ದಕ್ಷಿಣ ಕನ್ನಡ: ಕುಕ್ಕೆ, ಧರ್ಮಸ್ಥಳಕ್ಕೆ ರಾಜ್ಯಪಾಲರ ಭೇಟಿ

ಧರ್ಮಸ್ಥಳ: (Governor’s visit Kukke Dharamsthala) ಪ್ರಸಿದ್ದ ಪುಣ್ಯ ಕ್ಷೇತ್ರಗಳ ತವರೂರು ಎಂದು ಕರೆಯಲ್ಪಡುವ ಕರಾವಳಿಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಮಂಗಳವಾರ ಹಾಗೂ ಬುಧವಾರ ಭೇಟಿ ಮಾಡಲಿದ್ದು, ಕರಾವಳಿ ಭಾಗದ ದಕ್ಷಿಣ ಕನ್ನಡದ ಪುಣ್ಯ ತೀರ್ಥಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಕ್ಕೆ ಕೂಡ ಭೇಟಿ ನೀಡಲಿದ್ದಾರೆ.

ಮಂಗಳವಾರ ಮುಂಜಾನೆ 8 ಗಂಟೆಗೆ ಬೆಂಗಳೂರಿನಿಂದ ರಸ್ತೆ ಮೂಲಕವೇ ಹೊರಟು ಮಧ್ಯಾಹ್ನ 1 ಗಂಟೆಗೆ ಮೂಡಿಗೆರೆಯ ಅತಿಥಿ ಗೃಹಕ್ಕೆ ಬರಲಿದ್ದಾರೆ. ಇನ್ನೂ ಮಧ್ಯಾಹ್ನ 3:30 ಕ್ಕೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿರುವ ರಾಜ್ಯಪಾಲರು ಬಳಿಕ ಸಂಜೆ 5 ಗಂಟೆಗೆ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

ಧರ್ಮಸ್ಥಳಕ್ಕೆ ಭೇಟಿ ನೀಡಲಿರುವ ರಾಜ್ಯಪಾಲರು, ರಾತ್ರಿ ಸನ್ನಿಧಿಯ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಲಿದ್ದು, ಬುಧವಾರ ಬೆಳಿಗ್ಗೆ ದೇವರ ದರ್ಶನ ಪಡೆಯಲಿದ್ದಾರೆ. ದೇವರ ದರ್ಶನದ ಬಳಿಕ ಧರ್ಮಸ್ಥಳದ ಅಮೃತ ವರ್ಷಿಣಿ ಸಭಾಭವನದಲ್ಲಿ ನವಜೀವನ ಸಮಾವೇಶದಲ್ಲಿ ರಾಜ್ಯಪಾಲರು ಭಾಗಿಯಾಗಲಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಕ್ಕೆ ಭೇಟಿ ನೀಡಿದ ನಂತರದಲ್ಲಿ ಮಧ್ಯಾಹ್ನ 3 ಗಂಟೆಗೆ ಧರ್ಮಸ್ಥಳದಿಂದ ಹೊರಟು ರಾತ್ರಿ ಕುದುರೆಮುಖದ ಅರಣ್ಯ ಇಲಾಖೆಯ ಅತಿಥಿ ಗೃಹದಲ್ಲಿ ಉಳಿಯಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ : ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಗೆ 4 ವರ್ಷ ಜೈಲು ಶಿಕ್ಷೆ

ಇದನ್ನೂ ಓದಿ : Narenda Modi : ರಾಜಭವನದಲ್ಲಿ ಪ್ರಧಾನಿ ಮೋದಿ ಭೇಟಿ ಮಾಡಿದ ಅನಿಲ್ ಕುಂಬ್ಳೆ, ಮಯಾಂಕ್ ಅಗರ್ವಾಲ್

ಇದನ್ನೂ ಓದಿ : Modi tight schedule: ಪ್ರಧಾನಿ ಮೋದಿ ದಿನಕ್ಕೆ ಎಷ್ಟು ಕಿಮೀ ಪ್ರಯಾಣ, ಎಷ್ಟು ಸಭೆಯಲ್ಲಿ ಪಾಲ್ಗೋಳ್ಳತ್ತಾರೆ ಗೊತ್ತಾ ?

a: Dakshina Kannada: Governor’s visit to Kukke, Dharamsthala

Comments are closed.