ಉಪ್ಪಿನಂಗಡಿ: (Elephant attack-1 dead) ತಂದೆ, ಮಗ ಇಬ್ಬರು ಮೀನು ಹಿಡಿಯಲು ಹೊಳೆಗೆ ಹೋಗಿದ್ದ ಸಂದರ್ಭ ಒಂಟಿ ಸಲಗವೊಂದು ಮಗನ ಮೇಲೆ ದಾಳಿ ನಡೆಸಿದ್ದು, ದಾಳಿಯಿಂದ ಮಗನನ್ನು ರಕ್ಷಿಸಲು ಹೋಗಿದ್ದ ತಂದೆ ತನ್ನ ಜೀವವನ್ನೇ ಕಳೆದುಕೊಂಡ ದಾರುಣ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಒಂಟಿ ಸಲಗದ ದಾಳಿಗೆ ತಂದೆ, ಮಗ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ತಂದೆ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯನ್ನು ಶಿರಾಡಿ ಗ್ರಾಮದ ಜನತಾ ಕಾಲೋನಿ ನಿವಾಸಿ ತಿಮ್ಮಪ್ಪ (45 ವರ್ಷ) ಎಂದು ಗುರುತಿಸಲಾಗಿದ್ದು, ಪುತ್ರ ಶರಣ್ (18 ವರ್ಷ) ಗೆ ಗಂಭೀರವಾದ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ.
ತಂದೆ ತಿಮ್ಮಪ್ಪ ಹಾಗೂ ಪುತ್ರ ಶರಣ್ ಶನಿವಾರ ಸಂಜೆ ಗುಂಡ್ಯ ಹೊಳೆಗೆ ಮೀನು ಹಿಡಿಯಲು ತೆರಳಿದ್ದಾಗ ಘಟನೆ (Elephant attack-1 dead) ನಡೆದಿದೆ. ಪುತ್ರ ಶರಣ್ ಹೊಳೆಯ ಬಳಿಗೆ ಹೋಗಿದ್ದ ವೇಳೆ ದಾಹ ತೀರಿಸಿಕೊಳ್ಳಲು ಹೊಳೆಯ ಕಡೆಗೆ ಬಂದಿದ್ದ ಒಂಟಿ ಸಲಗವೊಂದು ಶರಣ್ ಮೇಲೆ ದಾಳಿಗೆ ಮುಂದಾಗಿದೆ. ಈ ಸಂದರ್ಭ ತಿಮ್ಮಪ್ಪನವರು ಮಗನ ರಕ್ಷಣೆಗೆ ಓಡಿ ಬಂದಿದ್ದು, ಒಂಟಿ ಸಲಗ ಅವರನ್ನು ತನ್ನ ಕಾಲಿನ ಕೆಳಗೆ ಹಾಕಿ ತುಳಿದಿದೆ . ಇದರಿಂದ ಗಂಭೀರವಾಗಿ ಗಾಯಗೊಂಡ ತಿಮ್ಮಪ್ಪನವರನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ತಿಮ್ಮಪ್ಪನವರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ . ತನ್ನ ಮಗನ ರಕ್ಷಣೆಗೆ ತಿಮ್ಮಪ್ಪನವರು ತನ್ನ ಜೀವವನ್ನೇ ಬಲಿ ಕೊಟ್ಟಿದ್ದಾರೆ.
ಇನ್ನೂ ಒಂಟಿ ಸಲಗದ ದಾಳಿಗೆ ತುತ್ತಾಗಿ ಗಂಭೀರವಾಗಿ ಗಾಯಗೊಂಡ ಪುತ್ರ ಶರಣ್ ನನ್ನು ನೆಲ್ಯಾಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಉಪ್ಪಿನಂಗಡಿ ವಲಯ ಅರಣ್ಯಾದಿಕಾರಿ ಜಯಪ್ರಕಾಶ್ ಹಾಗೂ ತಂಡ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಸಿಲನೆ ನಡೆಸಿದ್ದಾರೆ.
ಇದನ್ನೂ ಓದಿ : Student dies of fever: ಜ್ವರದಿಂದ ಆರನೇ ತರಗತಿ ಬಾಲಕ ಸಾವು
A tragic incident took place in Uppinandi where a lone elephant attacked his son and the father who went to save his son lost his life.