ಬೈಂದೂರು : ಈ ಕಾಲೇಜಿನ ವಿದ್ಯಾರ್ಥಿಗಳ ಬದುಕು ನಿಜಕ್ಕೂ ನಿತ್ಯ ನರಕ. ಮುಂಜಾನೆಯೇ ಎದ್ದು ಗ್ರಾಮೀಣ ಭಾಗದಿಂದ ಬಸ್ಸನ್ನು (Government Bus) ಏರಿಕೊಂಡು ಪೇಟೆಗೆ ಬಂದು ಇಳಿದ್ರೂ ಕೂಡ, ಕಾಲೇಜಿಗೆ ತಲುಪಲು ನಿತ್ಯವೂ ಒಂದೂವರೆ ಕಿಲೋ ಮೀಟರ್ ನಡೆದುಕೊಂಡೇ ಬರಬೇಕಾಗಿತ್ತು. ಆದ್ರೀಗ ಶಾಸಕರ ಕಾಳಜಿಯಿಂದಾಗಿ ಬರೋಬ್ಬರಿ 40 ವರ್ಷಗಳ ಬಳಿಕ ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ದೊರೆಕಿದ್ದು, ಇದೀಗ ಕಾಲೇಜಿಗೆ ಕೆಎಸ್‌ಆರ್‌ಟಿಸಿ ಬಸ್ (KSRTC Bus) ಬಂದಿದೆ.

ಅಷ್ಟಕ್ಕೂ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದವರು ಉಡುಪಿ ಜಿಲ್ಲೆಯ ಬೈಂದೂರು ಪ್ರಥಮ ದರ್ಜೆ ಕಾಲೇಜಿನ (Byndoor First Grade College) ವಿದ್ಯಾರ್ಥಿಗಳು. ಬೈಂದೂರು ಪೇಟೆಯಿಂದ ಈ ಕಾಲೇಜು ಸುಮಾರು 1.5 ಕಿ.ಮೀ. ದೂರದಲ್ಲಿದೆ. ಆದರೆ ಬೈಂದೂರಿನಿಂದ ಈ ಕಾಲೇಜಿಗೆ ಯಾವುದೇ ಬಸ್ ಸೌಕರ್ಯವಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ನಿತ್ಯವೂ ಬೈಂದೂರಿನಿಂದ ಕಾಲೇಜು ವರೆಗೆ ನಡೆದುಕೊಂಡೇ ಬರಬೇಕಾಗಿತ್ತು.
ಇದನ್ನೂ ಓದಿ :5,8,9ನೇ ತರಗತಿಗೆ ಪಬ್ಲಿಕ್ ಪರೀಕ್ಷೆ : ರಾಜ್ಯ ಸರಕಾರದಿಂದ ಅಧಿಸೂಚನೆ ಪ್ರಕಟ
ಕಳೆದ 40 ವರ್ಷಗಳಿಂದಲೂ ಈ ಭಾಗಕ್ಕೆ ಬಸ್ ಸೌಕರ್ಯ ಕಲ್ಪಿಸುವಂತೆ ವಿದ್ಯಾರ್ಥಿಗಳು, ಸ್ಥಳೀಯರು ಸಾಕಷ್ಟು ಬಾರಿ ಸರಕಾರಕ್ಕೆ ಜನಪ್ರತಿನಿಧಿಗಳಿಗೆ ಮನವಿಯನ್ನು ಸಲ್ಲಿಸಿದ್ದರು. ಆದರೆ ಯಾವುದೇ ಪ್ರಯೋಜನ ಮಾತ್ರ ಆಗಿರಲಿಲ್ಲ. ಇದೀಗ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಗುರುರಾಜ್ ಗಂಟಿಹೊಳೆ (Gururaj Gantihole) ಅವರು ನೂತನ ಶಾಸಕರಾಗಿ ಆಯ್ಕೆಯಾಗಿದ್ದು, ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನು ಶಾಸಕರ ಮುಂದೆ ಇಟ್ಟಿದ್ದಾರೆ.

