Coromandel express accident : 14 ವರ್ಷದ ಹಿಂದಿನ ಕೋರಮಂಡಲ್ ದುರಂತ ನೆನಪಿಸಿದ ಒಡಿಶಾ ರೈಲು ದುರಂತ

ಒಡಿಶಾ : (Coromandel express accident) ಬೆಂಗಳೂರು- ಹೌರಾ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಒಳಗೊಂಡಂತೆ ನಡೆದ ಭೀಕರ ರೈಲು ದುರಂತದಲ್ಲಿ ಒಟ್ಟು 230 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ಸುಮಾರು 900 ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯುದೆ. ಭಾರತದಲ್ಲಿ ನಡೆದಿರುವ ನಾಲ್ಕನೇ ಭೀಕರ ರೈಲು ದುರಂತ ಇದಾಗಿದ್ದು, ಕೋಲ್ಕತ್ತಾದಿಂದ ದಕ್ಷಿಣಕ್ಕೆ 250 ಕಿಮೀ ಮತ್ತು ಭುವನೇಶ್ವರದಿಂದ 170 ಕಿಮೀ ಉತ್ತರಕ್ಕೆ ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಬಾಲಸೋರ್ ಜಿಲ್ಲೆಯ ಬಹನಾಗ ಬಜಾರ್ ನಿಲ್ದಾಣದ ಬಳಿ ಸಂಭವಿಸಿದೆ.

Coromandel express accident : ಜೂನ್ 2, 2023 ರಂದು (ಶುಕ್ರವಾರ) ಆಗಿದ್ದೇನು ?

ಒಡಿಶಾದ ಬಾಲಸೋರ್‌ನ ಬಹನಾಗಾ ಬಜಾರ್ ನಿಲ್ದಾಣದ ಬಳಿ ಚೆನ್ನೈಗೆ ತೆರಳುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ಹಳಿತಪ್ಪಿತು. ಐದು ನಿಮಿಷಗಳ ಹಿಂದೆ ಹಳಿತಪ್ಪಿದ ಹೌರಾ- ಬೆಂಗಳೂರು- ಹೌರಾ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿಗೆ ಢಿಕ್ಕಿ ಹೊಡೆದಿದೆ. ಇನ್ನು ಹಳಿತಪ್ಪಿದ ಕೋರಮಂಡಲ್‌ ಬೋಗಿಗಳು ನಿಂತಿದ್ದ ಗೂಡ್ಸ್‌ ರೈಲಿಗೆ ಢಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ರೈಲ್ವೇ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಕೋರಮಂಡಲ್ ಎಕ್ಸ್‌ಪ್ರೆಸ್ ಚೆನ್ನೈ ಕಡೆಗೆ ಸಂಭವಿಸುತ್ತಿದ್ದರೆ, ಸರ್ ಎಂ ವಿಶ್ವೇಶ್ವರಯ್ಯ- ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹೌರಾ ಕಡೆಗೆ ಸಂಚರಿಸುತ್ತಿತ್ತು. ರೈಲಿನಲ್ಲಿ ಸುಮಾರು 1,000 ಪ್ರಯಾಣಿಕರಿದ್ದರು. ಎರಡೂ ರೈಲುಗಳ ನಡುವೆ ನಡೆದಿರುವ ದುರಂತದ ಬೆನ್ನಲ್ಲೇ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಕೋರಮಂಡಲ್‌ ಎಕ್ಸ್‌ಪ್ರೆಸ್‌ ರೈಲು 1,662 ಕಿಮೀ ದೂರವನ್ನು ಕೇವಲ 27 ಗಂಟೆ ಮತ್ತು ಐದು ನಿಮಿಷಗಳಲ್ಲಿ ಕ್ರಮಿಸುತ್ತದೆ, ಕೋರಮಂಡಲ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12842) ಚೆನ್ನೈ ಮತ್ತು ಶಾಲಿಮಾರ್ (ಹೌರಾದಲ್ಲಿ) ನಡುವೆ ಸಂಚರಿಸುತ್ತದೆ. ಕೋರಮಂಡಲ್ ಎಕ್ಸ್‌ಪ್ರೆಸ್ ಗಂಟೆಗೆ 130 ಕಿಲೋಮೀಟರ್ ವೇಗವನ್ನು ಹೊಂದಿದ್ದು ಶುಕ್ರವಾರದಂದು ದುರಂತ ಸಂಭವಿಸಿದೆ. ಇನ್ನು ನಿನ್ನೆ ನಡೆದಿರುವ ದುರಂತ 2009ರಲ್ಲಿ ಸಂಭವಿಸಿದ್ದ ಕೋರಮಂಡಲ್ ಅಪಘಾತದ ಕಹಿ ನೆನಪುಗಳನ್ನು ನೆನಪಿಸಿದೆ. ಅಂದು ಸುಮಾರು 16 ಪ್ರಯಾಣಿಕರನ್ನು ಬಲಿ ಪಡೆದಿತ್ತು.

