ಮಂಗಳೂರಲ್ಲಿ ಶಾಸಕ ವೇದವ್ಯಾಸ್ ಕಾಮತ್ ವಿರುದ್ದ ಆಕ್ರೋಶ : ಚುನಾವಣೆ ಬಹಿಷ್ಕರಿಸಿದ ಬಿಜೈ ನಿವಾಸಿಗಳು

ಬಿಜೈ : ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ದೇಶ, ರಾಜ್ಯದಾದ್ಯಂತ ಪ್ರತಿ ಪಕ್ಷದಲ್ಲೂ ಚುನಾವಣೆ ಕಾವು ಏರಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ತಮ್ಮ ತಮ್ಮ ಕ್ಷೇತ್ರದಲ್ಲಿರುವ ಕುಂದು ಕೊರತೆಗಳನ್ನು ಸರಿಪಡಿಸುವಂತೆ ಜನರು ಪ್ರತಿಭಟನೆಗೆ (Election boycott) ಮುಂದಾಗಿದ್ದಾರೆ. ಅದರಲ್ಲೂ ಬಿಜೈ ನ್ಯೂರೋಡ್‌ 5ನೇ ಕ್ರಾಸ್‌ನ ನಿವಾಸಿಗಳು ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಬ್ಯಾನರ್‌ ಹಾಕಿದ್ದಾರೆ. ಮಂಗಳೂರು ಶಾಸಕರು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಚುನಾವಣಾ ಬಹಿಷ್ಕಾರದ ಎಚ್ಚರಿಕೆಯನ್ನು ನೀಡಿದ್ದಾರೆ.

ಸಂಚಾರ ದಟ್ಟಣೆಗೆ ಕಡಿವಾಣ ಹಾಲಕಲು ರಸ್ತೆ ದುರಸ್ತಿಗೆ ಆಗ್ರಹಿಸಿ ಇಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಮಕೃಷ್ಣ ಭಜನಾ ಮಂದಿರ ಕಡೆಗೆ ರಸ್ತೆ ಕಾಮಗಾರಿಯನ್ನು ತ್ವರಿತಗೊಳಿಸಬೇಕು ಎಂದು ಅಗ್ರಹಿಸಿದ್ದಾರೆ. ನ್ಯೂರೋಡ್‌ ನಿವಾಸಿಗಳು ಹೇಳಿರುವಂತೆ ಕೆಲವು ತಿಂಗಳಿಂದ ಇಲ್ಲಿ ಹದಗೆಟ್ಟ ರಸ್ತೆಗಳಿವೆ. ಈ ರಸ್ತೆಯ ಆಸುಪಾಸಿನಲ್ಲಿ 150 ಮನೆಗಳನ್ನು ಒಳಗೊಂಡಿದೆ. ನ್ಯೂರೋಡ್‌ ಅನ್ನು ಸಂಪರ್ಕಿಸುವ ಎರಡು ರಸ್ತೆಗಳಿದೆ. ಹೊಸ ರಸ್ತೆಯ ಕಾಂಕ್ರೀಟ್ ಕಾಮಗಾರಿ ಹಾಗೂ ಬಜನಾ ಮಂದಿರ ರಸ್ತೆಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ನ್ಯೂರೋಡ್‌ಗೆ ಸಂಪರ್ಕ ಕಲ್ಪಿಸುವ ಹೊಸ ರಸ್ತೆಯ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಪೂರ್ಣಗೊಳ್ಳಲು ಮೂರು ತಿಂಗಳು ಬೇಕಾಗಬಹುದು. ನಮ್ಮ ಪ್ರದೇಶಕ್ಕೆ ಸರಿಯಾದ ರಸ್ತೆಗಳಿಲ್ಲದೆ ನಾವು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ಸ್ಥಳೀಯ ನಿವಾಸಿಗಳು ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : Rahul Gandhi sentenced to jail: ಮೋದಿ ಉಪನಾಮ ಮಾನನಷ್ಟ ಪ್ರಕರಣ: ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ

ಇದನ್ನೂ ಓದಿ : Anjanamurthy : ಮಾಜಿ ಸಚಿವ ಅಂಜನಾಮೂರ್ತಿ ಹೃದಯಾಘಾತ ದಿಂದ ನಿಧನ

ಇದನ್ನೂ ಓದಿ : ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ನಡೆಸಲಿರುವ ಅಮಿತ್ ಶಾ: ಮುಂದಿನ 5 ದಿನಗಳಲ್ಲಿ ಎರಡು ಬಾರಿ ರಾಜ್ಯಕ್ಕೆ ಭೇಟಿ

“ನ್ಯೂರೋಡ್‌ಗೆ ಸಂಪರ್ಕ ಕಲ್ಪಿಸುವ ಬಿಜೈ ಹೊಸ ರಸ್ತೆಯ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಇಲ್ಲಿನ ರಸ್ತೆಯಲ್ಲಿ ಒಮ್ಮೆಗೆ ಒಂದು ಕಾರು ಮಾತ್ರ ಸಂಚರಿಸಬಹುದು. ಮುಂದೆ ಬರುವ ಮತ್ತೊಂದು ವಾಹನವು ಬ್ಲಾಕ್‌ಗೆ ಕಾರಣವಾಗುತ್ತದೆ ಮತ್ತು ಕಾಂಕ್ರೀಟ್ ರಸ್ತೆಯ ಎರಡೂ ಬದಿ ತುಂಬಾ ಆಳವಾಗಿದೆ, ”ಎಂದು ನಿವಾಸಿಯೊಬ್ಬರು ಹೇಳಿದರು. ಇದು ಹೆಚ್ಚಿನ ಪ್ರದೇಶಗಳ ಸಾಮಾನ್ಯ ಸಮಸ್ಯೆಗಳಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ಓಡಾಟಕ್ಕೆ ತುಂಬಾ ಅಡಚಣೆಯಾಗುತ್ತಿದೆ.

Election boycott: Outrage against MLA Vedavyas Kamat in Mangalore: Residents of Bijay boycotted the election.

Comments are closed.