ಕೂಡಲೇ ಗುರುರಾಜ್ ಗಂಟಿಹೊಳೆ ಅವರು ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿದ್ದಾರೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಜೊತೆಗೆ ಚರ್ಚಿಸಿ, ಸರಕಾರದ ಒಪ್ಪಿಗೆಯನ್ನು ಪಡೆದು ತಾವು ಶಾಸಕರಾದ ಕೇವಲ 3 ರಿಂದ 4 ತಿಂಗಳ ಅವಧಿಯಲ್ಲಿಯೇ ಬರೋಬ್ಬರಿ 4 ದಶಕಗಳ ಸಮಸ್ಯೆಗೆ ಮುಕ್ತಿ ದೊರಕಿಸಿದ್ದಾರೆ.
ಉಡುಪಿ ಜಿಲ್ಲೆಯ ಗಡಿಭಾಗವಾಗಿರುವ ಬೈಂದೂರಿನಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸರಿ ಸುಮಾರು 40 ವರ್ಷಗಳ ಇತಿಹಾಸವಿದೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳೇ ಈ ಕಾಲೇಜಿನ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ ಪ್ರಸ್ತುತ 400 ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದು, ನಿತ್ಯವೂ ಎಲ್ಲಾ ವಿದ್ಯಾರ್ಥಿಗಳು ಬಸ್ ಸಮಸ್ಯೆಯನ್ನು ಎದುರಿಸುತ್ತಿದ್ದರು.
ಇದನ್ನೂ ಓದಿ : ಶಾಲೆಗಳಿಗೆ ಸರಕಾರದ ಹೊಸ ರೂಲ್ಸ್ : ವಿದ್ಯಾಂಜಲಿ 2.0 ಪೋರ್ಟಲ್‌ನಲ್ಲಿ ನೋಂದಣಿ ಕಡ್ಡಾಯ
ಎಷ್ಟೇ ದೂರದಿಂದ ಬೈಂದೂರಿಗೆ ಬಂದರೂ ಕೂಡ ಅಲ್ಲಿಂದ ಕಾಲೇಜಿಗೆ ನಡೆದುಕೊಂಡು ಬರಬೇಕಾಗಿತ್ತು. ಇದರಿಂದ ಸುಸ್ತಾಗಿ ವಿದ್ಯಾರ್ಥಿಗಳ ಪಾಠ ಕೇಳಬೇಕಾಗಿತ್ತು. ಇನ್ನು ಅನಾರೋಗ್ಯದ ಸಮಸ್ಯೆಯಿದ್ರೆ ಅವರ ಗೋಳು ಹೇಳುವುದೇ ಬೇಡಾ. ಇದೀಗ ಕಾಲೇಜಿಗೆ ಸರಕಾರಿ ಬಸ್ ಬರುತ್ತಿದ್ದಂತೆಯೇ ವಿದ್ಯಾರ್ಥಿಗಳ ಸಂತಸಕ್ಕೆ ಪಾರವೇ ಇರಲಿಲ್ಲ.

40 ವರ್ಷಗಳ ಬಳಿಕ ಬಸ್ ಸೌಕರ್ಯ ಕಲ್ಪಿಸಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹಾಗೂ ರಾಜ್ಯ ಸರಕಾರಕ್ಕೆ ವಿದ್ಯಾರ್ಥಿಗಳು ಧನ್ಯವಾದ ಅರ್ಪಿಸಿದ್ದಾರೆ. ವಿದ್ಯಾರ್ಥಿಗಳು ಮಾತ್ರವಲ್ಲ, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರಿಗೂ ಬಸ್ ಸೌಕರ್ಯ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಕಾಲೇಜಿನ ಉಪನ್ಯಾಸಕರು ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ ಹಣ ಇನ್ನೂ ಸಿಕ್ಕಿಲ್ವಾ ? ಇಂದೇ ಈ ಕೆಲಸ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಆಗೋದು ಗ್ಯಾರಂಟಿ
ಶಾಸಕರಾಗಿ ಆಯ್ಕೆ ಆಗುವ ಜನಪ್ರತಿನಿಧಿಗಳಿಗೆ ಜನರ ಪರ ಕಾಳಜಿ, ಜನರ ಕಷ್ಟಕ್ಕೆ ಕರಗುವ ಮನಸ್ಸು ಇದ್ರೆ ಯಾವುದೇ ಕೆಲಸವೂ ಕಷ್ಟವಲ್ಲ ಅನ್ನೋದನ್ನು ಇದಿಗ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ತೋರಿಸಿಕೊಟ್ಟಿದ್ದಾರೆ. ಕೊನೆಗೂ ಬೈಂದೂರು ವಿದ್ಯಾರ್ಥಿಗಳ ನಾಲ್ಕು ವರ್ಷದ ಸಂಕಷ್ಟಕ್ಕೆ ಮುಕ್ತಿ ದೊರಕಿದೆ.
ನಲವತ್ತು ವರ್ಷಗಳ ಇತಿಹಾಸ ಹೊಂದಿರುವ ಬೈಂದೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸ್ತುತ 400 ವಿದ್ಯಾರ್ಥಿಗಳಿದ್ದಾರೆ. ಆದರೆ ಇದುವರೆಗೂ ಈ ಕಾಲೇಜಿಗೆ ತೆರಳಲು ಸರ್ಕಾರಿ ಬಸ್ ವ್ಯವಸ್ಥೆ ಇರಲಿಲ್ಲ.
ಪ್ರತಿ ದಿನವೂ ಇಲ್ಲಿನ ವಿದ್ಯಾರ್ಥಿಗಳು ನಡೆದುಕೊಂಡೇ ಕಾಲೇಜಿಗೆ ಹೋಗಬೇಕಾದ ಪರಿಸ್ಥಿತಿಯಿತ್ತು. ಇಂದಿನಿಂದ ವಿದ್ಯಾರ್ಥಿಗಳ ಈ ಸಮಸ್ಯೆ… pic.twitter.com/VLv2OwvjGj
— Gururaj Gantihole (@gantihole) October 30, 2023
Govt bus came to Byndur College after 40 years MLA Gururaj Gantiholes work appreciated by students