Drugs Young Woman rape: ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ, ಸುಲಿಗೆ : ಆರೋಪಿ ಅರೆಸ್ಟ್‌

ಮೂಡುಬಿದಿರೆ : ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಗೆ ಡ್ರಗ್ಸ್‌ ನೀಡಿ, ಅತ್ಯಾಚಾರ (Drugs Young Woman rape) ಎಸಗಿದ್ದಾನೆ. ಅಲ್ಲದೇ ನಂತರ ಆಕೆಯಿಂದಲೇ ಹಣ ಸುಲಿಗೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಆರೋಪಿಯೋರ್ವರನ್ನು ಮಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಉಳ್ಳಾಲದ ಪೆರ್ಮನ್ನೂರು ಗ್ರಾಮದ ಶಾನ್ ನವಾಸ್ (36 ವರ್ಷ) ಬಂಧಿತ ಆರೋಪಿ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ನಿವಾಸಿ ಯುವತಿಯನ್ನು ಮದುವೆಯಾಗುವುದಾಗಿ ನವಾಸ್‌ ನಂಬಿಸಿದ್ದಾನೆ. ನಂತರದಲ್ಲಿ ಆಕೆಗೆ ಬಲವಂತವಾಗಿ ಡ್ರಗ್ಸ್‌ ನೀಡಿದ್ದಾನೆ. ಆಕೆಯ ಮೇಲೆ ಅತ್ಯಾಚಾರ ಎಸಗಿ ನಗ್ನ ಪೋಟೋಗಳನ್ನು ಸೆರೆ ಹಿಡಿದು, ಆಕೆಗೆ ಹಣ ನೀಡುವಂತೆ ಬೆದರಿಕೆ ಒಡ್ಡಿದ್ದಾನೆ. ಯುವತಿಗೆ ಬೆದರಿಕೆ ಒಡ್ಡಿ ಸುಮಾರು 1 ಲಕ್ಷದ 50 ಸಾವಿರ ರೂ ಸುಲಿಗೆ ಮಾಡಿದ್ದಾನೆ.

ಅಷ್ಟೇ ಅಲ್ಲದೇ ಯುವತಿಯನ್ನು ಬೆದರಿಸಿ ಲಾಡ್ಜ್‌ಗಳಿಗೆ ಕರೆದೊಯ್ದು ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ. ಈ ಬಗ್ಗೆ ಸಂತ್ರಸ್ತೆ ಇದೀಗ ಮಂಗಳೂರು ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಮಹಿಳಾ ಪೊಲೀಸರು ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ್ದಾರೆ. ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆರೋಪಿ ಶಾನ್‌ ನವಾಜ್‌ ಗೆ ಏಳು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿದೆ.

ನೊಂದ ಯುವತಿಯನ್ನು ಮಹಿಳಾ ಸಾಂತ್ವಾನ ಕೇಂದ್ರಕ್ಕೆ ದಾಖಲು ಮಾಡಲಾಗಿದ್ದು, ಆಕೆಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಶಾನ್‌ ನವಾಜ್‌ ವಿರುದ್ದ ಈ ಹಿಂದೆ ಮಾದಕ ವಸ್ತು ಮಾರಾಟದಲ್ಲಿ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ 2019 ಹಾಗೂ 2020 ರಲ್ಲಿ ಮಂಗಳೂರು ನಗರದ ಸೆನ್ ಪೊಲೀಸ್ ಠಾಣೆ ಎರಡು ಪ್ರಕರಣ ದಾಖಲಾಗಿದೆ. ಇದೀಗ ಆರೋಪಿಯ ವಿರುದ್ದ ಅತ್ಯಾಚಾರ ಪ್ರಕರಣದ ಜೊತೆಗೆ ಮಾಧಕ ವಸ್ತು ಮಾರಾಟದ ಕುರಿತು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ತಾಯಿ ಮತ್ತು ಮಗಳ ಕೊಲೆ ಪ್ರಕರಣ : 48 ಗಂಟೆಯೊಳಗೆ ಆರೋಪಿ ಬಂಧನ

ಇದನ್ನೂ ಓದಿ : ಯುವತಿ ಮೇಲೆ ಆಸಿಡ್​ ದಾಳಿ ಪ್ರಕರಣ : ಆಸಿಡ್​ ನಾಗೇಶ್​ ತಮಿಳುನಾಡಿನಲ್ಲಿ ಬಂಧನ

Drugs Young Woman rape : accused Arrest in Mangalore

Comments are closed.