RCB releases Karnataka stars : ಇಬ್ಬರೂ ಕನ್ನಡಿಗರನ್ನು ಕೈಬಿಟ್ಟ RCB, ಕರ್ನಾಟಕದ ಆಟಗಾರರ ಮೇಲೆ ಐಪಿಎಲ್ ಫ್ರಾಂಚೈಸಿಗಳ ನಿರಾಸಕ್ತಿ

ಬೆಂಗಳೂರು : ಐಪಿಎಲ್ ಆಟಗಾರರ ರೀಟೇನ್ ಹಾಗೂ ರಿಲೀಸ್ ಪ್ರಕ್ರಿಯೆ ಅಂತ್ಯಗೊಂಡಿದ್ದು, (RCB releases Karnataka stars) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಕರ್ನಾಟಕ ಇಬ್ಬರು ಆಟಗಾರರನ್ನು ತಂಡ ರಿಲೀಸ್ ಮಾಡಿದೆ.ಕರ್ನಾಟಕ ಯುವ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಲವ್ನೀತ್ ಸಿಸೋಡಿಯಾ (Lavneeth Sisodia) ಮತ್ತು ಅಂಡರ್-19 ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯ ಅನೀಶ್ವರ್ ಗೌತಮ್ (Aneeshwar Gautam) ಕಳೆದ ಬಾರಿ ರಾಯಲ್ ಚಾಲೆಂಜರ್ಸ್ ತಂಡದಲ್ಲಿದ್ದರು.

ಆದರೆ ಮುಂದಿನ ಆವೃತ್ತಿಯ ಐಪಿಎಲ್’ಗೆ ಇಬ್ಬರೂ ಆಟಗಾರರನ್ನು RCB ಫ್ರಾಂಚೈಸಿ ಕೈಬಿಟ್ಟಿದೆ. ಮತ್ತೊಂದೆಡೆ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಕೂಡ ಕರ್ನಾಟಕದ ಮೂವರು ಆಟಗಾರರನ್ನು ತಂಡದಿಂದ ರಿಲೀಸ್ ಮಾಡಿದೆ. ಎಡಗೈ ಸ್ಪಿನ್ ಆಲ್ರೌಂಡರ್ ಜೆ.ಸುಚಿತ್ (J.Suchit), ಲೆಗ್ ಸ್ಪಿನ್ ಆಲ್ರೌಂಡರ್ ಶ್ರೇಯಸ್ ಗೋಪಾಲ್ (Shreyas Gopal) ಮತ್ತು ಅಗ್ರಕ್ರಮಾಂಕದ ಬ್ಯಾಟ್ಸ್’ಮನ್ ಆರ್.ಸಮರ್ಥ್ (R.Samarth) ಅವರನ್ನು ಸನ್ ರೈಸರ್ಸ್ ಹೈದರಾಬಾದ್ ರಿಲೀಸ್ ಮಾಡಿದೆ.

ಇನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದ ಕರ್ನಾಟಕದ ಮತ್ತೊಬ್ಬ ಸ್ಟಾರ್ ಆಟಗಾರ ಮನೀಶ್ ಪಾಂಡೆ (Manish Pandey) ಅವರನ್ನು ತಂಡದಿಂದ ಕೈ ಬಿಟ್ಟಿದೆ.
ರಾಜಸ್ಥಾನ್ ರಾಯಲ್ಸ್ ಮಾತ್ರ ತಂಡದಲ್ಲಿದ್ದ ಕರ್ನಾಟಕದ ನಾಲ್ವರು ಆಟಗಾರರ ಪೈಕಿ ಮೂವರನ್ನು ಉಳಿಸಿಕೊಂಡಿದೆ. ದೇವದತ್ ಪಡಿಕ್ಕಲ್ (Devdutt Padikkal), ಪ್ರಸಿದ್ಧ್ ಕೃಷ್ಣ (Prasidh Krishna) ಮತ್ತು ಕೆ.ಸಿ ಕಾರಿಯಪ್ಪ (K.C Cariyappa) ಅವರನ್ನು ಉಳಿಸಿಕೊಂಡಿರುವ ರಾಯಲ್ಸ್ ಪಡೆ, ಕರುಣ್ ನಾಯರ್ ಅವರನ್ನು ರಿಲೀಸ್ ಮಾಡಿದೆ.

ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದ ಮಯಾಂಕ್ ಅಗರ್ವಾಲ್ (Mayank Agarwal) ಅವರನ್ನು ಪಂಜಾಬ್ ಫ್ರಾಂಚೈಸಿ ರಿಲೀಸ್ ಮಾಡಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್ ರಾಹುಲ್ (KL Rahul) ಅವರನ್ನು ಲಕ್ನೋ ಫ್ರಾಂಚೈಸಿ ರೀಟೇನ್ ಮಾಡಿದ್ದು, ಕರ್ನಾಟಕದ ಮತ್ತೊಬ್ಬ ಸ್ಟಾರ್ ಕೆ.ಗೌತಮ್ (Krishnappa Gowtham) ಅವರನ್ನೂ ತಂಡದಲ್ಲೇ ಉಳಿಸಿಕೊಂಡಿದೆ.

