Indigo Airlines : ಮಂಗಳೂರು ಪ್ರಯಾಣಿಕರನ್ನು ಬಿಟ್ಟು ಹಾರಿದ ವಿಮಾನ: ಇಂಡಿಗೋ ಸಿಬ್ಬಂದಿಗಳ ವಿರುದ್ದ ಆಕ್ರೋಶ

ಮಂಗಳೂರು : (Indigo Airlines) ಇಂಡಿಗೋ ವಿಮಾನ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಮಂಗಳೂರಿನ ಪ್ರಯಾಣಿಕರು ಮುಂಬೈ ವಿಮಾನ ನಿಲ್ದಾಣದಲ್ಲೇ ಪರದಾಡುವಂತಾಗಿದೆ. ಬಹರೇನ್‌ ನಿಂದ ಮುಂಬೈಗೆ ಎರಡು ಗಂಟೆ ವಿಮಾನ ತಡವಾಗಿ ಬಂದಿದ್ದಲ್ಲದೇ ಮಂಗಳೂರಿಗೆ ಪ್ರಯಾಣಿಸಬೇಕಿದ್ದ ಪ್ರಯಾಣಿಕರನ್ನು ಅಲ್ಲಿಯೇ ಬಿಟ್ಟು ಹೋಗಿದೆ. ಬಹರೇನ್​ನಿಂದ ಮಂಗಳೂರಿಗೆ ಟಿಕೆಟ್ ಮಾಡಿದ್ದ ಪ್ರಯಾಣಿಕರು ಮುಂಬೈ ವಿಮಾನ ನಿಲ್ದಾಣದಲ್ಲಿ ಪರದಾಡುವಂತಾಗಿದ್ದು, ಸಿಬ್ಬಂದಿಗಳ ಈ ರೀತಿಯ ನಿರ್ಲಕ್ಷ್ಯಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಿಗ್ಗೆ 5:30 ಕ್ಕೆ ಲ್ಯಾಂಡ್‌ ಆಗಬೇಕಿದ್ದ ಇಂಡಿಗೋ ವಿಮಾನ 7:30 ಕ್ಕೆ ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ಆಗಿದ್ದು, ಮುಂಬೈನಲ್ಲಿ ಕಾಯುತ್ತಿದ್ದ ಮಂಗಳೂರು ಪ್ರಯಾಣಿಕರನ್ನು ಬಿಟ್ಟು ಹೋಗಿದೆ. ಬಹರೇನ್​ನಲ್ಲಿ ಪ್ರಯಾಣಿಕನೋರ್ವನಿಗಾಗಿ ವಿಮಾನ ಎರಡು ಗಂಟೆ ಕಾದಿದೆ. ಹೀಗಾಗಿ ಮುಂಬೈ ನಿಲ್ದಾಣಕ್ಕೆ ತಡವಾಗಿ ಲ್ಯಾಂಡ್ ಆಗಿದೆ. 12 ಪ್ರಯಾಣಿಕರು ಮುಂಬೈ ವಿಮಾನ ನಿಲ್ದಾಣದಲ್ಲೇ ಅತಂತ್ರರಾಗಿದ್ದು ಇಂಡಿಗೋ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಸಿಬ್ಬಂದಿ ರಾತ್ರಿ 8.30ರ ವಿಮಾನದ ವ್ಯವಸ್ಥೆ ಮಾಡಿದ್ದಾರೆ. ರಾತ್ರಿ ವರೆಗೂ ರೂಮ್ ವ್ಯವಸ್ಥೆ ಕೂಡ ಮಾಡಲಾಗಿದೆ. ಆದ್ರೆ ಬಹರೇನ್​ನಲ್ಲಿ ಓರ್ವನಿಗಾಗಿ ಎರಡು ಗಂಟೆ ಕಾದಿದ್ದ ವಿಮಾನ, 12 ಜನರಿಗಾಗಿ ಒಂದು ಗಂಟೆ ಕಾದಿಲ್ಲ ಯಾಕೆ ಎಂದು ಪ್ರಯಾಣಿಕರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ : Electricity bill fraud: ವಿದ್ಯುತ್ ಬಿಲ್ ಹೆಸರಲ್ಲೂ ನಿಮ್ಮನ್ನು ವಂಚನೆ ಮಾಡಬಹುದು ಹುಷಾರ್‌!

ಇದನ್ನೂ ಓದಿ : Building collapse-3 died: 3 ಅಂತಸ್ತಿನ ಕಟ್ಟಡ ಕುಸಿತ: 2 ಮಕ್ಕಳು ಸೇರಿದಂತೆ 3 ಸಾವು, 6 ಮಂದಿಗೆ ಗಾಯ

ಇದನ್ನೂ ಓದಿ : NRI ಭಾರತದಲ್ಲಿ ಆಧಾರ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದೇ? UIDAI ಮಾರ್ಗಸೂಚಿ ಏನು ಹೇಳುತ್ತೆ ಗೊತ್ತಾ ?

ಇಂಡಿಗೋ ವಿಮಾನ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಮಂಗಳೂರು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದು ಮುಂಬೈ ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ಇಂಡಿಗೋ ಸಿಬ್ಬಂದಿ ಇಂದುಶ್ರ ಅವರು ಪ್ರಯಾಣಿಕರಿಗೆ ರಾತ್ರಿ 8.30ರ ವಿಮಾನ ವ್ಯವಸ್ಥೆ ಮಾಡಿದ್ದು, ಅಲ್ಲಿಯವರೆಗೂ ಪ್ರಯಾಣಿಕರಿಗೆ ರೂಮ್ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ.

Indigo Airlines: Flight left Mangalore passengers: Outrage against Indigo staff

Comments are closed.