Death of two women: ಕೋಟದಲ್ಲಿ ಮಕ್ಕಾಕ್ಕೆ ಹೋದ ಇಬ್ಬರು ಮಹಿಳೆಯರ ಸಾವು

ಉಡುಪಿ: (Death of two women) ಸೌದಿ ಅರೇಬಿಯಾದಲ್ಲಿರುವ ಮಕ್ಕಾ-ಮದೀನಾಕ್ಕೆ ಕೆಲವು ದಿನಗಳ ಹಿಂದೆ ಉಮ್ರಾ ಯಾತ್ರೆ ತೆರಳಿದ್ದ ಜಿಲ್ಲೆಯ ಇಬ್ಬರು ಮಹಿಳೆಯರು ಅಲ್ಲಿಯೇ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.ಮೃತ ಮಹಿಳೆಯರನ್ನು ಬ್ರಹ್ಮಾವರ ತಾಲೂಕಿನ ಮಧುವನ ಅಚ್ಲಾಡಿ ನಿವಾಸಿ ಮರಿಯಮ್ಮ (66 ವರ್ಷ) ಹಾಗೂ ಖತೀಜಮ್ಮ (68 ವರ್ಷ) ಎಂದು ಗುರುತಿಸಲಾಗಿದೆ.

ಮಂಗಳೂರಿನ ಏಜೆನ್ಸಿಯೊಂದರ ಮೂಲಕ ಮೂವತ್ತನಾಲ್ಕು ಮಂದಿ ಮಾ.1 ರಂದು ಉಮ್ರಾ ಯಾತ್ರೆ ತೆರಳಿದ್ದರು. ಉಮ್ರಾದಲ್ಲಿ ಪ್ರಯಾಣ ಮುಗಿಸಿ ಮದೀನಾಕ್ಕೆ ತೆರಳುವ ತಯಾರಿಯಲ್ಲಿದ್ದು, ಈ ವೇಳೆ ಮರಿಯಮ್ಮ ಮಾ. 9 ರಂದು ಮುಂಜಾನೆ ಐದು ಗಂಟೆಗೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಎರಡು ದಿನದ ನಂತರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಖತೀಜಮ್ಮ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಮೃತ ಮಹಿಳೆಯರಿಬ್ಬರು ಸಂಬಂಧಿಕರಾಗಿದ್ದು, ಇವರ ಅಂತ್ಯಕ್ರಿಯೆಯನ್ನು ಮಕ್ಕಾದಲ್ಲಿ ನೆರವೇರಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇನ್ನೂ ಮೃತ ಮಹಿಳೆಯರು ಸೇರಿದಂತೆ ಬ್ರಹ್ಮಾವರ ತಾಲೂಕಿನ ಕೋಟ ಮಧುವನ ಅಚ್ಲಾಡಿಯ ನಾಲ್ವರು ಮಹಿಳೆಯರಿದ್ದರು ಎಂದು ತಿಳಿದುಬಂದಿದೆ.

ಕಾಪು: ಖಾಸಗಿ ಬಸ್‌ ಢಿಕ್ಕಿ: ಶಾಲಾ ಬಾಲಕಿಗೆ ಗಂಭೀರ ಗಾಯ

ಕಾಪು: (Kapu bus accident) ಉಡುಪಿ ಸಮೀಪದ ಕಾಪುವಿನಲ್ಲಿ ವಿದ್ಯಾರ್ಥಿನಿ ಶಾಲೆಗೆ ತೆರಳುತ್ತಿದ್ದ ವೇಳೆ ಖಾಸಗಿ ಬಸ್‌ ಒಂದು ಢಿಕ್ಕಿ ಹೊಡೆದಿದ್ದು, ಬಾಲಕಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಆಸ್ಪತ್ರೆಗೆ ಸಾಗಿಸುವ ವೇಳೆ ಬಾಲಕಿ ಮೃತಪಟ್ಟಿದ್ದಾಳೆ. ಕಾಪು ಮಹಾದೇವಿ ಪ್ರೌಢಶಾಲೆಯ ಎಂಟನೆ ತರಗತಿ ವಿದ್ಯಾರ್ಥಿನಿ ವರ್ಷಿತಾ ಶೇರ್ವೆಗಾರ( ೧೩ ವರ್ಷ) ಎಂಬಾಕೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿ.

ಇಂದು ಬೆಳಿಗ್ಗೆ ಶಾಲೆಗೆ ತೆರಳುತ್ತಿದ್ದ ವೇಳೆ ವರ್ಷಿತಾ ರಾಷ್ಟ್ರೀಯ ಹೆದ್ದಾರಿ ೬೬ರ ಮಂದಾರ ಹೋಟೆಲ್‌ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ ಉಡುಪಿ ಕಡೆಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಖಾಸಗಿ ಬಸ್‌ ಅತೀ ವೇಗದಿಂದ ಬಂದು ವಿದ್ಯಾರ್ಥಿನಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ವರ್ಷಿತಾಳ ತಲೆಗೆ ತೀವ್ರ ಗಾಯಗಳಾಗಿದ್ದು, ವರ್ಷಿತಾಳನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆಗೆ ಸಾಸಿಸುವ ಮಾರ್ಗ ಮಧ್ಯೆ ಬಾಲಕಿ ಸಾವನ್ನಪ್ಪಿದ್ದಾಳೆ. ಇದೀಗ ಸ್ಥಳಕ್ಕೆ ಆಗಮಿಸಿದ ಕಾಪು ಪೊಲೀಸರು ಬಸ್ಸನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ.

ಇದನ್ನೂ ಓದಿ : ಕರಾವಳಿ ಜಂಕ್ಷನ್- ಮಲ್ಪೆ ವರೆಗಿನ ಚತುಷ್ಪಥ ರಸ್ತೆ ಕಾಮಗಾರಿ ಆರಂಭ

Death of two women: Death of two women who went to Makkah in Kota

Comments are closed.