ಭಾನುವಾರ, ಏಪ್ರಿಲ್ 27, 2025
HomeCoastal NewsBrahmavara Road Accident : ಬ್ರಹ್ಮಾವರ : ಅಪಘಾತದಿಂದ ಆಸ್ಪತ್ರೆ ಸೇರಿದ ತಂದೆ, ಮಗ :...

Brahmavara Road Accident : ಬ್ರಹ್ಮಾವರ : ಅಪಘಾತದಿಂದ ಆಸ್ಪತ್ರೆ ಸೇರಿದ ತಂದೆ, ಮಗ : ನೆರವಿನ ನಿರೀಕ್ಷೆಯಲ್ಲಿ ವಿದ್ಯಾರ್ಥಿ ಶ್ರೇಯಸ್‌

- Advertisement -

ಬ್ರಹ್ಮಾವರ : (brahmavara Road Accident) ಆತ ಪಿಯುಸಿ ಶಿಕ್ಷಣವನ್ನು ಪೂರೈಸಿ ಪದವಿ ಕಾಲೇಜಿಗೆ ಸೇರುವ ಕನಸು ಕಂಡಿದ್ದ. ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳೋ ಬಯಕೆಯನ್ನೂ ಹೊಂದಿದ್ದ. ಆದರೆ ವಿಧಿ ಆತನ ಬಾಳಲ್ಲಿ ಚೆಲ್ಲಾಟವಾಡಿದೆ. ತಂದೆಯ ಜೊತೆ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಡೆದ ಅಪಘಾತದಿಂದ ಪ್ರಜ್ಞೆ ಕಳೆದುಕೊಂಡು ಆಸ್ಪತ್ರೆಯ ಐಸಿಯುನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕಿಣಿಯರ ಬೆಟ್ಟು ನಿವಾಸಿಯಾಗಿರುವ ಅಶೋಕ್‌ ಕುಂದರ್‌ ಹಾಗೂ ಶಾಂತಾ ದಂಪತಿಗಳ ಪುತ್ರನಾಗಿರುವ ಶ್ರೇಯಸ್‌ (18 ವರ್ಷ) ಮೇ 30ರಂದು ನಡೆದ ಅಪಘಾತದಲ್ಲಿ ತಲೆ ಮತ್ತು ಕಾಲಿಗೆ ಗಂಭೀರವಾದ ಗಾಯವಾಗಿದ್ದು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುವ ಶ್ರೇಯಸ್‌ ಗೆ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದ್ದು, ಚೇತರಿಸಿಕೊಳ್ಳಲು ಕನಿಷ್ಠ ಒಂದೂವರೆ ವರ್ಷಗಳ ಕಾಲ ಹಿಡಿಯಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಸುಮಾರು 8-10 ಲಕ್ಷ ರೂಪಾಯಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ತಂದೆ ಅಶೋಕ್‌ ಕುಂದರ್‌ ಮೀನುಗಾರಿಕೆ ವೃತ್ತಿಯನ್ನು ಮಾಡಿಕೊಂಡಿದ್ದು ಅಪಘಾತದಲ್ಲಿ ಅವರು ಗಾಯಗೊಂಡಿದ್ದಾರೆ. ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಲಕ್ಷಾಂತರ ರೂಪಾಯಿಯನ್ನು ಹೊಂದಿಸುವುದು ಬಡ ಕುಟುಂಬಕ್ಕೆ ಕಷ್ಟಕರವಾಗಿದೆ.

ಇದನ್ನೂ ಓದಿ : NIA Raid : ಮೋದಿ ಕಾರ್ಯಕ್ರಮದ ವೇಳೆ ದುಷ್ಕತ್ಯಕ್ಕೆ ಸಂಚು : ದಕ್ಷಿಣ ಕನ್ನಡ 16 ಕಡೆ ಎನ್‌ಐಎ ದಾಳಿ

ಹೀಗಾಗಿ ಕುಟುಂಬ ದಾನಿಗಳ ನೆರವು ಯಾಚಿಸಿದೆ. ಶ್ರೇಯಸ್‌ ಚಿಕಿತ್ಸೆ ಹಾಗೂ ಆತನ ಮುಂದಿನ ವಿದ್ಯಾಭ್ಯಾಸಕ್ಕೆ ನೆರವಾಗ ಬೇಕಾಗಿದೆ. ಐಸಿಯುನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗನ ಕಂಡು ತಾಯಿ ಕಣ್ಣೀರು ಸುರಿಸುತ್ತಿದ್ದಾರೆ. ದಾನಿಗಳ ಸಹಕಾರ ದೊರೆತ್ರೆ ಖಂಡಿತಾ ಶ್ರೇಯಸ್‌ ಮೊದಲಿನಂತೆ ಆಗಲು ಸಾಧ್ಯ. ನೀವು ಮಾಡುವ ಸಣ್ಣ ಸಹಾಯ ವಿದ್ಯಾರ್ಥಿಯೋರ್ವನ ಜೀವ ಉಳಿಸಲು ಸಾಧ್ಯವಾಗುತ್ತದೆ. ಈ ಕೆಳಗೆ ನೀಡಿರುವ ಶ್ರೇಯಸ್‌ ತಾಯಿ ಶಾಂತಾ ಅವರ ಬ್ಯಾಂಕ್‌ ಖಾತೆಗೆ ಹಣವನ್ನು ಜಮೆ ಮಾಡಬಹುದಾಗಿದೆ.

Account Holder Name : Shantha
Account Number : 73680100012606
IFSC Code : BARB0VJBRAH
Branch Name : Varamballi
Place : BRAHMAVAR

Phone Pay ಮಾಡಲು ಈ ಸ್ಕ್ಯಾನ್‌ ಕೋಡ್‌ ಬಳಸಿಕೊಳ್ಳಬಹುದು

brahmavara Road Accident Father son admitted to hospital due to accident Shreyas is waiting for help

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular