ದಕ್ಷಿಣ ಕನ್ನಡ : B.Y Vijayendra : ಕಡಲ ನಗರಿಯನ್ನೇ ಬೆಚ್ಚಿ ಬೀಳಿಸಿರುವ ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಸದಸ್ಯ ಹಾಗೂ ಭಜರಂಗದಳ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಸಾವು ಪ್ರಕರಣ ಬಿಜೆಪಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ. ಸುಳ್ಯ ತಾಲೂಕು ನೆಟ್ಟಾರುವಿನಲ್ಲಿರುವ ಪ್ರವೀಣ್ ನಿವಾಸಕ್ಕೆ ಇಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಇಂದು ಭೇಟಿ ನೀಡಿದ್ದಾರೆ.
ನೆಟ್ಟಾರುವಿನಲ್ಲಿರುವ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಭೇಟಿ ನೀಡಿದ ಬಿ.ವೈ ವಿಜಯೇಂದ್ರ ಪ್ರವೀಣ್ ಪತ್ನಿ ಹಾಗೂ ಪೋಷಕರಿಗೆ ಸಾಂತ್ವನ ಹೇಳಿದರು. ಪ್ರವೀಣ್ ನೆಟ್ಟಾರು ನಿವಾಸಕ್ಕೆ ಭೇಟಿ ನೀಡುವ ಮುನ್ನ ಮಾತನಾಡಿದ ಬಿ.ವೈ ವಿಜಯೇಂದ್ರ ನಾನೊಬ್ಬ ಸಾಮಾನ್ಯ ಪ್ರಜೆಯಾಗಿ ಹೇಳಬೇಕು ಅಂದರೆ ಪ್ರವೀಣ್ ಮನೆಗೆ ಬಂದ ಸ್ಥಿತಿ ಯಾರಿಗೂ ಬರಬಾರದು. ಪ್ರವೀಣ್ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಅವರ ಮನೆಯಲ್ಲಿ ಈಗ ದೀಪ ಹಚ್ಚುವವರೇ ಯಾರಿಲ್ಲ ಎಂಬಂತಾಗಿದೆ. ನಾನೊಬ್ಬ ಪಕ್ಷದ ಕಾರ್ಯಕರ್ತನಾಗಿ ಪ್ರವೀಣ್ ನಿವಾಸಕ್ಕೆ ಭೇಟಿ ನೀಡುತ್ತಿದ್ದ ಅವರಿಗೆ ಸಾಂತ್ವನ ಹೇಳಲಿದ್ದೇನೆ ಎಂದಿದ್ದರು.
ಇದೇ ವೇಳೆ ಹಿಂದೂ ಕಾರ್ಯಕರ್ತರ ರಾಜೀನಾಮೆ ವಿಚಾರವಾಗಿಯೂ ಮಾತನಾಡಿದ ಬಿ.ವೈ ವಿಜಯೇಂದ್ರ, ಇಂತಹ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರ ಆಕ್ರೋಶ ಸಹಜ. ಕಾರ್ಯಕರ್ತನೊಬ್ಬ ಈ ರೀತಿ ದುರಂತ ಅಂತ್ಯವನ್ನು ಕಂಡಾಗ ಉಳಿದವರು ಈ ರೀತಿ ಆಕ್ರೋಶ ಹೊರ ಹಾಕುವುದು ಸಹಜ. ನನಗೂ ಇವರೆಲ್ಲರ ಆಕ್ರೋಶ, ನೋವು ಅರ್ಥವಾಗುತ್ತೆ ಎಂದು ಹೇಳಿದರು.
ಇನ್ನು ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಮಂಗಳೂರು ಏರ್ಪೋರ್ಟ್ನಲ್ಲಿ ಬಂದಿಳಿದಿದ್ದು ಇಲ್ಲಿಂದ ನೇರವಾಗಿ ನೆಟ್ಟಾರುವಿನಲ್ಲಿರುವ ಪ್ರವೀಣ್ ನಿವಾಸಕ್ಕೆ ತೆರಳಲಿದ್ದಾರೆ. ರಸ್ತೆ ಮಾರ್ಗದ ಮೂಲಕವೇ ಸಿಎಂ ನೆಟ್ಟಾರುವಿಗೆ ಪ್ರಯಾಣ ಬೆಳೆಸಲಿದ್ದಾರೆ.
ಇದನ್ನು ಓದಿ : CM Basavaraja Bommai : ಪ್ರವೀಣ್ ನೆಟ್ಟಾರು ನಿವಾಸಕ್ಕೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಭೇಟಿ
ಇದನ್ನೂ ಓದಿ : CT Ravi : ಪಿಎಫ್ಐ ಸಂಘಟನೆ ಬ್ಯಾನ್ ಮಾಡ್ತೇವೆ, ಯಾರೂ ಸಮೂಹ ಸನ್ನಿಗೆ ಒಳಗಾಗದಿರಿ : ಕಾರ್ಯಕರ್ತರಲ್ಲಿ ಸಿ.ಟಿ ರವಿ ಮನವಿ
B.Y Vijayendra visit to Praveen Nettaru residence