Vikrant Rona piracy show : ಹಾಸ್ಟೆಲ್ ಮಕ್ಕಳಿಗೆ ವಿಕ್ರಾಂತ್ ರೋಣ ಪೈರಸಿ ಶೋ : ವಾರ್ಡನ್ ವಿರುದ್ಧ ಜಾಕ್ ಮಂಜು ಆಕ್ರೋಶ

ಕನ್ನಡದ ಯಶಸ್ವಿ ಚಿತ್ರಗಳಿಗೆ ಪೈರಸಿಯೇ ವಿಲನ್. ಈ ಪೈರಸಿ ಕಾಟಕ್ಕೆ ಸ್ಯಾಂಡಲ್ ವುಡ್ ನಿಂದ ಆರಂಭಿಸಿ ಬಾಲಿವುಡ್ ತನಕ ಎಲ್ಲ‌ ಚಿತ್ರರಂಗವೂ ಸಮಸ್ಯೆಗೀಡಾಗಿದೆ. ಈಗ ಯಶಸ್ವಿಯಾಗಿ ಪ್ರದರ್ಶನ ಕಾಣ್ತಿರೋ ಸುದೀಪ್ ಬಹುನೀರಿಕ್ಷಿತ ಸಿನಿಮಾ ವಿಕ್ರಾಂತ್ ರೋಣಾಗೆ ಪೈರಸಿ ಕಾಟ (Vikrant Rona piracy show ) ಎದುರಾಗಿದ್ದು, ಕೋಲಾರದ ಹಾಸ್ಟೆಲ್ ವಾರ್ಡನ್ ವೊಬ್ಬರು ಹಾಸ್ಟೆಲ್ ಮಕ್ಕಳಿಗೆ ಪೈರಸಿ ಸಿನಿಮಾ ತೋರಿಸಿ ಸಿನಿಮಾ ಮಂದಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಅನೂಪ್ ಭಂಡಾರಿ ನಿರ್ದೇಶನದಲ್ಲಿ ತೆರೆಗೆ ಬಂದ ವಿಕ್ರಾಂತ್ ರೋಣಾ ಯಶಸ್ವಿ ಪ್ರದರ್ಶನ ಕಾಣ್ತಿದೆ. ಸದ್ಯದಲ್ಲೇ ಸಿನಿಮಾ 100 ಕೋಟಿ ಕ್ಲಬ್ ಸೇರಲಿದೆ ಎಂದು ನೀರಿಕ್ಷಿಸಲಾಗುತ್ತಿದೆ. ಈ ಮಧ್ಯೆ ಸುದೀಪ್ ಕನಸಿನ ಸಿನಿಮಾ ವಿಕ್ರಾಂತ್ ರೋಣಾಗೂ ಪೈರಸಿ ಕಾಟ ಎದುರಾಗಿದೆ. ಈಗಾಗಲೇ ವಿಕ್ರಾಂತ್ ರೋಣ ಸಿನಿಮಾದ ಥಿಯೇಟರ್ ಪ್ರಿಂಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಾತ್ರವಲ್ಲ ಆನ್ಲೈನ್ ಪೈರಸಿ ಕಾಪಿಗಳು ಹರಿದಾಡುತ್ತಿದೆ. .ಇದೆಲ್ಲವೂ ಸುದೀಪ್ ವಿರೋಧಿಗಳ ಕೃತ್ಯ ಎಂಬ ಮಾತು ಕೇಳಿ ಬರುತ್ತಿರುವಾಗಲೇ ಕೋಲಾರದಲ್ಲಿ ಸಿನಿತಂಡವೇ ಬೆಚ್ಚಿ ಬೀಳುವಂತ ಘಟನೆ ನಡೆದಿದೆ.

ಪೈರಸಿ ಕಾಪಿಯೊಂದನ್ನು ಹೊಂದಿದ್ದ ಹಾಸ್ಟೆಲ್ ವಾರ್ಡನ್ ವೊಬ್ಬರು ರಾಜಾರೋಷವಾಗಿ ತಮ್ಮ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವಿಕ್ರಾಂತ್ ರೋಣಾ ಸಿನಿಮಾವನ್ನು ಹಾಸ್ಟೆಲ್ ನಲ್ಲೇ ತೋರಿಸಿದ್ದಾರೆ. ವಿಕ್ರಾಂತ್ ರೋಣಾ ಸಿನಿಮಾದ ಈ ಪೈರಸಿ ಪ್ರದರ್ಶನದ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ವಿಚಾರ ನಿರ್ಮಾಪಕ ಜಾಕ್ ಮಂಜು ಗಮನಕ್ಕೂ ಬಂದಿದ್ದು, ಈ ಹಿನ್ನೆಲೆಯಲ್ಲಿ ಜಾಕ್ ಮಂಜು ಕಾನೂನು ಸಮರಕ್ಕೆ ಮುಂದಾಗಿದ್ದಾರಂತೆ‌.ಕೋಲಾರದ ಕುತಂಡ್ಲಹಳ್ಳಿಯ ಮೊರಾರ್ಜಿ ದೇಸಾಯಿ ಸ್ಕೂಲ್ ನಲ್ಲಿ ಈ ಪೈರಸಿ ಸಿನಿಮಾ ಪ್ರದರ್ಶನ ನಡೆದಿದೆ ಎನ್ನಲಾಗಿದ್ದು, ಪೋಟೋಸ್ ನಲ್ಲಿ ಮಕ್ಕಳು ಸಿನಿಮಾ ನೋಡ್ತಿರೋದು ಗೊತ್ತಾಗ್ತಿದೆ.

ಸದ್ಯ ವಿಕ್ರಾಂತ್ ರೋಣ ಈ ಪೈರಸಿ ಕಾಟದ ನಡುವೆಯೂ ಉತ್ತಮ ಗಳಿಕೆಯೊಂದಿಗೆ ಮುನ್ನಡೆಯುತ್ತಿದ್ದು, ಗುರುವಾರ ತೆರೆ ಕಂಡ ಸಿನಿಮಾ ಶನಿವಾರದ ವೇಳೆಗೆ ಬರೋಬ್ಬರಿ 80 ಕೋಟಿ ಗಳಿಕೆ ಕಂಡಿದೆ. ಈ ಮಧ್ಯೆ ಸಿನಿಮಾಕ್ಕೆ ಪೈರಸಿ ಕಾಟ ಎದುರಾಗ್ತಿರೋದಿಕ್ಕೆ ಸುದೀಪ್ ಅಭಿಮಾನಿಗಳು ಗರಂ ಆಗ್ತಿದ್ದು ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ಪರ ಪೋಸ್ಟ್ ಹಾಕುತ್ತಿದ್ದಾರೆ. ಅಲ್ಲದೇ ಪೈರಸಿ ಮಾಡಿರೋರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ : assault on kannada actor chandan kumar : ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್ ಮೇಲೆ ಹಲ್ಲೆ: ತೆಲುಗಿನ ಶೂಟಿಂಗ್ ವೇಳೆ ಘಟನೆ

ಇದನ್ನೂ ಓದಿ : Radhika Kumaraswamy video Viral : ಜಾರಿ ಬಿದ್ದ ಜಾಣೆಗೆ ಜೋಕೆ ಎಂದ ಫ್ಯಾನ್ಸ್: ರಾಧಿಕಾ ಕುಮಾರಸ್ವಾಮಿ ವಿಡಿಯೋ ವೈರಲ್

Vikrant Rona piracy show for hostel kids, Jack Manju outraged against the warden

Comments are closed.