E-Paper Election Focus : ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮುಂದಾದ ಸ್ವೀಪ್‌ ಸಮಿತಿ : ದ.ಕ ದಲ್ಲಿ ಇ-ಪೇಪರ್‌ ಪ್ರಾರಂಭ

ದಕ್ಷಿಣ ಕನ್ನಡ : (E-Paper Election Focus) ಕರ್ನಾಟಕ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡದ ಸ್ವೀಪ್‌ ಸಮಿತಿಯು ಚುನಾವಣೆಗಳ ಕುರಿತಾಗಿ ದೈನಂದಿನ ಇ-ಪೇಪರ್‌ ಎಲೆಕ್ಷನ್‌ ಫೋಕಸ್‌ ಅನ್ನು ಪ್ರಾರಂಭಿಸಿದೆ. ಜನಸಾಮಾನ್ಯರಲ್ಲಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜೊತೆಗೆ ಮತದಾರರು ಮತದಾನ ಮಾಡುವಂತೆ ಉತ್ತೇಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಸ್ವೀಪ್‌ ಸಮೀತಿಯು ಇ-ಪೇಪರ್‌ ಅನ್ನು ಬಿಡುಗಡೆ ಮಾಡಿದ್ದು, ಈ ಕುರಿತು ಮಾತನಾಡಿದ ಸಮಿತಿಯ ಅಧ್ಯಕ್ಷ ಕುಮಾರ್‌ ” ಜನ ಸಾಮಾನ್ಯರಲ್ಲಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜೊತೆಗೆ ಮತದಾರರು ಮತದಾನ ಮಾಡುವಂತೆ ಉತ್ತೇಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ.” ಎಂದರು. ಇದೊಂದು ಸ್ವೀಪ್‌ ಸಮಿತಿಯ ವಿನೂತನ ಚಟುವಟಿಕೆಯಾಗಿದ್ದು, ಕನ್ನಡ ಭಾಷೆಯಲ್ಲೇ ನಾಲ್ಕರಿಂದ ಐದು ಪುಟಗಳನ್ನು ಒಳಗೊಂಡಿರುವ ಎಲೆಕ್ಟ್ರಾನಿಕ್‌ ಪೇಪರ್‌ ಇದಾಗಿದೆ.

ಎಲೆಕ್ಷನ್ ಫೋಕಸ್ ಎನ್ನುವುದು SVEEP ಸಮಿತಿಯ ಚಟುವಟಿಕೆಗಳ ವಿವರಗಳು, ಅದರ ಕ್ರಿಯಾ ಯೋಜನೆಗಳು ಜೊತೆಗೆ ಅನುಷ್ಠಾನದ ತಂತ್ರಗಳು ಮತ್ತು ಮುಂಬರುವ ರಾಜ್ಯದ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಲೇಖಕರ ಲೇಖನಗಳು, ಕವನಗಳು, ಕಥೆಗಳು, ಉಲ್ಲೇಖಗಳು, ಮತ್ತು ಅಭಿಪ್ರಾಯಗಳನ್ನು ಹೊಂದಿರುತ್ತದೆ. ಇದಲ್ಲದೇ ಸ್ವೀಪ್‌ ಸಮಿತಿಯಿಂದ ಬಿಡುಗಡೆಯಾದ ಇ-ಪೇಪರ್‌ ಅನ್ನು ಸಾಮಾಜಿಕ ಜಾಲತಾಣಗಳಾದ ಫೇಸ್‌ ಬುಕ್‌, ಟ್ವಿಟ್ಟರ್‌, ಇನ್ಸ್ಟಾಗ್ರಾಮ್‌, ವಾಟ್ಸಾಪ್‌ ಹಾಗೂ ಟೆಲಿಗ್ರಾಮ್‌ ಮೂಲಕ ಮತದಾರರಲ್ಲಿ ಪ್ರಸಾರ ಮಾಡಲಾಗುತ್ತದೆ. ಇದಲ್ಲದೇ ಪಿಯುಸಿ ಹಾಗೂ ಪದವಿ ಕಾಲೇಜು ವಿಭಾಗಗಳ ಮೂಲಕ ಎಲ್ಲಾ ಯುವ ಮತದಾರರನ್ನು ತಲುಪುವ ಗುರಿಯನ್ನು ಸ್ವೀಪ್‌ ಸಮಿತಿ ಹೊಂದಿದೆ.

ಇದನ್ನೂ ಓದಿ : Haladi Srinivasa Shetty retires: ಹಾಲಾಡಿಯವರು ರಾಜಕೀಯ ನಿವೃತ್ತಿ ಘೋಷಿಸಿರುವುದು ಸ್ವಂತ ನಿರ್ಧಾರವೇ ? ಈ ಬಗ್ಗೆ ಜನರ ಅಭಿಪ್ರಾಯವೇನು..

ಇದಲ್ಲದೇ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಮಾಸ್ಟರ್ ಟ್ರೈನರ್‌ಗಳು, ಡಿಡಿಪಿಐ, ಬಿಇಒಗಳು, ತಹಶೀಲ್ದಾರ್‌ಗಳು, ತಾಲ್ಲೂಕು ಪಂಚಾಯಿತಿ ಬಿಇಒಗಳು ಮತ್ತು ಎಲ್ಲಾ ಇಲಾಖೆ ಮುಖ್ಯಸ್ಥರು ಇ-ಪೇಪರ್ ಅನ್ನು ಪ್ರತಿಯೊಬ್ಬ ಮತದಾರರಿಗೆ ತಲುಪುವವರೆಗೆ ಪ್ರಸಾರ ಮಾಡುವ ಜವಾಬ್ದಾರಿಯನ್ನು ಸ್ವೀಪ್‌ ಸಮಿತಿ ತೆಗೆದುಕೊಳ್ಳಲಿದೆ. SVEEP ಚಟುವಟಿಕೆಗಳ ಬಗ್ಗೆ ಮತದಾರರಿಗೆ ಅರಿವು ಮೂಡಿಸುವುದು ಇ-ಪೇಪರ್‌ ನ ಮುಖ್ಯ ಉದ್ದೇಶವಾಗಿದೆ ಎಂದು ಸ್ವೀಪ್‌ ಸಮಿತಿಯ ಅಧ್ಯಕ್ಷ ಕುಮಾರ್ ಹೇಳಿದ್ದಾರೆ.

E-Paper Election Focus: Sweep committee to create awareness about the importance of voting: E-Paper launched in D.K.

Comments are closed.