Gujarat all our for 54 runs : ಟಾರ್ಗೆಟ್ 73, ಗುಜರಾತ್ 54ಕ್ಕೆ ಆಲೌಟ್; ರಣಜಿ ಟ್ರೋಫಿಯಲ್ಲೊಂದು ಅಚ್ಚರಿಯ ಫಲಿತಾಂಶ

ನಾಗ್ಪುರ : ಆ ಪಂದ್ಯವನ್ನು ಗೆಲ್ಲಲು ಗುಜರಾತ್ ಮುಂದಿದ್ದ ಗೆಲುವಿನ ಗುರಿ ಕೇವಲ 73 ರನ್. ಗೆಲುವು ನಮ್ಮದೇ ಎಂದು ಬೀಗುತ್ತಿದ್ದ ಗುಜರಾತ್’ಗೆ ನಂಬಲು ಸಾಧ್ಯವಾದಂತಹ (Gujarat all our for 54 runs) ಶಾಕ್. ಯಾಕೆಂದರೆ ವಿದರ್ಭ ಒಡ್ಡಿದ ಜುಜುಬಿ ಟಾರ್ಗೆಟ್ಟನ್ನು ಬೆನ್ನಟ್ಟಿದ ಗುಜರಾತ್ ಕೇವಲ 54 ರನ್ನಿಗೆ ನೆಗೆದು ಬಿತ್ತು. ಇದು ನಾಗ್ಪುರದಲ್ಲಿ ನಡೆದ ಗುಜರಾತ್ Vs ವಿದರ್ಭ (Gujarat Vs Vidarbha Ranji match) ನಡುವಿನ ರಣಜಿ ಪಂದ್ಯದ (Ranji Trophy 2022-23) ವಿಶೇಷತೆ.

ನಾಗ್ಪುರದ ಜಮ್ತಾ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಆತಿಥೇಯ ವಿದರ್ಭ, ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ ಕೇವಲ 74 ರನ್ನಿಗೆ ಆಲೌಟಾಗಿತ್ತು. ಇದಕ್ಕೆ ಪ್ರತಿಯಾಗಿ ಗುಜರಾತ್ ತನ್ನ ಮೊದಲ ಇನ್ನಿಂಗ್ಸ್’ನಲ್ಲಿ 256 ರನ್ ಗಳಿಸಿ 182 ರನ್’ಗಳ ದೊಡ್ಡ ಮುನ್ನಡೆ ಪಡೆದಿತ್ತು.

ನಂತರ ವಿದರ್ಭ ತಂಡ ತನ್ನ ದ್ವಿತೀಯ ಇನ್ನಿಂಗ್ಸ್’ನಲ್ಲಿ ತಿರುಗೇಟು ನೀಡಿ 254 ರನ್ ಗಳಿಸಿತು. ಪ್ರಥಮ ಇನ್ನಿಂಗ್ಸ್’ನಲ್ಲಿ 182 ರನ್’ಗಳ ಮುನ್ನಡೆ ಪಡೆದಿದ್ದ ಗುಜರಾತ್ ಗೆಲುವಿಗೆ ಬೇಕಿದ್ದದ್ದು ಕೇವಲ 73 ರನ್. ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಗುಜರಾತ್’ಗೆ ವಿದರ್ಭದ ಎಡಗೈ ಸ್ಪಿನ್ನರ್ ಆದಿತ್ಯ ಸರ್ವಾಠೆ ಶಾಕ್ ಕೊಟ್ಟರು. 17 ರನ್ ನೀಡಿ 6 ವಿಕೆಟ್ ಉರುಳಿಸಿದ ಸರ್ವಾಠೆ ವಿದರ್ಭ ತಂಡಕ್ಕೆ 18 ರನ್’ಗಳ ರೋಚಕ ಗೆಲುವು ತಂದುಕೊಟ್ಟರು.

ಇದನ್ನೂ ಓದಿ : Yuvraj Singh – Shubman Gill : ದ್ವಿಶತಕ ವೀರ ಶುಭಮನ್ ಗಿಲ್‌ಗೆ ಯುವರಾಜನೇ ದ್ರೋಣಾಚಾರ್ಯ

ಇದನ್ನೂ ಓದಿ : Virat Kohli’s successor in Team India: ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಉತ್ತರಾಧಿಕಾರಿ ಇವನೇ..!

ಇದನ್ನೂ ಓದಿ : Shubman Gill double century: ಗಿಲ್ ಗಿಲ್ ಗಿಲ್ಲಕ್ಕು, ಶುಭಮನ್ ಗಿಲ್ ಡಬಲ್ ಸೆಂಚುರಿ ಕಿಕ್ಕು ; ಭರ್ಜರಿ ದ್ವಿಶತಕ ಸಿಡಿಸಿದ ಪಂಜಾಬ್ ಕಾ ಪುತ್ತರ್

ಹರ್ಷ್ ದುಬೇ 11 ರನ್ನಿತ್ತು 3 ವಿಕೆಟ್ ಉರುಳಿಸಿದರು. ಗುಜರಾತ್ ಪರ ಸಿದ್ಧಾರ್ಥ್ ದೇಸಾಯಿ 18 ರನ್ ಗಳಿಸಿದ್ದನ್ನು ಹೊರತು ಪಡಿಸಿದರೆ ಉಳಿದವರೆಲ್ಲರದ್ದು ಸಿಂಗಲ್ ಡಿಜಿಟ್ ಸ್ಕೋರ್.ಪ್ರಥಮ ಇನ್ನಿಂಗ್ಸ್’ನಲ್ಲೂ 54 ರನ್ನಿತ್ತು 5 ವಿಕೆಟ್ ಪಡೆದಿದ್ದ ಆದಿತ್ಯ ಸರ್ವಾಠೆ ದ್ವಿತೀಯ ಇನ್ನಿಂಗ್ಸ್’ನಲ್ಲಿ 6 ವಿಕೆಟ್ ಪಡೆಯುವ ಮೂಲಕ ಪಂದ್ಯದಲ್ಲಿ ಒಟ್ಟು11 ವಿಕೆಟ್’ಗಳೊಂದಿಗೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

Gujarat all our for 54 runs : Target 73, Gujarat all out for 54; A surprising result in the Ranji Trophy

Comments are closed.