ಫೆಬ್ರವರಿ 13, 2009 (ಶುಕ್ರವಾರ) ಆಗಿದ್ದೇನು ?

ಕೋರಮಂಡಲ್‌ ಎಕ್ಸ್‌ ಪ್ರೆಸ್‌ ರೈಲು ದುರಂತ ನಡೆದಿರೋದು ಇದೇ ಮೊದಲೇನಲ್ಲ. 2009ರಲ್ಲಿ ಕೋರಮಂಡಲ್‌ ಎಕ್ಸ್‌ಪ್ರೆಸ್ ರೈಲು ಜಾಜ್‌ಪುರ ರಸ್ತೆ ರೈಲು ನಿಲ್ದಾಣದ ಮೂಲಕ ಅತಿವೇಗದಲ್ಲಿ ಹಾದು ಹೋಗುತ್ತಿದ್ದಾಗ ಅಪಘಾತ ಸಂಭವಿಸಿತ್ತು. ‌ ಜಾಜ್‌ಪುರ್ ಜಿಲ್ಲೆಯಲ್ಲಿ ಹೌರಾದಿಂದ ಚೆನ್ನೈಗೆ ಹೊರಟಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್‌ನ 13 ಬೋಗಿಗಳು ಹಳಿಗಳನ್ನು ಬದಲಾಯಿಸುವ ವೇಳೆಯಲ್ಲಿ ರೈಲು ಹಳತಪ್ಪಿತ್ತು, ಈ ದುರಂತದಲ್ಲಿ ಸುಮಾರು 16 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು, 161 ಮಂದಿ ಗಾಯಗೊಂಡಿದ್ದರು.2009 ರ ಅಪಘಾತವು ಸಂಜೆ 7:30 ರಿಂದ 7:40 ರ ನಡುವೆ ಸಂಭವಿಸಿದ್ದು, ಹಳಿತಪ್ಪಿದ 13 ಬೋಗಿಗಳಲ್ಲಿ 11 ಸ್ಲೀಪರ್ ಕ್ಲಾಸ್ ಮತ್ತು ಎರಡು ಜನರಲ್ ಬೋಗಿಗಳಾಗಿದ್ದವು. ದುರಂತ ನಡೆದ ದಿನವನ್ನು ಬ್ಲ್ಯಾಕ್‌ ಫ್ರೈಡೇ ಎಂದು ಕರೆಯಲಾಗಿದೆ.

ಭಾರತದಲ್ಲಿ ಅತೀ ಹೆಚ್ಚು ಬಲಿ ಪಡೆದ ರೈಲ್ವೆ ದುರಂತಗಳು :

