ದಿನಭವಿಷ್ಯ 31 ಅಕ್ಟೋಬರ್ 2023 : ಈ ರಾಶಿಯವರು ಎಚ್ಚರ ತಪ್ಪಿದ್ರೆ ಅಪಾಯ ಗ್ಯಾರಂಟಿ

Horoscope Today : ದಿನಭವಿಷ್ಯ 31 ಅಕ್ಟೋಬರ್ 2023 ಮಂಗಳವಾರ, ದ್ವಾದಶ ರಾಶಿಗಳ ಮೇಲೆ ರೋಹಿಣಿ ನಕ್ಷತ್ರದ ಪ್ರಭಾವ ಇರುತ್ತದೆ. ಇದರಿಂದ ಕುಂಭರಾಶಿ ಹಾಗೂ ಕರ್ಕಾಟಕ ರಾಶಿಯವರು ವಿಶೇಷ ಲಾಭವನ್ನು ಪಡೆಯುತ್ತಾರೆ.

Horoscope Today : ದಿನಭವಿಷ್ಯ 31 ಅಕ್ಟೋಬರ್ 2023 ಮಂಗಳವಾರ, ದ್ವಾದಶ ರಾಶಿಗಳ ಮೇಲೆ ರೋಹಿಣಿ ನಕ್ಷತ್ರದ ಪ್ರಭಾವ ಇರುತ್ತದೆ. ಇದರಿಂದ ಕುಂಭರಾಶಿ ಹಾಗೂ ಕರ್ಕಾಟಕ ರಾಶಿಯವರು ವಿಶೇಷ ಲಾಭವನ್ನು ಪಡೆಯುತ್ತಾರೆ. ಮೇಷರಾಶಿಯಿಂದ ಹಿಡಿದು ಮೀನ ರಾಶಿಯ ವರೆಗೆ ಒಟ್ಟು 12 ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷ ರಾಶಿ ದಿನಭವಿಷ್ಯ
ವೃತ್ತಿ ಜೀವನದಲ್ಲಿ ಆಹ್ಲಾದಕರ ಫಲಿತಾಂಶ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ, ಸಾಮಾಜಿಕ ಕ್ಷೇತ್ರಗಳಲ್ಲಿ ಹೊಸ ಗೌರವ. ಸಂಗಾತಿಯೊಂದಿಗಿನ ವೈಮನಸ್ಸು ಕಡಿಮೆ ಆಗುತ್ತದೆ. ಸಂಬಂಧಿಕರ ಭೇಟಿಯಿಂದ ಮನಸಿಗೆ ಸಂತಸ. ಮಕ್ಕಳ ವಿಚಾರದಲ್ಲಿ ಶುಭ ಸುದ್ದಿ ಕೇಳುವಿರಿ.

ವೃಷಭ ರಾಶಿ ದಿನಭವಿಷ್ಯ
ರಾಜಕೀಯ ವ್ಯಕ್ತಿಗಳಿಗೆ ಇಂದು ಉತ್ತಮ ದಿನ. ಧಾರ್ಮಿಕ ಕಾರ್ಯಗಳಲ್ಲಿ ಉತ್ಸಾಹ, ಮಾನಸಿಕವಾಗಿ ನೆಮ್ಮದಿ. ಹಣಕಾಸಿನ ಸಮಸ್ಯೆಗಳು ಎದುರಾಗುವ ಸಾಧ್ಯತೆ, ಯಾವುದೇ ಕೆಲಸವನ್ನು ಶೀಘ್ರದಲ್ಲಿ ಮುಗಿಸಿ, ಉದ್ಯೋಗ ಸ್ಥಳದಲ್ಲಿ ವಾಗ್ವಾದ ಉಂಟಾಗುವ ಸಾಧ್ಯತೆಯಿದೆ. ಹೊಸ ಆಸ್ತಿ ಖರೀದಿ ಯೋಗ.

ಮಿಥುನ ರಾಶಿ ದಿನಭವಿಷ್ಯ
ಈ ರಾಶಿಯವರಿಗೆ ಇಂದು ಮಿಶ್ರಫ;. ಸಾಮಾಜಿಕ ಕ್ಷೇತ್ರದಲ್ಲಿ ನಕಾರಾತ್ಮಕ ಫಲಿತಾಂಶ ದೊರೆಯಲಿದೆ. ಅಪರಿಚಿತರಿಗೆ ಸಹಾಯ ಮಾಡುವ ಅವಕಾಶ ಒದಗಿ ಬರಲಿದೆ. ತಾಯಿಯ ಆರೋಗ್ಯವು ಕ್ಷೀಣಿಸುವ ಸಾಧ್ಯತೆಯಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ. ದೂರದ ಬಂಧುಗಳ ಆಗಮನದಿಂದ ಸಂತಸ.

