ಉಡುಪಿ : ಪಾಳು ಬಿದ್ದ ಕನಕ ಮಹಲ್ ಕಟ್ಟಡದಲ್ಲಿ ಮೃತದೇಹ ಪತ್ತೆ

ಉಡುಪಿ : (Dead body found in building) ನಗರದ ಶ್ರೀ ಕೃಷ್ಣ ಮಠ ಪಾರ್ಕಿಂಗ್‌ ಗೆ ಹೋಗುವ ಮಾರ್ಗದಲ್ಲಿ ಕಾಮಗಾರಿ ಸ್ಥಗಿತಗೊಂಡಿರುವ ನಿರ್ಮಾಣ ಹಂತದ ಕನಕ ಮಹಲ್‌ ಕಟ್ಟಡದಲ್ಲಿ ಅಪರಿಚಿತ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದೆ. ಇದೀಗ ಮೃತದೇಹವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ವಾರಸುದಾರರು ನಗರ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಉಡುಪಿ ಬಸ್‌ ನಿಲ್ದಾಣದಿಂದ ಶ್ರೀ ಕೃಷ್ಣ ಮಠ ಪಾರ್ಕಿಂಗ್‌ ಗೆ ಹೋಗುವ ಮಾರ್ಗದಲ್ಲಿ ಕಾಮಗಾರಿ ಸ್ಥಗಿತಗೊಂಡಿರುವ ನಿರ್ಮಾಣ ಹಂತದ ಕನಕ ಮಹಲ್‌ ಕಟ್ಟಡದಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಮಾಹಿತಿ ತಿಳದ ಉಡುಪಿ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಕನೂನು ಪ್ರಕ್ರಿಯೆ ನಡೆಸಿದ್ದಾರೆ. ಸಮಾಜಸೇವಕ ನಿತ್ಯಾನಂದ ಒಳಕಾಡು ಹಾಗೂ ಸುನೀಲ್‌ ಬೈಲಕೆರೆ ಅವರು ಮೃತದೇಹವನ್ನು ಸಾಗಿಸಲು ಪೊಲೀಸರಿಗೆ ಸಹಾಯ ಮಾಡಿದ್ದು, ಮೃತದೇಹವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಇದೀಗ ಮೃತವ್ಯಕ್ತಿಯ ವಾರಿಸುದಾರರನ್ನು ನಗರ ಪೊಲೀಸ್‌ ಠಾಣೆಯನ್ನು ಸಂಪರ್ಕಿಸುವುದಾಗಿ ಸೂಚಿಸಲಾಗಿದೆ. ಇನ್ನೊಂದು ಭಯಾನಕ ವಿಷಯವೇನೆಂದರೆ ಪಾಳುಬಿದ್ದಿರುವ ಕನಕ ಮಹಲ್‌ ಬಹುಮಹಡಿ ಕಟ್ಟಡದಲ್ಲಿ ಪತ್ತೆಯಾದ ಶವಗಳ ಸಂಖ್ಯೆ ಆರಕ್ಕೆ ಏರಿದೆ. ವಾರದ ಹಿಂದೆಯಷ್ಟೇ ಇದೇ ಕಟ್ಟಡದಲ್ಲಿ ಮತ್ತೊಂದು ಶವ ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಕಟ್ಟಡಕ್ಕೆ ಅಪರಿಚಿತರು ಒಳನುಗ್ಗದಂತೆ ಕಾವಲುಗಾರರನ್ನು ನೇಮಿಸಬೇಕೆಂದು ಸಾರ್ವಜನಿಕರು ಕಟ್ಟಡಕ್ಕೆ ಸಂಬಂಧಪಟ್ಟವರಲ್ಲಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನ ಮ್ಯಾಟ್ರಸ್‌ ಫ್ಯಾಕ್ಟರಿಯಲ್ಲಿ ಭೀಕರ ಅಗ್ನಿ ಅವಘಡ

ಇದನ್ನೂ ಓದಿ : ಸಿನಿಮಾ ರೇಟಿಂಗ್‌ ಲಿಂಕ್‌ ಕ್ಲಿಕ್‌ ಮಾಡಿ 1.12 ಕೋಟಿ ರೂ. ಕಳೆದುಕೊಂಡ ದಂಪತಿ

ಇದನ್ನೂ ಓದಿ : Fire incident in market: ಸಂಜಯ್‌ ಮಾರ್ಕೆಟ್‌ನಲ್ಲಿ ಬೆಂಕಿ ಅವಘಡ : ಹಲವು ಅಂಗಡಿಗಳು ಬೆಂಕಿಗಾಹುತಿ

Dead body found in building: Udupi: A dead body was found in the dilapidated Kanaka Mahal building

Comments are closed.