ನಾಯಿ ನೋಡಿಕೊಳ್ಳುವವರು ಬೇಕಾಗಿದ್ದಾರೆ : ಸಂಬಳ ತಿಂಗಳಿಗೆ 45,000 ರೂ. !

0

ನವದೆಹಲಿ : ನಾಯಿ ನೋಡಿಕೊಳ್ಳುವವರು ಬೇಕಾಗಿದ್ದಾರೆ. ತಿಂಗಳ ವೇತನ ಬರೋಬ್ಬರಿ 45,000 ರೂಪಾಯಿ. ಆದರೆ ನಾಯಿ ನೋಡಿಕೊಳ್ಳುವ ಕೆಲಸಕ್ಕೆ ಅರ್ಜಿ ಹಾಕಬೇಕಾದ್ರೆ ನೀವು ಕಡ್ಡಾಯವಾಗಿ ಇಂಜಿನಿಯರಿಂಗ್ ಪದವಿ ಅಥವಾ ಬಿಎ, ಬಿಎಸ್ಸಿ , ಬಿ.ಕಾಂ, ಬಿ.ಟೆಕ್  ಇಲ್ಲಾ ತತ್ಸಮಾನ ಹುದ್ದೆಯನ್ನು ಹೊಂದಿರಲೇ ಬೇಕು !

ಇದೇನಪ್ಪಾ ಅಂತಾ ಆಶ್ಚರ್ಯವಾಯ್ತಾ. ಹೌದು, ಇಂತಹದ್ದೊಂದು ಕೆಲಸದ ಆಫರ್ ಕೊಟ್ಟಿರುವುದು ಯಾವುದೋ ಖಾಸಗಿ ವ್ಯಕ್ತಿಗಳಲ್ಲ. ಬದಲಾಗಿ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ದೆಹಲಿ ಐಐಟಿ.

ನಾಯಿಯನ್ನು ನೋಡಿಕೊಳ್ಳುವವರಿಗೆ ತಿಂಗಳಿಗೆ 45 ಸಾವಿರ ರೂಪಾಯಿ ಸಂಬಳವನ್ನು ನೀಡುವುದಾಗಿ ಐಐಟಿ ಜಾಹೀರಾತನ್ನು ಪ್ರಕಟಿಸಿದೆ. ಆದ್ರೀಗ ಸಂಬಳದ ವಿಚಾರವಲ್ಲ. ನಾಯಿಯನ್ನು ನೋಡಿಕೊಳ್ಳಲು ಇರಬೇಕಾದ ಅರ್ಹತೆಯ ಬಗ್ಗೆ ಇದೀಗ ಚರ್ಚೆ ನಡೆಯುತ್ತಿದೆ.

ನಾಯಿಯನ್ನು ನೋಡಿಕೊಳ್ಳುವ ಕೆಲಸಕ್ಕೆ ಅರ್ಜಿ ಸಲ್ಲಿಸುವವರು ಕೇವಲ ಪದವಿ ಪಡೆದಿದ್ರೆ ಸಾಲದು ಜೊತೆಗೆ 21 ರಿಂದ 35 ವರ್ಷದ ಒಳಗಿನವರು ಮಾತ್ರವೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇನ್ನು ಶೈಕ್ಷಣಿಕ, ವರ್ಷದ ಅರ್ಹತೆಯಿದ್ರೆ ಸಾಕಾಗೋದಿಲ್ಲ ಬದಲಾಗಿ ಅರ್ಜಿ ಸಲ್ಲಿಸುವವರ ಬಳಿಯಲ್ಲಿ ನಾಯಿಯನ್ನು ಪಶು ಆಸ್ಪತ್ರೆ ಹಾಗೂ ಹೊರಗಡೆ ಕರೆದೊಯ್ಯಲು ಅನುಕೂಲಕರ ವಾದ ನಾಲ್ಕು ಚಕ್ರದ ಸ್ವತಃ ವಾಹನವನ್ನು ಹೊಂದಿರಬೇಕು, ಐಐಟಿ ಪ್ರಕಟಿಸಿರುವ ಜಾಹೀರಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಸಾಕಷ್ಟು ಮಂದಿ ಐಐಟಿ ವಿರುದ್ದ ಹರಿಹಾಯುತ್ತಿದ್ದಾರೆ. ನಾಯಿಯನ್ನು ನೋಡಿಕೊಳ್ಳಲು ಇಂಜಿನಿಯರಿಂಗ್ ಪದವೀಧರರೇ ಯಾಕೆ ಅಂತಾನೂ ಪ್ರಶ್ನಿಸುತ್ತಿದ್ದಾರೆ. ಇನ್ನು ಹಲವರು ಪಶುಸಂಗೋಪನಾ ಇಲಾಖೆಗೂ ಪದವಿ ಅರ್ಹತೆಗೂ ಏನು ಸಂಬಂಧವೆನ್ನುತ್ತಿದ್ದಾರೆ.

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಈ ರೀತಿಯ ಜಾಹೀರಾತು ಪ್ರಕಟಿಸುತ್ತಿರೋದು ನ್ಯಾಯಯುತವಲ್ಲಾ ಅಂತಾನೂ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ದೆಹಲಿ ಐಐಟಿಗೆ ನಾಯಿಯನ್ನು ನೋಡಿಕೊಳ್ಳಲು ಎಂಜಿನಿಯರ್ ಏಕೆ ಬೇಕು ಎಂದು ಹಲವರು ಆಶ್ಚರ್ಯ ಪಡುತ್ತಾರೆ. ಐಐಟಿಗಳಿಗೆ ಈ ಕೆಲಸವನ್ನು ಪಡೆಯುವ ಯೋಚನೆಯನ್ನು ಅನೇಕರು ಅಪಹಾಸ್ಯ ಮಾಡುತ್ತಾರೆ.

ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಇಂದಿನ ದಿನಗಳಲ್ಲಿ ಲಕ್ಷಾಂತರ ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ದೇಶದ ಆರ್ಥಿಕತೆಯು ಕೆಟ್ಟ ಸ್ಥಿತಿಯನ್ನು ತಲುಪಿದೆ. ಇಂತಹ ಸಮಯದಲ್ಲಿ ಐಐಟಿ ಪ್ರಕಟಿಸಿರುವ ಜಾಹೀರಾತು ಯುವ ಸಮುದಾಯದಲ್ಲಿ ಆತಂಕವನ್ನು ತಂದೊಡ್ಡಿದೆ.

https://twitter.com/ErAmitGupta01/status/1302447003738075137
Leave A Reply

Your email address will not be published.