ಆಸ್ಟಿನ್ : ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಕಾವು ದಿನೇ ದಿನೆ ಹೆಚ್ಚಾಗುತ್ತಿದೆ. ಟೆಕ್ಸಾಸ್ ಲೇಕ್ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರ ನಡೆದ ಪರೇಡ್ ಸಂದರ್ಭದಲ್ಲಿ ಐದು ಬೋಟ್ಗಳು ಮುಳುಗಿ ದುರಂತ ಸಂಭವಿಸಿದೆ.

ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಬೋಟ್ ರಾಲಿ ಹಮ್ಮಿಕೊಳ್ಳಲಾಗಿತ್ತು. ಬೋಟುಗಳು ಪರೇಡ್ ಆರಂಭಿಸುತ್ತಿದ್ದಂತೆ ಲೇಕ್ನಲ್ಲಿ ಬೃಹದಾಕಾರದ ಅಲೆಗಳು ಸೃಷ್ಟಿಯಾಗಿದ್ದವು.

ಪರಿಣಾಮ ಐದು ಬೋಟ್ಗಳು ಸಮತೋಲನ ಕಳೆದುಕೊಂಡು ಮಗುಚಿಬಿದ್ದು ಮುಳುಗಿದವು. ಬೋಟುಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಟ್ರಂಪ್ ಬೆಂಬಲಿಗರಿದ್ದರು.

ಅಪಾಯವನ್ನರಿತು ಮುಳುಗಡೆಯಾದ ಬೋಟುಗಳಲ್ಲಿದ್ದ ಜನರನ್ನು ರಕ್ಷಿಸಲಾಗಿದೆ. ಸುಮಾರು 19,000 ಎಕರೆ ಪ್ರದೇಶದಲ್ಲಿ ಈ ಸರೋವರವಿದ್ದು, ಬೃಹತ್ ಅಲೆಗಳೇ ಬೋಟ್ ದುರಂತಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


