congress vs youth congress : ಜಿಲ್ಲಾ ಕಾಂಗ್ರೆಸ್ಸಿನಿಂದ ನಾರಾಯಣ ಗುರು ಸ್ವಾಭಿಮಾನ ಯಾತ್ರೆ, ಯುವ ಕಾಂಗ್ರೆಸ್ಸಿನಿಂದ ರಕ್ತದಾನ ಶಿಬಿರ !

ಮಂಗಳೂರು : ಕರಾವಳಿ ಭಾಗದಲ್ಲಿ ಕಾಂಗ್ರೆಸ್‌ ನಾಯಕರ ನಡುವಿನ ಜಗಳ ಸದ್ಯಕ್ಕೆ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ. ಇದೀಗ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಒಂದು ಕಡೆ ಜಿಲ್ಲಾ ಕಾಂಗ್ರೆಸ್ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವ ಪರೇಡಿನಲ್ಲಿ ಪ್ರದರ್ಶಿಸಿದ ಕಾರಣ ಸ್ವಾಭಿಮಾನ ಯಾತ್ರೆ ಹಮ್ಮಿಕೊಂಡಿದೆ. ಈ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕಾಗಿದ್ದ ಜಿಲ್ಲಾ ಯುವ ಕಾಂಗ್ರೆಸ್‌ (congress vs youth congress) ಪರ್ಯಾಯವಾಗಿ ಜಿಲ್ಲೆಯ 16 ಕೇಂದ್ರಗಳಲ್ಲಿ ರಕ್ತದಾನ ಶಿಬಿರ ಆಯೋಜಿಸಿದೆ.

ಕಾಂಗ್ರೆಸ್‌ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್‌ ಅವರ ಬೆಂಬಲಿಗ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಲುಕ್‌ಮಾನ್‌ ಅವರೇ ರಕ್ತದಾನ ಶಿಬಿರವನ್ನು ಆಯೋಜಿಸಿರುವವರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಪಕ್ಷ ಒಂದು ಧಿಕ್ಕಿನಲ್ಲಿ ಸಾಗಿದ್ರೆ, ಜಿಲ್ಲಾ ಯುವ ಕಾಂಗ್ರೆಸ್‌ ಇದೀಗ ಜಿಲ್ಲಾ ಕಾಂಗ್ರೆಸ್‌ ಪಕ್ಷದ ವಿರುದ್ದ ಧಿಕ್ಕಿನಲ್ಲೇ ಸಾಗುತ್ತಿದೆ. ಜಿಲ್ಲಾ ಕಾಂಗ್ರೆಸ್‌ ಆಯೋಜನೆ ಮಾಡಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ, ಯುವ ಕಾಂಗ್ರೆಸ್‌ ಪರ್ಯಾಯವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದು ಕರಾವಳಿ ಭಾಗದ ಕಾರ್ಯಕರ್ತರಲ್ಲಿ ಗೊಂದಲವನ್ನು ಮೂಡಿಸುತ್ತಿದೆ ಎಂದು ಪಕ್ಷದ ನಿಷ್ಠಾಂವಂತ ಕಾರ್ಯಕರ್ತರು ಆರೋಪಿಸಿದ್ದಾರೆ.

ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಮಂಗಳೂರಿಗೆ ಆಗಮಿಸಿ ಈ ನಾರಾಯಣ ಗುರುಗಳ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಆದರೆ ಇನ್ನೊಂದೆಡೆಯಲ್ಲಿ ಅವರ ಕಟ್ಟಾ ಬೆಂಬಲಿಗ ಬೇರೊಂದು ಕಾರ್ಯಕ್ರಮ ಆಯೋಜನೆ ಮಾಡಿರುವುದು ಕಾರ್ಯಕರ್ತರಲ್ಲಿ ಅಚ್ಚರಿಯನ್ನುಂಟು ಮಾಡಿದೆ.

ಇನ್ನು ನಾರಾಯಣಗುರುಗಳ ಸ್ತಬ್ದಚಿತ್ರಕ್ಕೆ ಕೇಂದ್ರ ಸರಕಾರ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಅವಕಾಶ ನೀಡದ ಕುರಿತು ಕಾಂಗ್ರೆಸ್‌ ಹೋರಾಟ ನಡೆಸುತ್ತಿದೆ. ಈ ಮೂಲಕ ಬಿಜೆಪಿಗೆ ಠಕ್ಕರ್‌ ಕೊಟ್ಟು ರಾಜಕೀಯ ಲಾಭ ಪಡೆಯಲು ಫ್ಲ್ಯಾನ್‌ ಮಾಡಿಕೊಂಡಿದೆ. ಆದರೆ ಕರಾವಳಿ ಭಾಗದಲ್ಲಿನ ಕಾಂಗ್ರೆಸ್‌ ನಾಯಕರು ಮಾತ್ರ ಈ ಹೋರಾಟವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ ಅನ್ನೋ ಆರೋಪವೂ ಕಾಂಗ್ರೆಸ್‌ ವಲಯದಲ್ಲಿಯೇ ಕೇಳಿಬರುತ್ತಿದೆ.

ಇದನ್ನೂ ಓದಿ : ಸುಪ್ರೀಂ ಅಂಗಳದಲ್ಲಿ ಬಿಬಿಎಂಪಿ ಚುನಾವಣೆ ಭವಿಷ್ಯ: ಸರ್ಕಾರದ ವಿರುದ್ಧ ಮಾಜಿ ಕಾರ್ಪೋರೇಟರ್ ಶಿವರಾಜ್ ದೂರು

ಇದನ್ನೂ ಓದಿ : ಮತ್ತೆ ಸದ್ದು ಮಾಡ್ತಿದೆ ಬೆಳಗಾವಿ ಪಾಲಿಟಿಕ್ಸ್ : ಸಾಹುಕಾರ ಸಹೋದರರ ಬಿಟ್ಟು ನಡೀತು ಮೀಟಿಂಗ್

(congress vs youth congress : Dakshin Kananda Congress Narayana Guru Swabhimani Yatra, Youth Congress Blood Donation Camp)

Comments are closed.