ಬೆಳ್ತಂಗಡಿ : ಮರ ಕಡಿಯುವ ವೇಳೆಯಲ್ಲಿ ಮವೊಂದು ಮನೆ ಮೇಲೆ ಬಿದ್ದು ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಟ್ರಮೆ ಎಂಬಲ್ಲಿ ನಡೆದಿದೆ.
ಪಟ್ರಮೆ ನಿವಾಸಿ ಪ್ರಶಾಂತ್ ( 21 ವರ್ಷ), ಸ್ವಸ್ತಿಕ್ ( 23 ವರ್ಷ) ಹಾಗೂ ಸುರೇಶ್ ಎಂಬವರೇ ಸಾವನ್ನಪ್ಪಿದ ದುರ್ದೈವಿಗಳು. ಅನಾರು ಕಾಯಿಲ ನಿವಾಸಿಯಾಗಿರುವ ಲೋಕಯ್ಯ ಗೌಡ ಎಂಬವರಿಗೆ ಸೇರಿದ ಜಾಗದಲ್ಲಿ ಧೂಪದ ಮರವನ್ನು ಕಡಿಯಲು ಮೂವರು ಯುವಕರು ತೆರಳಿದ್ದರು. ಆದರೆ ಮರ ಕಡಿದು ಉರುಳಿಸುವ ವೇಳೆಯಲ್ಲಿ ಮರದ ಅಡಿಯಲ್ಲಿ ಮೂವರು ಯುವಕರು ಸಿಲುಕಿ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಸಂದೇಶ್ ಪಿ.ಜಿ., ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ ಐ ಪವನ್ ಕುಮಾರ್ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.