Shoot Out Acid Nagesh : ಆಸಿಡ್‌ ನಾಗೇಶ್‌ ಎಸ್ಕೇಪ್‌ ಆಗಲು ಯತ್ನ : ಕಾಲಿಗೆ ಗುಂಡೇಟು

ಬೆಂಗಳೂರು : ಪ್ರೀತಿಗೆ ನಿರಾಕರಿಸಿದ ಯುವತಿಯ ಮೇಲೆ ಆಸಿಡ್‌ ದಾಳಿ ನಡೆಸಿದ್ದ ಆರೋಪಿ ನಾಗೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಬೆಂಗಳೂರಿಗೆ ಕರೆತರುವ ವೇಳೆಯಲ್ಲಿ ಆರೋಪಿ ನಾಗೇಶ್‌ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ನಾಗ ಕಾಲಿಗೆ ಗುಂಡೇಟು (Shoot Out Acid Nagesh) ನೀಡಿದ್ದಾರೆ.

ಬೆಂಗಳೂರಿನಿಂದ ಎಸ್ಕೇಪ್‌ ಆಗಿದ್ದ ಆಸಿಡ್‌ ನಾಗ ತಮಿಳುನಾಡಿನ ತಿರುವಣ್ಣಾ ಮಲೈ ಆಶ್ರಮದಲ್ಲಿ ವೇಷ ಮರೆಯಿಸಿಕೊಂಡಿದ್ದ. ಆದರೆ ಪೊಲೀಸರು ಸಿನಿಮಾ ಶೈಲಿಯಲ್ಲಿ ಆರೋಪಿ ಯನ್ನು ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದಾರೆ. ಆದರೆ ಕೆಂಗೇರಿ ಬ್ರಿಡ್ಜ್‌ ಬಳಿಗೆ ಬರುತ್ತಿದ್ದಂತೆಯೇ ಮೂತ್ರ ವಿಸರ್ಜನೆಗೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದಾನೆ. ಹೀಗಾಗಿ ಪೊಲೀಸರು ಆತನನ್ನು ಕೆಂಗೇರಿ ಪ್ಲೈ ಓವರ್‌ ಮೇಲೆ ನಿಲ್ಲಿಸಿದ್ದಾರೆ. ಈ ವೇಳೆಯಲ್ಲ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆತನನ್ನು ಹಿಡಿಯಲು ಹೋದ ಕಾನ್‌ಸ್ಟೇಬಲ್‌ ಮಹಾದೇವಯ್ಯ ಎಂಬವರ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಲೆಯಲ್ಲಿ ಕಾಮಾಕ್ಷಿಪಾಳ್ಯ ಠಾಣೆಯ ಇನ್‌ಸ್ಪೆಕ್ಟರ್‌ ಪ್ರಶಾಂತ್‌ ಒಂದು ಬಾರಿ ಗುಂಡು ಹಾರಿಸಿದ್ದಾರೆ. ಗಾಯಗೊಂಡಿರುವ ಆರೋಪಿ ನಾಗೇಶ್‌ನನ್ನು ಬಿಜಿಎಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಪಶ್ಚಿಮ ವಲಯದ ಡಿಜಿಪಿ ಸಂಜೀವ್ ಪಾಟೀಲ್‌ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.

