Heart attack-soldier death: ರಜೆಗೆಂದು ಊರಿಗೆ ಬಂದಿದ್ದ ಸೇನಾ ಯೋಧ ಹೃದಯಾಘಾತದಿಂದ ಸಾವು

ಮಂಗಳೂರು: (Heart attack-soldier death) ಬಿಎಸ್‌ ಎಫ್‌ ಯೋಧರೊಬ್ಬರು ರಜೆಗೆಂದು ಊರಿಗೆ ಬಂದಿದ್ದರು. ಆದರೆ ರಜೆಯ ದಿನಗಳನ್ನು ಕಳೆಯಲು ಬಂದಿದ್ದ ಯೋಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕುಲಶೇಖರ ಉಮಿಕಾನ ನಿವಾಸಿ ಹರೀಶ್‌ ಕುಮಾರ್‌ (43 ವರ್ಷ) ಹೃದಯಾಘಾತದಿಂದ ಸಾವನ್ನಪ್ಪಿದ ಬಿಎಸ್‌ ಎಫ್‌ ಯೋಧ.

ಯೋಧ ಹರೀಶ್‌ ಕುಮಾರ್‌ ಇಪ್ಪತ್ತೊಂದು ವರ್ಷಗಳಿಂದಲೂ ಕೂಡ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ರಜೆ ದಿನಗಳನ್ನು ಕಳೆಯಲು ತನ್ನ ಊರಾದ ಮಂಗಳೂರಿಗೆ ಬಂದಿದ್ದರು. ಡಿ. 31 ರಂದು ಹೃದಯಾಘಾತವಾದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಿಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲೇ ನಿಧನ(Heart attack-soldier death)ರಾಗಿದ್ದಾರೆ.

ಇವರಿಗೆ ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದು, ಪತ್ನಿ, ಆರು ವರ್ಷದ ಮಗ ಹಾಗೂ ಒಂದೂವರೆ ವರ್ಷದ ಪುಟ್ಟ ಮಗಳನ್ನು ಅಗಲಿದ್ದಾರೆ.

ಕಾರು- ಬಸ್‌ ಢಿಕ್ಕಿ: ಸಾಮಾಜಿಕ, ಧಾರ್ಮಿಕ ನೇತಾರ ಸೇರಿ ಇಬ್ಬರು ಸಾವು

ಬೆಳ್ತಂಗಡಿ: ಕಾರು ಮತ್ತು ಖಾಸಗಿ ಬಸ್‌ ನಡುವೆ ಢಿಕ್ಕಿ ಸಂಭವಿಸಿ ಸಾಮಾಜಿಕ, ಧಾರ್ಮಿಕ ನೇತಾರರಾದ ನೌಷಾದ್‌ ಹಾಜಿ ಸೂರಲ್ಪಾಡಿ ಹಾಗೂ ಇನನೋರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿಯ ಸಮೀಪದಲ್ಲಿ ಕಾರು ಮತ್ತು ಖಾಸಗಿ ಬಸ್‌ ನಡುವೆ ಅಪಘಾತ ಸಂಭವಿಸಿದ್ದು, ಇನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನೌಷಾದ್‌ ಹಾಜಿ ಹಾಗೂ ಇನ್ನೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನೌಷಾದ್‌ ಹಾಜಿ ಅವರು ಮೂಲತಃ ಅರಳ ನಿವಾಸಿಯಾಗಿದ್ದು, ಸೂರಲ್ಪಾಡಿಯಲ್ಲಿ ವಾಸವಾಗಿದ್ದರು.

ಇದನ್ನೂ ಓದಿ : Elephant attack-1 dead: ಒಂಟಿ ಸಲಗದ ದಾಳಿ : ಮಗನನ್ನು ರಕ್ಷಿಸಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡ ತಂದೆ

ಇದನ್ನೂ ಓದಿ : Student dies of fever: ಜ್ವರದಿಂದ ಆರನೇ ತರಗತಿ ಬಾಲಕ ಸಾವು

ನೌಷದ್‌ ಹಾಜಿ ಅವರು ದಕ್ಷಿಣ ಕನ್ನಡ ಜಿಲ್ಲಾ ಮದರಸ ಮ್ಯಾನೇಜ್‌ ಮೆಂಟ್‌ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇವರು ಬೆಳ್ತಂಗಡಿಯ ಸಾಮಾಜಿಕ ಹಾಗೂ ಧಾರ್ಮಿಕ ನೇತಾರರೆಂದೇ ಪ್ರಸಿದ್ದಿಯನ್ನು ಪಡೆದಿದ್ದರು.

A BSF soldier had come to town on leave. But the soldier who had come to spend the holidays died of a heart attack.

Comments are closed.