Night Curfew Cancel : ರಾಜ್ಯದಲ್ಲಿ ರದ್ದಾಗುತ್ತಾ ನೈಟ್ ಕರ್ಪ್ಯೂ : ಶುಕ್ರವಾರ ನಡೆಯಲಿದೆ ಸಿಎಂ ಮಹತ್ವದ ಸಭೆ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣಗಳು ಏರಿಕೆಯಾಗುತ್ತಿದೆ. ಆದರೂ ಆಸ್ಪತ್ತೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗಿದೆ.‌ ಇದನ್ನೇ ಕಾರಣ ವಾಗಿಟ್ಟುಕೊಂಡು ಅಳಿದುಳಿದ ಕಠಿಣ ನಿಯಮಗಳನ್ನು ಸಡಿಲಿಸಬೇಕೆಂಬ ಒತ್ತಡ ಕೇಳಿಬಂದಿದೆ. ವ್ಯಾಪಾರಸ್ಥರು ಉದ್ದಿಮೆಗಳ ಮಾಲೀಕರು ನಿಯಮ‌ ಸಡಿಲಿಸುವಂತೆ ಸರ್ಕಾರದ ಮೊರೆ ಹೋಗಿದ್ದಾರೆ. ಹೀಗಾಗಿ ಸರ್ಕಾರ ಕೂಡ ನಿಯಮ ಸಡಿಲಿಕೆಗೆ ಚಿಂತನೆ ನಡೆಸಲಿದೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಜಾರಿಯಲ್ಲಿರುವ ನೈಟ್‌ ಕರ್ಪ್ಯೂ (Night Curfew Cancel) ರದ್ದಾಗುವ ಸಾಧ್ಯತೆಯಿದೆ. ಈ ಬಗ್ಗೆ ಅಂತಿಮ‌ ನಿರ್ಣಯ ಶುಕ್ರವಾರ ಹೊರಬರಲಿದೆ.

ರಾಜ್ಯದಲ್ಲಿ ಹಾಗೂ ನಗರದಲ್ಲಿ ಪತ್ತೆಯಾಗುತ್ತಿರುವ ಪ್ರಕರಣಗಳು, ಆಸ್ಪತ್ರೆಗೆ ದಾಖಲಾಗಿರುವವರ ಸಂಖ್ಯೆ, ತಾಂತ್ರಿಕ ಸಮಿತಿ ಸಲಹೆ ಸೇರಿದಂತೆ ಹಲವು ಅಂಶವನ್ನು ಪರಿಗಣಿಸಿ ಸಿಎಂ ಟಫ್ ರೂಲ್ಸ್ ಭವಿಷ್ಯ ನಿರ್ಧರಿಸಲಿದ್ದಾರೆ. ಇನ್ನು ಸರ್ಕಾರ ಕೈಗೊಳ್ಳಲಿರುವ ನಿರ್ಣಯ ಹಾಗೂ ಇತರ ವಿಚಾರಗಳ ಬಗ್ಗೆ ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ ಚಂದ್ರ ಮಾಹಿತಿ ನೀಡಿದ್ದು, ಕೇಸ್‌ಗಳು ಹಾಗೂ ತಜ್ಞರ ವರದಿಯ ಮೇಲೆ ಟಫ್ ರೂಲ್ಸ್ ರಿಲೀಫ್‌ಗೆ ಚಿಂತನೆ ನಡೆದಿದೆ.

ಈಗಾಗಲೇ ತಾಂತ್ರಿಕ ಸಲಹಾ ಸಮಿತಿಯಿಂದಲೂ ಒಂದು ಸುತ್ತಿನ ಸಭೆ ನಡೆಸಿದೆ. ಈ ಶುಕ್ರವಾರದವರೆಗೂ ದಾಖಲಾಗುವ ಅಂಕಿ ಅಂಶ, ಆಸ್ಪತ್ರೆ ದಾಖಲಾತಿ‌ ನೋಡಿ ನಿರ್ಧಾರ ಹೊರಬೀಳಲಿದೆ. ಶಾಲೆಗಳ ಆರಂಭಕ್ಕೂ ಕೇಸ್‌ಗಳ ಸಂಖ್ಯೆಯೇ ಆಧಾರವಾಗಿದ್ದು, ಶುಕ್ರವಾರದವರೆಗಿನ ಅಂಕಿ ಅಂಶ ನೋಡಿ ಎಲ್ಲವನ್ನೂ ತೀರ್ಮಾನಿಸಲಾಗುವುದು ಎಂದಿದ್ದಾರೆ.