  • ಜೂನ್ 6, 1981: ಭಾರತವು ಬಿಹಾರದಲ್ಲಿ ಅತ್ಯಂತ ಭೀಕರ ರೈಲು ದುರಂತ ಸಂಭವಿಸಿತ್ತು. ಸೇತುವೆ ದಾಟುತ್ತಿದ್ದ ವೇಳೆಯಲ್ಲಿ ರೈಲು ಬಗ್ಮತಿ ನದಿಗೆ ಬಿದ್ದು, 750ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.
  • ಆಗಸ್ಟ್ 20, 1995: ಉತ್ತರ ಪ್ರದೇಶದ ಫಿರೋಜಾಬಾದ್ ಬಳಿ ನಿಂತಿದ್ದ ಕಾಳಿಂದಿ ಎಕ್ಸ್‌ಪ್ರೆಸ್‌ಗೆ ಪುರುಷೋತ್ತಮ್ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದಿದೆ. ಈ ದುರಂತದಲ್ಲಿ ಸುಮಾರು 305 ಮಂದಿ ಸಾವನ್ನಪ್ಪಿದ್ದರು.
  • ಆಗಸ್ಟ್ 2, 1999: ಉತ್ತರ ಫ್ರಾಂಟಿಯರ್ ರೈಲ್ವೆಯ ಕತಿಹಾರ್ ವಿಭಾಗದ ಗೈಸಾಲ್ ನಿಲ್ದಾಣದಲ್ಲಿ ಬ್ರಹ್ಮಪುತ್ರ ಮೇಲ್ ಅವಧ್ ಅಸ್ಸಾಂ ಎಕ್ಸ್‌ಪ್ರೆಸ್‌ಗೆ ಅಪ್ಪಳಿಸಿದಾಗ ಗೈಸಲ್ ರೈಲು ದುರಂತ ಸಂಭವಿಸಿದೆ. ದುರಂತದಲ್ಲಿ 285 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ದುರಂತದಲ್ಲಿ ಬಲಿಯಾದವರಲ್ಲಿ ಸೇನಾ ಯೋಧರು, ಬಿಎಸ್‌ಎಫ್‌, ಸಿಆರ್‌ಪಿಎಫ್‌ ಸಿಬ್ಬಂದಿ ಒಳಗೊಂಡಿದ್ದರು.
  • ನವೆಂಬರ್ 26, 1998: ಜಮ್ಮು ತಾವಿ-ಸೀಲ್ದಾಹ್ ಎಕ್ಸ್‌ಪ್ರೆಸ್ ಪಂಜಾಬ್‌ನ ಖನ್ನಾದಲ್ಲಿ ಫ್ರಾಂಟಿಯರ್ ಗೋಲ್ಡನ್ ಟೆಂಪಲ್ ಮೇಲ್‌ನ ಮೂರು ಹಳಿತಪ್ಪಿದ ಕೋಚ್‌ಗಳಿಗೆ ಡಿಕ್ಕಿ ಹೊಡೆದು 212 ಜನರು ಸಾವನ್ನಪ್ಪಿದರು.
  • ನವೆಂಬರ್ 20, 2016: ಉತ್ತರ ಪ್ರದೇಶದ ಕಾನ್ಪುರದಿಂದ ಸರಿಸುಮಾರು 60 ಕಿಮೀ ದೂರದಲ್ಲಿರುವ ಪುಖ್ರಾಯನ್‌ನಲ್ಲಿ ಇಂದೋರ್-ರಾಜೇಂದ್ರ ನಗರ ಎಕ್ಸ್‌ಪ್ರೆಸ್‌ನ 14 ಕೋಚ್‌ಗಳು ಹಳಿತಪ್ಪಿದಾಗ 152 ಜನರು ಸಾವನ್ನಪ್ಪಿದ್ದು, 260 ಮಂದಿ ಗಾಯಗೊಂಡರು.
  • ಮೇ 28, 2010: ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ಹಳಿತಪ್ಪಿ – ಮುಂಬೈಗೆ ತೆರಳುತ್ತಿದ್ದ ರೈಲು ಪಶ್ಚಿಮ ಬಂಗಾಳದ ಜಾರ್‌ಗ್ರಾಮ್ ಬಳಿ ಹಳಿತಪ್ಪಿತು ಮತ್ತು ಮುಂದೆ ಬರುತ್ತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು 148 ಪ್ರಯಾಣಿಕರು ಸಾವನ್ನಪ್ಪಿದ್ದರು.
  • ಸೆಪ್ಟೆಂಬರ್ 9, 2002: ಭಯೋತ್ಪಾದಕರ ದಾಳಿಯಿಂದಾಗಿ ಹೌರಾ ರಾಜಧಾನಿ ಎಕ್ಸ್‌ಪ್ರೆಸ್ ಬಿಹಾರದ ರಫಿಗಂಜ್‌ನಲ್ಲಿ ಧವೇ ನದಿಯ ಸೇತುವೆಯ ಮೇಲೆ ಹಳಿತಪ್ಪಿ 140 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ.
  • ಡಿಸೆಂಬರ್ 23, 1964: ಪಂಬನ್-ಧನುಷ್ಕೋಡಿ ಪ್ಯಾಸೆಂಜರ್ ರೈಲು ರಾಮೇಶ್ವರಂ ಚಂಡಮಾರುತದಿಂದಾಗಿ ಕೊಚ್ಚಿಹೋಗಿದ್ದು, ಸುಮಾರು 126 ಪ್ರಯಾಣಿಕರು ಸಾವನ್ನಪ್ಪಿದರು.

ಇದನ್ನೂ ಓದಿ : Odisha Train Accident : ಒಡಿಶಾ ರೈಲು ದುರಂತ, ಈ ಮಾರ್ಗದಲ್ಲಿ ರೈಲುಗಳ ಸಂಚಾರ ಸ್ಥಗಿತ

ರೈಲ್ವೆ ದುರಂತದ ಬಗ್ಗೆ ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಪರ್ಕಿಸಿ :
ಒಡಿಶಾ ಸರ್ಕಾರವು ಸಹಾಯವಾಣಿ 06782-262286 ಅನ್ನು ಬಿಡುಗಡೆ ಮಾಡಿದೆ. ರೈಲ್ವೆ ಸಹಾಯವಾಣಿಗಳು 033-26382217 (ಹೌರಾ), 8972073925 (ಖರಗ್‌ಪುರ), 8249591559 (ಬಾಲಾಸೋರ್) ಮತ್ತು 044- 25330952 (ಚೆನ್ನೈ).

Coromandel express accident: The Odisha train accident reminded of the Coromandel accident 14 years ago

Comments are closed.