ಗುಜರಾತ್ ಟೈಟನ್ಸ್ ತಂಡ ಕರ್ನಾಟಕದ ಸ್ಫೋಟಕ ದಾಂಡಿಗ ಅಭಿನವ್ ಮನೋಹರ್ (Abhinav Manohar) ಅವರನ್ನು ರೀಟೇನ್ ಮಾಡಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಜ್ಯದ ಮತ್ತೊಬ್ಬ ಆಟಗಾರ ಪ್ರವೀಣ್ ದುಬೆ (Praveen Deubey) ಅವರನ್ನು ತಂಡದಲ್ಲೇ ಉಳಿಸಿಕೊಂಡಿದೆ.

ಐಪಿಎಲ್-2023: ರೀಟೇನ್ ಆದ ಕರ್ನಾಟಕದ ಆಟಗಾರರು :
ಕೆ.ಎಲ್ ರಾಹುಲ್, ಕೆ.ಗೌತಮ್ (ಲಕ್ನೋ ಸೂಪರ್ ಜೈಂಟ್ಸ್)
ಪ್ರಸಿದ್ಧ್ ಕೃಷ್ಣ, ದೇವದತ್ತ್ ಪಡಿಕ್ಕಲ್, ಕೆ.ಸಿ ಕಾರಿಯಪ್ಪ (ರಾಜಸ್ಥಾನ ರಾಯಲ್ಸ್)
ಅಭಿನವ್ ಮನೋಹರ್ (ಗುಜರಾತ್ ಟೈಟನ್ಸ್)
ಪ್ರವೀಣ್ ದುಬೆ (ಡೆಲ್ಲಿ ಕ್ಯಾಪಿಟಲ್ಸ್)

ಇದನ್ನೂ ಓದಿ : IPL 2023 Retention : ಎಲ್ಲಾ 10 ತಂಡಗಳ ರಿಟೇಲ್, ರಿಲೀಸ್ ಆಟಗಾರರ ಕಂಪ್ಲೀಟ್ ಡೀಟೇಲ್ಸ್

ಇದನ್ನೂ ಓದಿ : Vijay Hazare Trophy: ಕೌಶಿಕ್ , ಕಾವೇರಪ್ಪ ಬೆಂಕಿ ಬೌಲಿಂಗ್; ಕರ್ನಾಟಕಕ್ಕೆ ಹ್ಯಾಟ್ರಿಕ್ ಜಯ

ಇದನ್ನೂ ಓದಿ : Kieron Pollard Mumbai Indians : ಮುಂಬೈ ಇಂಡಿಯನ್ಸ್ ಬಿಡಲೊಪ್ಪದ ಪೊಲ್ಲಾರ್ಡ್’ಗೆ ಅಂಬಾನಿ ಭರ್ಜರಿ ಗಿಫ್ಟ್

ಇದನ್ನೂ ಓದಿ : ಐಪಿಎಲ್ ಗೆ ನಿವೃತ್ತಿ ಘೋಷಿಸಿದ ಕೀರನ್ ಪೊಲಾರ್ಡ್ : ಮುಂಬೈ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕ

ಐಪಿಎಲ್-2023: ರಿಲೀಸ್ ಆದ ಕರ್ನಾಟಕದ ಆಟಗಾರರು :
ಮಯಾಂಕ್ ಅಗರ್ವಾಲ್ (ಪಂಜಾಬ್ ಕಿಂಗ್ಸ್)
ಮನೀಶ್ ಪಾಂಡೆ (ಲಕ್ನೋ ಸೂಪರ್ ಜೈಂಟ್ಸ್)
ಶ್ರೇಯಸ್ ಗೋಪಾಲ್, ಜೆ.ಸುಚಿತ್, ಆರ್.ಸಮರ್ಥ್ (ಸನ್’ರೈಸರ್ಸ್ ಹೈದರಾಬಾದ್)
ಕರುಣ್ ನಾಯರ್ (ರಾಜಸ್ಥಾನ ರಾಯಲ್ಸ್)
ರಾಬಿನ್ ಉತ್ತಪ್ಪ (ಚೆನ್ನೈ ಸೂಪರ್ ಕಿಂಗ್ಸ್)

RCB releases Karnataka stars : IPL franchises’ disinterest in RCB, Karnataka players who drop both Kannadigas

Comments are closed.