ಪಾರಂಪಳ್ಳಿ- ಪಡುಕರೆ ಸೇತುವೆ ಕಾಮಗಾರಿ ವಿಳಂಭ : ಆತಂಕದಲ್ಲಿ ರೈತರು 

ಸಾಲಿಗ್ರಾಮ : ಹಲವು ದಶಕಗಳ ಕನಸಾಗಿರುವ ಪಾರಂಪಳ್ಳಿ – ಪಡುಕರೆ ಸೇತುವೆ (Parampalli-Padukare Bridge) ನಿರ್ಮಾಣಗೊಳ್ಳುತ್ತಿದೆ. ಇದರಿಂದಾಗಿ ಜನರು ಸಂತಸಗೊಂಡಿದ್ದರು. ಆದರೆ ಕಾಮಗಾರಿ ವಿಳಂಭವಾಗುತ್ತಿದ್ದು, ಮಳೆಗಾಲಕ್ಕೆ ಮೊದಲೇ ಕಾಮಗಾರಿ ಮುಕ್ತಾಯ ಕಾಣವುದು ಅನುಮಾನ. ಇದು ಈ ಭಾಗದ ರೈತರ ಆತಂಕಕ್ಕೆ ಕಾರಣವಾಗಿದೆ.

ಉಡುಪಿ ಜಿಲ್ಲೆಯ ಸಾಲಿಗ್ರಾಮ ಸಮೀಪದಲ್ಲಿರುವ ಪಡುಕೆರೆ ಹಾಗೂ ಪಾರಂಪಳ್ಳಿ ಸಂಪರ್ಕ ಕಲ್ಪಿಸಲು ಯಾವುದೇ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಈ ಭಾಗದ ಜನತೆ ಮರದ ಸೇತುವೆ ನಿರ್ಮಾಣ ಮಾಡಿದ್ದರು. ಆದರೆ ಶಾಶ್ವತ ಸೇತುವೆ ನಿರ್ಮಾಣಕ್ಕಾಗಿ ಈ ಭಾಗದ‌ ಜನರು ಹಲವು ವರ್ಷಗಳಿಂದಲೂ ಆಗ್ರಹಿಸುತ್ತಲೇ ಬಂದಿದ್ದರು. ಕೊನೆಗೂ 4 ಕೋಟಿ ರೂಪಾಯಿ ವೆಚ್ಚದಲ್ಲಿ  ಸೇತುವೆ ನಿರ್ಮಾಣದ ಕಾರ್ಯ ಆರಂಭವಾಗಿದೆ. ಸೇತುವೆಯ ಪಿಲ್ಲರ್  ನಿರ್ಮಾಣದ ಕಾರ್ಯ ಆರಂಭವಾಗಿದೆ. ಕಾಮಗಾರಿಗಾಗಿ ನದಿಗೆ ಅಡ್ಡಲಾಗಿ ಮಣ್ಣಿನ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಭಾಗಶಃ ಕೆಲಸ ಮುಗಿದಿದ್ದು, ಬರುವ ಮಳೆಗಾಲದೊಳಗೆ ಪೂರ್ಣಗೊಳ್ಳಬಹುದಾ ಅನ್ನೋ ಆತಂಕ ಕಾಡುತ್ತಿದೆ.

ಸೇತುವೆ ನಿರ್ಮಾಣದ ಕಾಮಗಾರಿಗಾಗಿ ಹೊಳೆಯ ನೀರಿಗೆ ಮಣ್ಣಿನ ತಡೆಗೋಡೆ ನಿರ್ಮಾಣ ಮಾಡಿದ್ದು, ಕಳೆದ ಜನವರಿಯಲ್ಲಿ ಸುತ್ತಲಿನ ಗದ್ದೆಗಳಿಗೆ ನೀರು ತುಂಬಿ ಉದ್ದಿನ ಬೆಳೆ ಹಾಗೂ ಭತ್ತದ ಬೆಳೆಗಳು ಸಂಪೂರ್ಣ ಹಾಳಾಗಿತ್ತು. ಸೇತುವೆ ಕಾಮಗಾರಿಯ ವೇಳೆಯಲ್ಲಿ ಸರಿಯಾದ ಕ್ರಮ ಅನುಸರಿಸದೇ ಇರುವುದೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸೇತುವೆ ನಿರ್ಮಾಣದ ವೇಳೆ ಮುನ್ನೆಚ್ಚರಿಕೆ ವಹಿಸಬೇಕಾಗಿರುವುದು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿ. ಆದರೆ ಸೇತುವೆ ಕಾಮಗಾರಿಯಿಂದಾಗಿ ಸುತ್ತ ಮುತ್ತಲಿನ ಗದ್ದೆಗಳು ಫಲವತ್ತತೆಯನ್ನು ಕಳೆದುಕೊಂಡಿವೆ.

ಇದನ್ನೂ ಓದಿ : Mangaluru accident : ಮಂಗಳೂರು : ಬಸ್- ಕಾರು ನಡುವೆ ಭೀಕರ ಅಪಘಾತ: ಆರು ಮಂದಿ ಸಾವು

ಇದನ್ನೂ ಓದಿ : Kundapur Assembly Constitution: ಕುಂದಾಪುರ ವಿಧಾನಸಭಾ ಕ್ಷೇತ್ರ : ಇಂದು ಬಿಜೆಪಿ ಕಾರ್ಯಕರ್ತರ ಬೃಹತ್ ಸಭೆ

ಇನ್ನು ಮಳೆಗಾಲದಲ್ಲಿ ಹೊಳೆ ನೀರು ಹೆಚ್ಚಿನ ಪ್ರಮಾಣದಲ್ಲಿ ತುಂಬಲಿದ್ದು, ಇದು ಮುಂದಿನ ವರ್ಷದ ಭತ್ತದ, ಉದ್ದಿನ ಬೆಳೆಗೂ ತೊಂದರೆ ಆಗುವ ಭೀತಿ ಉಂಟಾಗಿದೆ. ಮಳೆಗಾಲದ ಒಳಗಾಗಿ ಸೇತುವೆ ಕಾಮಗಾರಿ ಮುಗಿಯದಿದ್ದರೆ  ಈ ಭಾಗದ ರೈತರಿಗೆ ಎಲ್ಲ ರೀತಿಯ ಸಮಸ್ಯೆಗಳು ಎದುರಾಗಲಿದೆ. ಒಂದು ಕಡೆ ರಸ್ತೆ ಸಂಪೂರ್ಣ ಕಾಂಕ್ರೀಟೀಕರಣ ಮಾಡಲಾಗಿದ್ದು, ಇನ್ನೊಂದು ಕಡೆ ಸಂಪೂರ್ಣ ಹದಗೆಟ್ಟಿದೆ. ಇದರಿಂದ ಸಂಚರಿಸುವ ಜನರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಈ‌ ಕುರಿತು ಅಧಿಕಾರಿಗಳು ಎಚ್ಚೆತ್ತು ಸೇತುವೆ ಕಾಮಗಾರಿಯನ್ನು ಶೀಘ್ರದಲ್ಲಿಯೇ ಮುಗಿಸುವತ್ತ ಗಮನಹರಿಸಬೇಕಾಗಿದೆ.

Delay in Parampalli-Padukare bridge work: Farmers are worried

Comments are closed.