ಮಂಗಳೂರು : WhatsApp Account Hacked : ದಿನ ಕಳೆದಂತೆ ಸೈಬರ್ ವಂಚಕರು ಹೊಸದಾದ ಐಡಿಯಾಗಳನ್ನು ಬಳಸಿಕೊಂಡು ಸೈಬರ್ ಕ್ರೈಮ್ ಗಳನ್ನು ನಡೆಸುತ್ತಿದ್ದಾರೆ. ಪ್ರಾರಂಭದಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ನಮ್ಮ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ನಮ್ಮ ಫ್ರೆಂಡ್ ಲೀಸ್ಟ್ ನಲ್ಲಿದ್ದವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ತುರ್ತು ಹಣ ಕಳಿಸುವಂತೆ ದೋಖಾ ಮಾಡುತ್ತಿದ್ದರು. ಈ ರೀತಿಯ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ಜನ ಈ ಬಗ್ಗೆ ಎಚ್ಚೆತ್ತುಕೊಂಡರು. ಹೀಗಾಗಿ ಸೈಬರ್ ವಂಚಕರು ಇದೀಗ ತಮ್ಮ ಬೇಳೆ ಬೇಯುವುದಿಲ್ಲ ಎಂದು ವಾಟ್ಸಪ್ ಖಾತೆಗಳನ್ನೆ ಹ್ಯಾಕ್ ಮಾಡೋದಕ್ಕೆ ಪ್ರಾರಂಭ ಮಾಡಿದ್ದಾರೆ. ವಿಪರ್ಯಾಸ ಅಂದ್ರೆ ದಕ್ಷಿಣಕನ್ನಡ ಜಿಲ್ಲಾಧಿಕಾರಿಯವರ ಮೊಬೈಲ್ ನ್ನೆ ಹ್ಯಾಕರ್ಸ್ ಗಳು ಹ್ಯಾಕ್ ಮಾಡಿ ಹಣ ವರ್ಗಾಹಿಸುವಂತೆ ಕೇಳುತ್ತಿದ್ದಾರೆ.

ಹೌದು..ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ.ವಿ ಅವರೇ ತನ್ನ ಮೊಬೈಲ್ ಹ್ಯಾಕ್ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ನಿಮಗೆ 8590710748 ನಂಬರ್ ನಿಂದ ನನ್ನ ಹೆಸರು ಮತ್ತು ಫೋಟೋ ಬಳಸಿ ವಾಟ್ಸಪ್ ಮುಖಾಂತರ ಸಂದೇಶ ಕಳುಹಿಸಿ ಅಪರಿಚಿತರು ಸಹಾಯ ಅಥವಾ ಹಣವನ್ನು ವರ್ಗಾಯಿಸಲು ಕೇಳಬಹುದು. ಮೇಲ್ಕಾಣಿಸಿದ ನಂಬರ್ ನನ್ನದಾಗಿರುವುದಿಲ್ಲ. ಆದಕಾರಣ ನೀವು ಯಾವುದೇ ರೀತಿಯಲ್ಲಿ ಇವರಿಗೆ ಸಹಾಯ ಅಥವಾ ಹಣವನ್ನು ವರ್ಗಾಯಿಸ ಬೇಡಿ. ತಕ್ಷಣ ರಿಪೋರ್ಟ್ ಮತ್ತು ಬ್ಲಾಕ್ ಮಾಡುವಂತೆ ಜನರಲ್ಲಿ ಜಿಲ್ಲಾಧಿಕಾರಿ ಕೇಳಿಕೊಂಡಿದ್ದಾರೆ.

ವಾಟ್ಸಪ್ ನಲ್ಲಿ 8590710748 ನಂಬರ್ ನಿಂದ ಖಾತೆ ತೆರೆದಿರುವ ವಂಚಕರು ವಾಟ್ಸಪ್ ಅಕೌಂಟ್ ನ ಪ್ರೊಫೈಲ್ ಪಿಕ್ಷರ್ ಗೆ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ.ವಿ ಭಾವಚಿತ್ರ, ಹೆಸರನ್ನು ಹಾಕಿದ್ದಾರೆ. ಆ ಬಳಿಕ ಜಿಲ್ಲಾಧಿಕಾರಿಗಳ ಕಾಂಟ್ಯಾಕ್ಟ್ ಲೀಸ್ಟ್ ನಲ್ಲಿದ್ದ ನಂಬರ್ ಗಳಿಗೆ ಹಣ ವರ್ಗಾಹಿಸುವಂತೆ ಬೇಡಿಕೆ ಇಟ್ಟಿದ್ದಾರೆ. ತನ್ನ ವಾಟ್ಸಪ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಸೆನ್ ಪೊಲೀಸರಿಗೆ ಜಿಲ್ಲಾಧಿಕಾರಿ ದೂರನ್ನು ನೀಡಿದ್ದಾರೆ. ಸೆನ್ ಪೊಲೀಸರು ಈ ಬಗ್ಗೆ ತನಿಖೆ ಶುರು ಮಾಡಿದ್ದಾರೆ.
ಇದನ್ನು ಓದಿ : Virat Kohli twitter Followers : ಮೋದಿ ಬಿಟ್ಟರೆ ಟ್ವಿಟರ್ ಫಾಲೋವರ್ಸ್ ಸಂಖ್ಯೆಯಲ್ಲಿ ವಿರಾಟ್ ಕೊಹ್ಲಿ ಇಡೀ ಏಷ್ಯಾಗೇ ನಂ.1
ಇದನ್ನೂ ಓದಿ : BREAKING : ಐಪಿಎಲ್ ಸೇರಿದಂತೆ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ರಾಬಿನ್ ಉತ್ತಪ್ಪ ನಿವೃತ್ತಿ ಘೋಷಣೆ
Dakshina Kannada District Collector’s WhatsApp Account Hacked by Cyber Criminals