CT Ravi : ಪಿಎಫ್​​ಐ ಸಂಘಟನೆ ಬ್ಯಾನ್​ ಮಾಡ್ತೇವೆ, ಯಾರೂ ಸಮೂಹ ಸನ್ನಿಗೆ ಒಳಗಾಗದಿರಿ : ಕಾರ್ಯಕರ್ತರಲ್ಲಿ ಸಿ.ಟಿ ರವಿ ಮನವಿ

ಬೆಂಗಳೂರು : CT Ravi : ಕೋಮು ಸಂಘರ್ಷ ಹೆಚ್ಚಲು ಕಾರಣವಾಗುತ್ತಿರುವ ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾ ಸಂಘಟನೆಯನ್ನು ನಿಷೇಧ ಮಾಡುವ ಬಗ್ಗೆ ಸಮಾಲೋಚನೆ ನಡೆಸಲಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ. ಯಾರೂ ಸಮೂಹ ಸನ್ನಿಗೆ ಒಳಗಾಗಬೇಡಿ. ನಮ್ಮನ್ನು ನಂಬದೇ ಹಿಂದೂಗಳು ಕಾಂಗ್ರೆಸ್ಸಿಗರನ್ನು ನಂಬಲು ಸಾಧ್ಯವೇ..? ಎಂದು ಹೇಳುವ ಮೂಲಕ ಮತ್ತೊಮ್ಮೆ ಹಿಂದೂ ಯುವಕರ ವಿಶ್ವಾಸ ಗಳಿಸಿಕೊಳ್ಳಲು ಯತ್ನಿಸಿದ್ದಾರೆ.


ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದಲ್ಲಿ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ 15ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ನಮಗೂ ನಮ್ಮ ಕಾರ್ಯಕರ್ತ ಸಾವನ್ನಪ್ಪಿದ್ದರ ಬಗ್ಗೆ ಅತೀವ ದುಃಖವಿದೆ. ನೀವು ಈ ರೀತಿ ಮಾಡಿದರೆ ಇದರ ಲಾಭವನ್ನು ಹಿಂದೂ ವಿರೋಧಿಗಳು ಪಡೆದುಕೊಳ್ಳುತ್ತಾರೆ. ಈ ಹಿಂದೆ ದೇಶವನ್ನು ಹೆದರಿಸಿಯೇ ಕಾಶ್ಮೀರಿ ಪಂಡಿತರನ್ನು ಹತ್ಯೆ ಮಾಡಲಾಗಿತ್ತು. ಹೀಗಾಗಿ ಯಾರೂ ಸಮೂಹ ಸನ್ನಿಗೆ ಒಳಾಗಬೇಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.


ದೇಶದಲ್ಲಿ ಕೋಮು ಸೌಹಾರ್ದವನ್ನು ಕದಡಲು ಕಾರಣವಾಗುತ್ತಿರುವ ಪಾಪ್ಯೂಲರ್​ ಫ್ರಂಡ್​ ಆಫ್​ ಇಂಡಿಯಾವನ್ನು ಬ್ಯಾನ್​ ಮಾಡುವ ಬಗ್ಗೆ ಸಮಾಲೋಚನೆ ನಡೆಸಲಿದ್ದೇವೆ. ಸಿಎಂ ಕೂಡ ಈ ವಿಚಾರವಾಗಿ ದಿಟ್ಟ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ನಮ್ಮ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳಬೇಡಿ. ಗೋ ಮಾಂಸ ಹತ್ಯೆಯನ್ನು ಬೆಂಬಲಿಸುವವರು ಅಧಿಕಾರಕ್ಕೆ ಬರುವುದು ಬೇಕೆ..? ಎಂದು ಪ್ರಶ್ನೆ ಮಾಡಿದ್ದಾರೆ.


ಒಂದು ಕಾಲದಲ್ಲಿ ನಾವು ಕೂಡ ಇದೇ ರೀತಿ ಬೀದಿಯಲ್ಲಿ ಹೋರಾಟ ಮಾಡಿದವರೇ. ನಾನೂ ಕೂಡ ಬಿಜೆಪಿ ಪಕ್ಷದ ಬಾವುಟ ಕಟ್ಟಿದ್ದೇನೆ. ಇಂದು ನಾನು ಅಧಿಕಾರದಲ್ಲಿರಬಹುದು. ಆದರೆ ಹಿಂದೊಮ್ಮೆ ಗೋಲಿಬಾರ್​ ಆಗಿದ್ದ ಸಂದರ್ಭದಲ್ಲಿ ನಾನು ಬದುಕಿ ಬಂದಿದ್ದೇ ಹೆಚ್ಚು. ಸಾಮಾನ್ಯ ಜನತೆಯನ್ನೂ ನಾಯಕನನ್ನಾಗಿ ಮಾಡುವುದು ಕೇವಲ ಬಿಜೆಪಿ ಮಾತ್ರ. ಕಾರ್ಯಕರ್ತರ ಭಾವನೆಗಳಿಗೆ ನಾವು ಎಂದಿಗೂ ಬದ್ಧರಾಗಿ ಇರಲಿದ್ದೇವೆ ಎಂದು ಹೇಳಿದರು.
ಆರೋಪಿಗಳ ಮೇಲೆ ಬುಲ್ಡೋಜರ್​ ಹರಿಸಬೇಕು. ಅವರನ್ನು ನಡುರಸ್ತೆಯಲ್ಲಿ ಎನ್​​ಕೌಂಟರ್​ ಮಾಡಬೇಕು ಎಂಬುದೆಲ್ಲ ನಿಮ್ಮ ಬಯಕೆಯಾಗಿದ್ದಾರೆ. ನಿಮ್ಮ ಆ ಎಲ್ಲಾ ಭಾವನೆಗಳ ಜೊತೆಯಲ್ಲಿ ನಾವು ಇರಲಿದ್ದೇವೆ. ಇದಕ್ಕೆ ನಮ್ಮಿಂದ ಯಾವುದೇ ವಿರೋಧವಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ : Praveen Nettaru’s murder : ವಿದೇಶದಲ್ಲಿ ನಡೆದಿತ್ತಾ ಪ್ರವೀಣ್​ ಹತ್ಯೆಗೆ ಪ್ಲಾನ್​ : ಪ್ರವೀಣ್​ ಅಂಗಡಿಯಲ್ಲಿ ಕೆಲಸಕ್ಕಿದವನ ಪುತ್ರನಿಂದಲೇ ಸ್ಕೆಚ್​​

ಇದನ್ನೂ ಓದಿ : CM Basavaraja Bommai : ಪ್ರವೀಣ್​ ನೆಟ್ಟಾರು ನಿವಾಸಕ್ಕೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಭೇಟಿ

CT Ravi appealed to Hindu activists

Comments are closed.