Horoscope today 31 October 2023 Zordic sign
Image credit to Original Source

ಕರ್ಕಾಟಕ ರಾಶಿ ದಿನಭವಿಷ್ಯ
ಹಿರಿಯರು ಸಂಪೂರ್ಣವಾಗಿ ಬೆಂಬಲ ನೀಡುತ್ತಾರೆ. ಹಿಂದೆ ಮಾಡಿದ ಹೂಡಿಕೆಗಳಿಂದ ಅಧಿಕ ಲಾಭ. ಕುಟುಂಬದ ಸದಸ್ಯರ ಮಹತ್ವಾಕಾಂಕ್ಷೆ ಪೂರೈಸುವಲ್ಲಿ ಯಶಸ್ವಿಯಾಗುತ್ತೀರಿ. ಮಗುವಿನ ಪ್ರಗತಿ ನಿಮಗೆ ಸಂತೋಷವನ್ನು ನೀಡುತ್ತದೆ. ಪೋಷಕರ ಜೊತೆಗೆ ಮಾತನಾಡುವಾಗ ಎಚ್ಚರಿಕೆ ವಹಿಸಿ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ ಹಣ ಖಾತೆಗೆ ಜಮೆ ಆಗಿಲ್ವಾ ? ಚಿಂತ ಬಿಡಿ, ಸರಕಾರದಿಂದಲೇ ಸಿಕ್ಕಿದೆ ಗುಡ್‌ನ್ಯೂಸ್‌

ಸಿಂಹ ರಾಶಿ ದಿನಭವಿಷ್ಯ
ವಿರೋಧಿಗಳಿಂದ ಇಂದು ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇಂದು ನೀವು ಬಹಳ ಎಚ್ಚರಿಕೆಯಿಂದ ಇರಬೇಕು. ನಕರಾತ್ಮಕ ಸುದ್ದಿಗಳನ್ನು ಕೇಳಿದ ನಂತದ ದೂರ ಪ್ರಯಾಣಕ್ಕೆ ತೆರಳುವ ಸಾಧ್ಯತೆ. ಯಾವುದೇ ಹಣದ ವ್ಯವಹಾರ ಮಾಡುವ ಮೊದಲು ಜಾಗರೂಕರಾಗಿ ಇರಬೇಕು. ಸರಕಾರಿ ಅಧಿಕಾರಿಗಳ ಜೊತೆಗೆ ಮಾತನಾಡುವ ಎಚ್ಚರಿಕೆ ಅಗತ್ಯ.

ಕನ್ಯಾ ರಾಶಿ ದಿನಭವಿಷ್ಯ
ವಿದ್ಯಾರ್ಥಿಗಳ ಪಾಲಿಗೆ ಇಂದು ಶುಭದಾಯಕ. ಶೈಕ್ಷಣಿಕ ಕ್ಷೇತ್ರದಲ್ಲಿ ಅಪೇಕ್ಷಿತ ಯಶಸ್ಸು ದೊರೆಯಲಿದೆ. ಇದರಿಂದಾಗಿ ನಿಮ್ಮ ಆತ್ಮವಿಶ್ವಾಸ ವೃದ್ದಿಸಲಿದೆ. ಪ್ರೇಮ ವಿವಾಹವು ಧನಾತ್ಮಕ ಫಲಿತಾಂಶವನ್ನು ನೀಡುತ್ತದೆ. ಕುಟುಂಬ ಸದಸ್ಯರಿಗೆ ಇಂದು ಸಂಗಾತಿಯನ್ನು ಪರಿಚಯಿಸುವಿರಿ. ಹೊಸ ಕೆಲಸಗಳನ್ನು ಮಾಡುವ ಮೊದಲು ತಂದೆಯ ಸಲಹೆ ಪಡೆಯಿರಿ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ ಹಣ ಇನ್ನೂ ಸಿಕ್ಕಿಲ್ವಾ ? ಇಂದೇ ಈ ಕೆಲಸ ಮಾಡಿದ್ರೆ ನಿಮ್ಮ ಬ್ಯಾಂಕ್‌ ಖಾತೆಗೆ ಹಣ ಜಮೆ ಆಗೋದು ಗ್ಯಾರಂಟಿ

ತುಲಾ ರಾಶಿ ದಿನಭವಿಷ್ಯ
ಕೆಲವೊಂದು ವಿಚಾರಗಳು ನಿಮ್ಮನ್ನು ಇಂದು ಚಿಂತೆಗೆ ದೂಡಲಿದೆ. ಯೋಗ ಪ್ರಾಣಾಯಾಗ ಮಾಡುವ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ರಜೆಯ ಬಗ್ಗೆ ಯೋಚಿಸುತ್ತಿದ್ದರೆ ನೀವು ಎಚ್ಚರವಾಗಿ ಇರುವುದು ಒಳಿತು. ನಿಮ್ಮ ವಾಹನವನ್ನು ಇತರರಿಗೆ ನೀಡುವುದನ್ನು ತಪ್ಪಿಸಿ. ಇಲ್ಲದಿದ್ದರೆ ಅಪಘಾತ ಸಾಧ್ಯತೆಯಿದೆ. ಮನೆ ಖರೀದಿ ಕನಸು ನನಸಾಗಲಿದೆ.

