಯ ಮಾಡಿದ್ದರು, ಆಮೇಲೆ ಕ್ರೈಸ್ತ ಧರ್ಮದ ಬೈಬಲ್‌ ಮತ್ತು ಶ್ಲೋಕಕ್ಕೆ ಹೆಜ್ಜೆ ಹಾಕಿದ್ದರು. ಹಿಂದೂ ಧಾರ್ಮಿಕ ಪದ್ಯಕ್ಕೂ ವಿದ್ಯಾರ್ಥಿಗಳು ಕುಣಿದಿದ್ದು, ಆಝಾನ್‌ ಗೆ ಹೆಜ್ಜೆ ಹಾಕಿದ್ದರು. ಯಾರದ್ದೂ ಭಾವನೆಯನ್ನು ಘಾಸಿಗೊಳಿಸುವ ಉದ್ದೇಶ ನಮ್ಮದಾಗಿರಲಿಲ್ಲ. ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗಿದ್ದರೆ ಕ್ಷಮೆಯಾಚಿಸುತ್ತೇವೆ ಎಂದು ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರು ವಿಷಾದ ವ್ಯಕ್ತಪಡಿಸಿದರು.

(Azan Controversy) In a private school in Kundapur taluk, pro-Hindu organizations protested against the conspiracy to forcefully impose Islamic practices on Hindu students after students danced to Azan.

Comments are closed.