Hindu activists vandalized the shop : ಪ್ರವೀಣ್​ ಹತ್ಯೆ ಪ್ರಕರಣದಲ್ಲಿ 27 ಮಂದಿ ಖಾಕಿ ವಶಕ್ಕೆ : ಆರೋಪಿ ಶಫೀಕ್​ ಕೆಲಸ ಮಾಡುತ್ತಿದ್ದ ಅಂಗಡಿ ಧ್ವಂಸ

ದಕ್ಷಿಣ ಕನ್ನಡ : Hindu activists vandalized the shop : ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣ ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ನಿನ್ನೆಯಷ್ಟೇ ಸಚಿವರಾದ ಅಂಗಾರ, ಸುನೀಲ್​ ಕುಮಾರ್​ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ರ ಚಳಿ ಬಿಡಿಸುವ ಕೆಲವನ್ನು ಹಿಂದೂ ಕಾರ್ಯಕರ್ತರು ಮಾಡಿದ್ದಾರೆ. ಸಾಕಷ್ಟು ಆಕ್ರೋಶವನ್ನು ಎದುರಿಸುತ್ತಿರುವ ಬಿಜೆಪಿ ಸರ್ಕಾರವು ಈ ಪ್ರಕರಣದ ಕುಲಂಕುಷ ತನಿಖೆಗೆ ಪೊಲೀಸ್​ ಇಲಾಖೆಗೆ ಸೂಚನೆ ನೀಡಿದೆ.


ಈ ಪ್ರಕರಣದಲ್ಲಿ ಪೊಲೀಸರು ಈವರೆಗೆ ಒಟ್ಟು 27 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಶಂಕಿತರನ್ನು ವಿಚಾರಣೆಗೆ ಒಳಪಡಿಸುತ್ತಿರುವ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಶಂಕಿತರು ಪೊಲೀಸ್​ ಠಾಣೆಗೆ ಬರುತ್ತಿದ್ದಂತೆಯೇ ಅವರ ಕುಟುಂಬಸ್ಥರು ಠಾಣೆಯ ಮುಂದೆ ಜಮಾಯಿಸಿದ ಪ್ರಸಂಗ ಕೂಡ ನಡೀತು. ಶಂಕಿತರ ಕುಟುಂಬಸ್ಥರು ಠಾಣೆ ಮುಂದೆ ಜಮಾಯಿಸುತ್ತಿದ್ದಂತೆಯೇ ಪೊಲೀಸರು ಇಲ್ಲಿಂದ ಕದಲದೇ ಹೋದಲ್ಲಿ ನಿಮ್ಮ ಮೇಲೂ ಎಫ್​ಐಆರ್​ ದಾಖಲು ಮಾಡಬೇಕಾಗುತ್ತೆ ಎಂದು ವಾರ್ನಿಂಗ್​ ನೀಡಿ ಠಾಣೆಯಿಂದ ಕಳುಹಿಸಿದ್ದಾರೆ.


ಇನ್ನು ಈ ಪ್ರಕರಣದಲ್ಲಿ ಪೊಲೀಸರು ಜಾಕೀರ್​ ಹಾಗೂ ಮೊಹಮ್ಮದ್​ ಶಫೀಕ್​ ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಇವರಿಬ್ಬರ ವಿಚಾರಣೆ ನಡೆಸಿದ ಪೊಲೀಸರು ಸೂಕ್ತ ಸಾಕ್ಷ್ಯಾಧಾರಗಳು ದೊರಕಿದ ಹಿನ್ನೆಲೆಯಲ್ಲಿ ಬಂಧಿಸಿದ್ದಾರೆ.ಇವರಿಬ್ಬರು ನೇರವಾಗಿ ಹತ್ಯೆಯಲ್ಲಿ ಭಾಗಿಯಾಗದೇ ಇದ್ದರೂ ಸಹ ಹಂತಕರಿಗೆ ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಶಫೀಕ್​ ಹಂತಕರಿಗೆ ಕೊಲೆ ಮಾಸ್ಟರ್​ ಪ್ಲಾನ್​ ರೂಪಿಸಲು ಸಹಾಯ ಮಾಡಿದ್ದರೆ ಜಾಕೀರ್​ ಕೊಲೆ ನಡೆಯುವ ಮುನ್ನ ಪ್ರವೀಣ್​ ಚಲನವಲನಗಳ ಬಗ್ಗೆ ಹಂತಕರಿಗೆ ಪಿನ್​ ಟು ಪಿನ್ ಮಾಹಿತಿ ನೀಡಿದ್ದ ಎನ್ನಲಾಗಿದೆ.


ಇನ್ನು ಶಫೀಕ್​ ಬಂಧನದ ಸುದ್ದಿ ಬೆಳಕಿಗೆ ಬರುತ್ತಿದ್ದಂತೆಯೇ ಆಕ್ರೋಶ ಹೊರ ಹಾಕಿದ ಹಿಂದೂ ಕಾರ್ಯಕರ್ತರು ಸುಳ್ಯದ ಗುತ್ತಿಗಾರಿ ಎಂಬಲ್ಲಿ ಮುಸ್ಲಿಮರಿಗೆ ಸೇರಿದ ಅಂಗಡಿ ಮುಂಗಟ್ಟುಗಳನ್ನು ಧ್ವಂಸ ಮಾಡಿದ್ದಾರೆ. 50ಕ್ಕೂ ಹೆಚ್ಚು ಕಾರ್ಯಕರ್ತರು ಸೇರಿ ಶಫೀಕ್​ ಕೆಲಸ ಮಾಡುತ್ತಿದ್ದ ಅಂಗಡಿ ಸೇರಿದಂತೆ ಮುಸ್ಲಿಂ ಮಾಲೀಕರಿಗೆ ಸೇರಿದ ಅನೇಕ ಅಂಗಡಿಗಳನ್ನು ಧ್ವಂಸಗೊಳಿಸಿದ್ದಾರೆ.


ಆರೋಪಿಗಳಾದ ಶಫೀಕ್​ ಹಾಗೂ ಜಾಕೀರ್​ನನ್ನು ಬೆಳ್ಳಾರೆ ಪೊಲೀಸ್​ ಠಾಣೆಯಿಂದ ಪುತ್ತೂರು ಕೋರ್ಟ್​ಗೆ ಪೊಲೀಸರು ಹಾಜರು ಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನು ಓದಿ : CT Ravi : ಪಿಎಫ್​​ಐ ಸಂಘಟನೆ ಬ್ಯಾನ್​ ಮಾಡ್ತೇವೆ, ಯಾರೂ ಸಮೂಹ ಸನ್ನಿಗೆ ಒಳಗಾಗದಿರಿ : ಕಾರ್ಯಕರ್ತರಲ್ಲಿ ಸಿ.ಟಿ ರವಿ ಮನವಿ

ಇದನ್ನೂ ಓದಿ : B.Y Vijayendra : ಮೃತ ಪ್ರವೀಣ್​ ನೆಟ್ಟಾರು ನಿವಾಸಕ್ಕೆ ಬಿ.ವೈ ವಿಜಯೇಂದ್ರ ಭೇಟಿ : ಕುಟುಂಬಸ್ಥರಿಗೆ ಸಾಂತ್ವನ

Hindu activists vandalized the shop where accused Shafiq was working

Comments are closed.