ದಕ್ಷಿಣ ಕನ್ನಡ : Former CM HD Kumaraswamy visits : ದಕ್ಷಿಣ ಕನ್ನಡ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿರುವ ಮಸೂದ್ ಹಾಗೂ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಗಳು ರಾಜಕೀಯ ನಾಯಕರನ್ನು ಕಡಲನಗರಿಯತ್ತ ತಿರುಗಿ ನೋಡುವಂತೆ ಮಾಡಿದೆ. ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಹಿಂದೂ ಕಾರ್ಯಕರ್ತ ಹಾಗೂ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸದಸ್ಯ ಪ್ರವೀಣ್ ನೆಟ್ಟಾರು ಮತ್ತು ಮಸೂದ್ ಕುಟುಂಬಕ್ಕೆ ಇಂದು ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಭೇಟಿ ನೀಡಿದ್ದು ಎರಡೂ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ನೆಟ್ಟಾರು ಗ್ರಾಮದಲ್ಲಿರುವ ಹತ್ಯೆಯಾದ ಪ್ರವೀಣ್ ಕುಟುಂಬಸ್ಥರನ್ನು ಮೊದಲು ಭೇಟಿಯಾದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರವೀಣ್ ಪತ್ನಿ ಹಾಗೂ ಪೋಷಕರಿಗೆ ಸಾಂತ್ವನ ತಿಳಿಸಿದರು. ಹಾಗೂ ಪ್ರವೀಣ್ ನೆಟ್ಟಾರು ಕುಟುಂಬಸ್ಥರಿಗೆ 5 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿದರು.
ಪ್ರವೀಣ್ ನೆಟ್ಟಾರು ಕುಟುಂಬಸ್ಥರ ಭೇಟಿ ಬಳಿಕ ಬೆಳ್ಳಾರೆಯಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಪ್ರವೀಣ್ ನೆಟ್ಟಾರು ಕುಟುಂಬಸ್ಥರನ್ನು ಇಂದು ಭೇಟಿಯಾಗಿ ಅವರಿಗೆ ಸಾಂತ್ವನ ಹೇಳಿದ್ದೇನೆ. ಪ್ರವೀಣ್ ಕುಟುಂಬಸ್ಥರ ಸಮಸ್ಯೆಗಳನ್ನು ಆಲಿಸಿದ್ದೇನೆ. ಆ ಕುಟುಂಬಕ್ಕೆ ಕೆಲ ದಿನಗಳ ಅನುಕಂಪ ಬೇಡ, ತಪ್ಪಿತಸ್ಥರು ಯಾರೋ ಅವರಿಗೆ ಶಿಕ್ಷೆಯಾಗಲಿ. ರಾಜ್ಯ ಸರ್ಕಾರ ಕಾಟಾಚಾರಕ್ಕೆ ಈ ಕೊಲೆ ಪ್ರಕರಣವನ್ನು ಎನ್ಐಎಗೆ ವಹಿಸಿದೆ. ಎನ್ಐಎಗೆ ವಹಿಸಿ ಕೈ ತೊಳೆದುಕೊಂಡಿದೆ . ಎನ್ಐಎ ಇದುವರೆಗೆ ಎಷ್ಟು ಕೇಸ್ ಬಗೆಹರಿಸಿದೆ..? ಎನ್ಐಎ ತನಿಖೆ ಮಾಡಲ್ಲ, ಇತ್ತ ಪೊಲೀಸರೂ ವಿಚಾರಣೆ ಮಾಡಲ್ಲ ಎಂದು ಸರ್ಕಾರ ಹಾಗೂ ಎನ್ಐಎ ವಿರುದ್ಧ ಅಸಮಾಧಾನ ಹೊರ ಹಾಕಿದರು.
ಪ್ರವೀಣ್ ನೆಟ್ಟಾರು ಕುಟುಂಬಸ್ಥರ ಭೇಟಿ ಬಳಿಕ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನೇರವಾಗಿ ಸುಳ್ಯ ತಾಲೂಕಿನ ಕಳಂಜೆಯಲ್ಲಿರುವ ಕೊಲೆಯಾದ ಮಸೂದ್ ನಿವಾಸಕ್ಕೆ ಭೇಟಿ ನೀಡಿ ಆ ಕುಟುಂಬದ ಸಮಸ್ಯೆಯನ್ನೂ ಆಲಿಸಿದ್ದಾರೆ. ಅಲ್ಲದೇ ಮಸೂದ್ ಪೋಷಕರಿಗೆ ಐದು ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಣೆ ಮಾಡಿದರು.
ಇದನ್ನು ಓದಿ : Marnus Labuschagne insult Sachin Tendulkar : ಕ್ರಿಕೆಟ್ ದೇವರಿಗೆ ಅವಮಾನ ಮಾಡಿದ್ರಾ ಈ ಆಸೀಸ್ ಕ್ರಿಕೆಟರ್ ?
ಇದನ್ನೂ ಓದಿ : assault on kannada actor chandan kumar : ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್ ಮೇಲೆ ಹಲ್ಲೆ: ತೆಲುಗಿನ ಶೂಟಿಂಗ್ ವೇಳೆ ಘಟನೆ
Former CM HD Kumaraswamy visits the residence of murdered Masood and Praveen Nettaru.