Acid Nagesh : ಸ್ವಾಮೀಜಿ ವೇಷ ಧರಿಸಿದ್ದ ಪಾಪಿ ನಾಗೇಶ

ಸುಂಕದಕಟ್ಟೆಯಲ್ಲಿ ಯುವತಿಯ ಮೇಲೆ ಆಸಿಡ್‌ ದಾಳಿ ನಡೆಸಿದ್ದ ಆಸಿಡ್‌ ನಾಗೇಶ ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ಆಶ್ರಮ ಸೇರಿಕೊಂಡಿದ್ದ. ತನಗೆ ಬರುತ್ತಿದ್ದ ತಮಿಳು ಭಾಷೆಯನ್ನೇ ಬಂಡವಾಳ ಮಾಡಿಕೊಂಡಿದ್ದ ನಾಗೇಶ, ತಿರುವಣ್ಣಾಮಲೈನ ರಮಣ ಮಹರ್ಷಿ ಅವರ ವಿಶ್ವಾಸವನ್ನು ಪಡೆದು ಮಠದಲ್ಲಿ ಸ್ವಾಮೀಜಿ ಧಿರಿಸಿನಲ್ಲಿ ಬದಲಾಗಿದ್ದಾನೆ. ಸಾವಿರಾರು ಜನರ ಜೊತೆಯಲ್ಲಿ ಧ್ಯಾನ ಮಾಡುವಾಗ ತನ್ನನ್ನು ಯಾರೂ ಗುರುತಿಸುವುದಿಲ್ಲ ಅನ್ನೋ ಲೆಕ್ಕಾಚಾರ ಹಾಕಿಕೊಂಡಿದ್ದ. ಆದರೆ ಪೊಲೀಸರು ಆರೋಪಿಯ ವಿರುದ್ದ ಲುಕ್‌ ಔಟ್‌ ನೋಟಿಸ್‌ ಜಾರಿ ಮಾಡಿದ್ದರು. ಆದರೆ ಈ ನೋಟಿಸ್‌ ನೋಡಿದ ಮಠದ ಸಿಬ್ಬಂದಿಯೋರ್ವರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಸ್ವಾಮೀಜಿ ವೇಷ ಧರಿಸಿ ಆರೋಪಿ ನಾಗೇಶ್‌ನನ್ನು ಬಂಧಿಸಿದ್ದಾರೆ.

15 ಸಾವಿರ ಲಾಡ್ಜ್‌ನಲ್ಲಿ ಹುಡುಕಾಟ

ಬೆಂಗಳೂರಿನಿಂದ ಎಸ್ಕೇಪ್‌ ಆಗಿದ್ದ ನಾಗೇಶ್‌ ತಮಿಳುನಾಡು ಸೇರಿಕೊಂಡಿದ್ದಾನೆ. ಆದರೆ ಪೊಲೀಸರು ನಾಗೇಶ್‌ಗಾಗಿ ವಿಶೇಷ ತಂಡವನ್ನು ರಚಿಸಿಕೊಂಡು ಇನ್ನಿಲ್ಲದಂತೆ ಹುಡುಕಾಟ ನಡೆಸಿದ್ದಾರೆ. ಅದ್ರಲ್ಲೂ ಪೊಲೀಸರು ಆರೋಪಿಗಾಗಿ ಬರೋಬ್ಬರಿ 15 ಸಾವಿರ ಲಾಡ್ಜ್‌ನಲ್ಲಿ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಕಠಿಣ ಶಿಕ್ಷೆ ನೀಡಿ ಎಂದ ಸಂತ್ರಸ್ತ ಯುವತಿ

ಆಸಿಡ್‌ ದಾಳಿ ನಡೆಸಿರುವ ನಾಗೇಶ್‌ನಿಗೆ ತನ್ನ ಕಣ್ಣ ಎದುರಲ್ಲೇ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಆಸಿಡ್‌ ದಾಳಿಗೆ ಒಳಗಾಗಿರುವ ಯುವತಿ ಆಗ್ರಹಿಸಿದ್ದಾಳೆ. ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಯುವತಿ ಆಸ್ಪತ್ರೆಯಲ್ಲಿ ಚೇತರಿಕೆಯನ್ನು ಕಾಣುತ್ತಿದ್ದಾಳೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :‌ ಯುವತಿ ಮೇಲೆ ಆಸಿಡ್​ ದಾಳಿ ಪ್ರಕರಣ : ಆಸಿಡ್​ ನಾಗೇಶ್​ ತಮಿಳುನಾಡಿನಲ್ಲಿ ಬಂಧನ

ಇದನ್ನೂ ಓದಿ : ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ, ಸುಲಿಗೆ : ಆರೋಪಿ ಅರೆಸ್ಟ್‌

Bangalore Police Shoot out Acid Nagesh Leg Kengeri Bridge

Comments are closed.