man’s nose ear chopped off :ಮಗಳಿಗೆ ಮರು ಮದುವೆ ಮಾಡಿದ ತಂದೆಯ ಮೂಗು, ಕಿವಿಯನ್ನೇ ಕತ್ತರಿಸಿದ ದುಷ್ಕರ್ಮಿಗಳು

ರಾಜಸ್ಥಾನ : man’s nose ear chopped off : ಮದುವೆ ಎಲ್ಲರ ಜೀವನದಲ್ಲಿಯೂ ಸಿಹಿ ಸ್ವಪ್ನವೇ ಆಗಬೇಕು ಎಂದೇನಿಲ್ಲ. ಕೆಲವೊಮ್ಮ ಅನಿವಾರ್ಯ ಕಾರಣಗಳಿಂದ ಮದುವೆಯೆಂಬ ಬಂಧದಿಂದ ಹೊರ ಬರಬೇಕಾದ ಅನಿವಾರ್ಯತೆ ಎದುರಾಗಿ ಬಿಡುತ್ತದೆ. ಹಾಗಂತ ಜೀವನ ಅಲ್ಲಿಗೆ ಮುಗೀತು ಅಂತಲ್ಲ. ಎಲ್ಲರಿಗೂ ಎರಡನೇ ಬಾರಿಗೆ ತಮ್ಮ ಜೀವನವನ್ನು ಕಟ್ಟಿಕೊಳ್ಳುವ ಅಧಿಕಾರವಿದೆ. ಅದೇ ರೀತಿ ಪತಿಯಿಂದ ಬೇರ್ಪಟ್ಟ ತನ್ನ ಪುತ್ರಿಗೆ ತಂದೆಯೊಬ್ಬ ಮರು ಮದುವೆ ಮಾಡಿಸಿದ್ದ. ಆದರೆ ಇದೇ ಕಾರಣಕ್ಕೆ 55 ವರ್ಷದ ವ್ಯಕ್ತಿಯ ಮೂಗು ಹಾಗೂ ಕಿವಿಯನ್ನ ಹನ್ನೆರಡು ಜನರ ದುಷ್ಕರ್ಮಿಗಳ ತಂಡ ಕತ್ತರಿಸಿದ ಅಮಾನವೀಯ ಘಟನೆಯು ರಾಜಸ್ಥಾನದ ಬಾರ್ಮರ್​ ಜಿಲ್ಲೆಯ ಆದರ್ಶ ಸೋಂಡಿ ಗ್ರಾಮದಲ್ಲಿ ನಡೆದಿದೆ.


ದುಷ್ಕರ್ಮಿಗಳ ದಾಳಿಗೆ ಒಳಗಾಗಿರುವ ಸುಖರಾಮ್​ ಬಿಷ್ಣೋಯ್​​ ಸ್ಥಿತಿ ಗಂಭೀರವಾಗಿದೆ. ಜೋದ್​ಪುರ ಆಸ್ಪತ್ರೆಯಲ್ಲಿ ಸುಖರಾಮ್​ ಬಿಷ್ಣೋಯ್​ಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿ ಅಚ್ಲಾರಾಮ್​ ಗೋಡಾರಾ ಮಾಹಿತಿ ನೀಡಿದ್ದಾರೆ. ಸುಖರಾಮ್​ ಬಿಷ್ಣೋಯ್​​​ ಮೂಗು ಹಾಗೂ ಕಿವಿಯನ್ನು ಕತ್ತರಿಸಿದ ದುಷ್ಕರ್ಮಿಗಳು ಅದನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆಂದು ಬಿಷ್ಣೋಯ್​ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.


ಪುತ್ರಿಗೆ ಎರಡನೇ ಮದುವೆ ಮಾಡಬೇಕೆಂದು ಸುಖರಾಮ್ ಬಿಷ್ಣೋಯ್​ ಕೈಗೊಂಡಿದ್ದ ನಿರ್ಧಾರ ದುಷ್ಕರ್ಮಿಗಳಿಗೆ ಕೋಪವನ್ನುಂಟು ಮಾಡಿತ್ತು. ದಾಳಿಕೋರರು ಬಿಷ್ಣೋಯಿ ಪುತ್ರಿಯ ಮಾಜಿ ಪತಿ ಕಡೆಯವರು ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.ಬಿಷ್ಣೋಯ್​ ಪುತ್ರಿ ಆರು ವರ್ಷಗಳ ಹಿಂದೆ ಮೊದಲ ಮದುವೆಯಿಂದ ವಿಚ್ಛೇದನ ಪಡೆದು ತವರು ಮನೆಗೆ ಮರಳಿದ್ದಳು. ಮೊದಲ ಮದುವೆಯಾಗಿ ಒಂದು ವರ್ಷಕ್ಕೆ ಆಕೆ ಗಂಡನ ಮನೆಯಿಂದ ತವರು ಮನೆಗೆ ವಾಪಸ್ಸಾಗಿದ್ದಳು .


ದಾಳಿಕೋರರು ಬಲವಂತವಾಗಿ ಬಿಷ್ಣೋಯ್​ ಮನೆಗೆ ನುಗ್ಗಿದ್ದಾರೆ. ಬಿಷ್ಣೋಯ್​ಯನ್ನು ಥಳಿಸಿ ಆತನ ಕಿವಿ, ಮೂಗನ್ನು ಕತ್ತರಿಸಿ ಕಾಲನ್ನು ಮುರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಪೊಲೀಸ್​ ಅಧಿಕಾರಿ ಗೋದಾರ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : BREAKING : ಐಪಿಎಲ್​ ಸೇರಿದಂತೆ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ರಾಬಿನ್​ ಉತ್ತಪ್ಪ ನಿವೃತ್ತಿ ಘೋಷಣೆ

ಇದನ್ನೂ ಓದಿ : Virat Kohli Instagram Post : “ಯಾರ ಭಾವನೆಗಳನ್ನೂ ನೋಯಿಸದಿರಿ..” ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂ ಪೋಸ್ಟ್‌ನ ಅರ್ಥ ಏನು ?

Rajasthan man’s nose ear chopped off for getting his daughter remarried

Comments are closed.