Gurugram : ತಾಯಿ, ಪತ್ನಿಯ ಚಿಕಿತ್ಸೆಗೆ 24 ಕ್ಷ ರೂಪಾಯಿ ದರೋಡೆ : ಐವರು ಅರೆಸ್ಟ್‌

ಗುರುಗ್ರಾಮ (Gurugram) : ತಾಯಿ ಹಾಗೂ ಪತ್ನಿಯ ಚಿಕಿತ್ಸೆಗಾಗಿ ಕಂಪೆನಿಯೊಂದರ ಕಲೆಕ್ಷನ್ ಏಜೆಂಟ್ ನಿಂದ 24 ಲಕ್ಷ ರೂಪಾಯಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿರುವ ಘಟನೆ ದೆಹಲಿಯ ಗುರುಗ್ರಾಮದಲ್ಲಿ ನಡೆದಿದೆ.

ಅಂಕುರ್ , ಸಹೋದರ ಉಜ್ವಲ್ , ಚಂದ್ರ ಭಾನು ಪ್ರತಾಪ್, ವಿನೀತ್ ಮತ್ತು ಪ್ರವೀಣ್ ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಅಂಕುರ್ ತನ್ನ ತಾಯಿ ಹಾಗೂ ಪತ್ನಿಯ ಚಿಕಿತ್ಸೆಗಾಗಿ ಹಣ ಹೊಂದಿಸಲು ಮುಂದಾಗಿದ್ದ. ಈ ವೇಳೆಯಲ್ಲಿ ಕಂಪೆನಿಯ ಕಲೆಕ್ಷನ್ ಹಣವನ್ನು ದರೋಡೆ ಮಾಡಲು ಯೋಜನೆ ರೂಪಿಸಿದ್ದ. ನಂತರದಲ್ಲಿ ತನ್ನ ಸಹೋದರ ಉಜ್ವಲ್ ಗೆ ತನ್ನ ಪ್ಲ್ಯಾನ್ ತಿಳಿಸಿದ್ದಾನೆ. ಜೊತೆಗೆ ಸ್ನೇಹಿತರಾದ ಭಾನುಪ್ರತಾಪ್, ವಿನೀತ್ ಹಾಗೂ ಪ್ರವೀಣ್ ಅವರ ಜೊತೆ ಸೇರಿಕೊಂಡು ಕಂಪನಿಯೊಂದರ ಕಲೆಕ್ಷನ್ ಏಜೆಂಟ್‌ನಿಂದ 24 ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆ.

ಡಿಸೆಂಬರ್ 26 ರಂದು ಕಂಪೆನಿಯ ಇಬ್ಬರು ಏಜೆಂಟರು ಬೈಕಿನಲ್ಲಿ ಹಣವನ್ನು ಬ್ಯಾಕಿಂಗೆ ಠೇವಣಿ ಮಾಡಲು ತೆರಳುತ್ತಿದ್ದರು. ಈ ವೇಳಯಲ್ಲಿ ಬೈಕ್ ಗಳಲ್ಲಿ ಬಂದ ಆರೋಪಿಗಳು ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ಹಣವನ್ನು ದರೋಡೆ ಮಾಡಿದ್ದರು. ಅಲ್ಲದೇ ಕಂಪೆನಿಯ ಏಜೆಂಟರ ತಲೆಗೆ ಕಲ್ಲಿನಿಂದ ಹೊಡೆದು ಬ್ಯಾಗ್ ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಪೊಲೀರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದರು.

ಸದ್ಯ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಅಲ್ಲದೇ ಆರೋಪಿಗಳಿಂದ ದರೋಡೆ ಮಾಡಿದ 24 ಲಕ್ಷ ರೂಪಾಯಿಯ ಪೈಕಿ 15 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ. ಉಳಿದ ಹಣವನ್ನು ವಸೂಲಿ ಮಾಡಲು ಯೋಜನೆ ರೂಪಿಸಿದ್ದಾರೆ. ಒಟ್ಟಿನಲ್ಲಿ ಕುಟುಂಬ ಸದಸ್ಯರ ಚಿಕಿತ್ಸೆಗೆ ಹಣ ಸಂಗ್ರಹಿಸಲು ವಾಮಮಾರ್ಗವನ್ನು ಹಿಡಿದಿದ್ದ ಆರೋಪಿಗಳು ಇದೀಗ ಶ್ರೀಕೃಷ್ಣ ಜನ್ಮಸ್ಥಾನ ಸೇರಿದ್ದಾರೆ.

ಇದನ್ನೂ ಓದಿ : Video viral- 47M views: ಲಂಡನ್‌ ವ್ಯಕ್ತಿಯೋರ್ವನ ಹುಚ್ಚು ಸಾಹಸ : Viral Video ‌ 47 ಮಿಲಿಯನ್ ವೀಕ್ಷಣೆ

ಇದನ್ನೂ ಓದಿ : Dehli fire accident: ಖಾಸಗಿ ನರ್ಸಿಂಗ್‌ ಹೋಮ್‌ ನಲ್ಲಿ ಅಗ್ನಿ ಅವಘಡದಲ್ಲಿ ಇಬ್ಬರು ಸಾವು

Gurugram Police Arrested man rob 24 lakh for treatment of family members

Comments are closed.