ಶುಕ್ರವಾರ ಸಿಎಂ ನಡೆಸುವ ಸಮಾರಂಭದಲ್ಲಿ ಎಲ್ಲ ವಿಚಾರಗಳು ಹಾಗೂ ನಿಯಮಗಳು ಅಂತಿಮಗೊಳ್ಳಲಿದ್ದು, ಗುರುವಾರ ಪಾಲಿಕೆ ಮಟ್ಟದಲ್ಲಿ ಸಭೆ ನಡೆಸಿ ಅಗತ್ಯ ವಿಚಾರಗಳನ್ನು ಚರ್ಚಿಸಿ ಸಿಎಂ ಗೆ ವರದಿ ನೀಡಲಾಗುವುದು ಎಂದು ತ್ರೀಲೋಕಚಂದ್ರ ಮಾಹಿತಿ ನೀಡಿದ್ದಾರೆ. ಈ‌ ಮಧ್ಯೆ ಸ್ವ್ಯಾಬ್ ಟೆಸ್ಟ್‌ಗೆ ಒಳಪಡಿಸುವ ಶೇ.90 ರಷ್ಟು ಜನರಲ್ಲಿ ಒಮಿಕ್ರಾನ್ ಪತ್ತೆಯಾಗುತ್ತಿದೆ ಎಂಬ ಆತಂಕಕಾರಿ ಸಂಗತಿಯನ್ನು ತ್ರಿಲೋಕಚಂದ್ರ ಬಹಿರಂಗಪಡಿಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಒಮಿಕ್ರಾನ್ ಕೇಸ್‌ಗಳ ಸಂಖ್ಯೆ ಹೆಚ್ಚಾಗ್ತಿದೆಜಿನೋವಿಕ್ ಸೀಕ್ವೆನ್ಸಿಂಗ್‌ಗೆ ಒಳಪಡಿಸುವವರ ಸಂಖ್ಯೆ ಹೆಚ್ಚಿದೆ.ದಿನಕ್ಕೆ 300 ಜನರ ಜಿನೋವಿಕ್ ಟೆಸ್ಟ್ ಮಾಡಲಾಗುತ್ತಿದೆ ಎಂದು ವಿವರಣೆ ನೀಡಿದ್ದಾರೆ.

ಈ ಮಧ್ಯೆ ಈಗಾಗಲೇ ಮದ್ಯ ಮಾರಾಟಗಾರರ ಒಕ್ಕೂಟ, ಕಲ್ಯಾಣಮಂಟಪಗಳ ಮಾಲೀಕರು ನೈಟ್ ಕರ್ಪ್ಯೂ ಅವಧಿಯನ್ನು ಮೊಟಕುಗೊಳಿಸಿ, 11.30 ರಿಂದ ನೈಟ್ ಕರ್ಪ್ಯೂ ವಿಧಿಸಿ ವ್ಯಾಪಾರ ವಹಿವಾಟಿನ ಚೇತರಿಕೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಇತರ ಉದ್ಯಮಗಳಂತೆ ಕಲ್ಯಾಣ ಮಂಟಪದಲ್ಲೂ ಶೇಕಡಾ 50 ರಷ್ಟು ಪ್ರವೇಶಾವಕಾಶ ಕಲ್ಪಿಸುವಂತೆ ಕೋರಿದ್ದಾರೆ. ಈ ಎಲ್ಲ ನಿಟ್ಟಿನಲ್ಲಿ ಈಗ ಮತ್ತೆ ಶುಕ್ರವಾರ ಸಿಎಂ ನಡೆಸಲಿರುವ ಕೋವಿಡ್ ಸಭೆ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ : ಈ ಸ್ಮಾರ್ಟ್​ಫೋನ್​ ಆಧಾರಿತ ಟೆಸ್ಟ್​ ಮೂಲಕ 20 ನಿಮಿಷಗಳಲ್ಲಿ ಸಿಗಲಿದೆ ಕೋವಿಡ್​ ವರದಿ

ಇದನ್ನೂ ಓದಿ : ಕರ್ನಾಟಕದಲ್ಲಿಂದು 52 ಮಂದಿ ಸಾವು, 24 ಗಂಟೆಯಲ್ಲಿ 41,400 ಕೋವಿಡ್-19 ಪ್ರಕರಣ ದೃಢ

(CM Basavaraj Bommai major meeting will be held Friday, night curfew Cancel in Karnataka )

Comments are closed.