BREAKING : ಐಪಿಎಲ್​ ಸೇರಿದಂತೆ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ರಾಬಿನ್​ ಉತ್ತಪ್ಪ ನಿವೃತ್ತಿ ಘೋಷಣೆ

BREAKING : ಟೀಂ ಇಂಡಿಯಾದ ಆಟಗಾರ ರಾಬಿನ್​ ಉತ್ತಪ್ಪ ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಸಂಬಂಧ ಟ್ವೀಟ್​ ಮಾಡಿರುವ ಅವರು, ನನ್ನ ದೇಶ, ನನ್ನ ರಾಜ್ಯ ಕರ್ನಾಟಕವನ್ನು ಪ್ರತಿನಿಧಿಸುವುದು ನನಗೆ ಎಂದಿಗೂ ಅತ್ಯಂತ ದೊಡ್ಡ ಗೌರವದ ವಿಚಾರವಾಗಿದೆ. ಆದರೆ ಎಲ್ಲಾ ಒಳ್ಳೆಯ ವಿಷಯಗಳು ಅಂತ್ಯ ಕಾಣಲೇಬೇಕು. ಅತ್ಯಂತ ಕೃತಜ್ಞ ಮನಸ್ಸಿನಿಂದ ನಾನು ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಪಡೆಯಲು ನಿರ್ಧರಿಸಿದ್ದೇನೆ. ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ .


ನಾನು ವೃತ್ತಿಪರ ಕ್ರಿಕೆಟ್​ ಆಡಲು ಪ್ರಾರಂಭಿಸಿ 20 ವರ್ಷಗಳು ಕಳೆದಿವೆ. ನಾನು ನನ್ನ ದೇಶ ,ರಾಜ್ಯ ಕರ್ನಾಟಕವನ್ನು ಪ್ರತಿನಿಧಿಸುವದನ್ನು ಅತ್ಯಂತ ಗೌರವದ ವಿಚಾರ ಎಂದು ಭಾವಿಸಿದ್ದೇನೆ. ಇದೊಂದು ಏರಿಳಿತಗಳನ್ನು ಹೊಂದಿದ್ದ ಅತ್ಯಂತ ಅದ್ಭುತ ಪ್ರಯಾಣವಾಗಿದೆ. ಇದು ನನಗೆ ಲಾಭದಾಯಕ, ಆನಂದದಾಯಕ ಹಾಗೂ ನನಗೆ ಬೆಳೆಯಲು ಅವಕಾಶ ಮಾಡಿಕೊಟ್ಟ ಪ್ರಯಾಣ ಎನಿಸಿದೆ. ಆದರೆ ಎಲ್ಲಾ ಒಳ್ಳೆಯ ವಿಚಾರಗಳು ಒಂದಲ್ಲ ಒಂದು ದಿನ ಕೊನೆಗಾಣಲೇಬೇಕು. ಕೃತಜ್ಞತೆಯ ಹೃದಯದಿಂದ ನಾನು ಭಾರತೀಯ ಕ್ರಿಕೆಟ್​ನ ಎಲ್ಲಾ ಮಾದರಿಗಳಿಂದ ನಿವೃತ್ತಿ ಹೊಂದಲಿದ್ದೇನೆ. ನನ್ನ ಯುವ ಕುಟುಂಬದೊಂದಿಗೆ ಮಹತ್ವದ ಸಮಯ ಕಳೆಯಲು ನಿರ್ಧರಿಸಿದ್ದೇನೆ. ನನ್ನ ಜೀವನದ ಹೊಸ ಹಂತವನ್ನು ನೋಡುತ್ತೇನೆ ಎಂದು ತಮ್ಮ ವಿದಾಯದ ನೋಟ್​ನಲ್ಲಿ ಬರೆದುಕೊಂಡಿದ್ದಾರೆ.

ಇದರ ಜೊತೆಯಲ್ಲಿ ಎಂ.ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್ ಸೇರಿದಂತೆ ತಾವು ಈವರೆಗೆ ಆಡಿದ ಎಲ್ಲಾ ಐಪಿಎಲ್​ ತಂಡಗಳಿಗೆ ರಾಬಿನ್​ ಉತ್ತಪ್ಪ ಧನ್ಯವಾದ ತಿಳಿಸಿದ್ದಾರೆ.

ಇದನ್ನು ಓದಿ : Virat Kohli Instagram Post : “ಯಾರ ಭಾವನೆಗಳನ್ನೂ ನೋಯಿಸದಿರಿ..” ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂ ಪೋಸ್ಟ್‌ನ ಅರ್ಥ ಏನು ?

ಇದನ್ನೂ ಓದಿ : Virat Kohli twitter Followers : ಮೋದಿ ಬಿಟ್ಟರೆ ಟ್ವಿಟರ್ ಫಾಲೋವರ್ಸ್ ಸಂಖ್ಯೆಯಲ್ಲಿ ವಿರಾಟ್ ಕೊಹ್ಲಿ ಇಡೀ ಏಷ್ಯಾಗೇ ನಂ.1

BREAKING: Robin Uthappa announces retirement from all forms of cricket, won’t even play in IPL

Comments are closed.