ವೃಶ್ಚಿಕ ರಾಶಿ ದಿನಭವಿಷ್ಯ
ಶತ್ರುಗಳ ವಿರುದ್ದ ನೀವು ಜಯಗಳಿಸುವಿರಿ. ಉದ್ಯೋಗಳಿಗೆ ಕೆಲಸದ ಹೊರೆ ಹೆಚ್ಚಾಗಲಿದೆ. ಈ ಸಮಯದಲ್ಲಿ ನೀವು ಸಹೋದ್ಯೋಗಿಗಳ ಜೊತೆಗೆ ಕೆಲಸ ಮಾಡಬೇಕು. ಸಂಗಾತಿಯನ್ನು ನೀವು ವಿಹಾರಕ್ಕೆ ಕರೆದೊಯ್ಯಬಹುದು. ಆದಾಯಕ್ಕೆ ತಕ್ಕಂತೆ ಖರ್ಚು ಮಾಡಬೇಕು. ಇಷ್ಟಾರ್ಥಗಳು ಈಡೇರಿಕೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : Karwa Chauth 2023 : ಗಂಡನ ದೀರ್ಘಾಯುಷ್ಯಕ್ಕಾಗಿ ಪತ್ನಿಯರ ಕೈಗೆ ಮೆಹಂದಿ : ಕರ್ವಾ ಚೌತ್‌ ಹಬ್ಬ ಆಚರಣೆ ಹೇಗಿರುತ್ತೇ ಗೊತ್ತಾ ?

ಧನಸ್ಸುರಾಶಿ ದಿನಭವಿಷ್ಯ
ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬ ಸದಸ್ಯರ ಜೊತೆಗೆ ಮಾತನಾಡುವ ವೇಳೆಯಲ್ಲಿ ಎಚ್ಚರವಾಗಿರಿ. ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿಬರಲಿದೆ. ಧೀರ್ಘ ಕಾಲದಿಂದ ಬಾಕಿ ಉಳಿದಿದ್ದ ಕೆಲಸ ಕಾರ್ಯಗಳು ಇಂದು ಪೂರ್ಣಗೊಳ್ಳಲಿದೆ. ಅಲ್ಲದೇ ಕೆಲವೊಂದು ಕಾರ್ಯಗಳಲ್ಲಿ ನೀವು ಯಶಸ್ವಿ ಆಗುತ್ತೀರಿ.

ಮಕರ ರಾಶಿ ದಿನಭವಿಷ್ಯ
ಈ ರಾಶಿಯವರು ಇಂದು ಆಹ್ಲಾದಕರ ಫಲಿತಾಂಶವನ್ನು ಪಡೆಯುತ್ತಾರೆ. ವ್ಯಾಪಾರದಲ್ಲಿ ಪಾಲುದಾರರ ಜೊತೆಗೆ ವ್ಯವಹಾರ ಮಾಡುವಾಗ ಎಚ್ಚರವಾಗಿ ಇರಿ. ಪ್ರೀತಿಯ ಜೀವನವು ಸಂತೋಷವನ್ನು ನೀಡುತ್ತದೆ. ತಾಯಿಯ ಕಡಿಮೆಯಿಂದ ಆರ್ಥಿಕ ಲಾಭಗಳು ಕಂಡು ಬರಲಿದೆ. ಧಾರ್ಮಿಕ ಚಟುವಟಿಕೆಗಳಲ್ಲಿ ನೀವು ಭಾಗಿಯಾಗುವಿರಿ.

ಕುಂಭ ರಾಶಿ ದಿನಭವಿಷ್ಯ
ನಿಮ್ಮ ಖರ್ಚುಗಳು ಹೆಚ್ಚಳವಾಗಲಿದೆ. ಉದ್ಯೋಗಿಗಳು ಕೆಲಸ ಕಾರ್ಯಗಳಲ್ಲಿ ಅಸಡ್ಡೆಯನ್ನು ತೋರಿಸುತ್ತಾರೆ. ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಹಲವು ಬಾರಿ ಯೋಚಿಸಿ. ಕುಟುಂಬ ಸದಸ್ಯರ ಆರೋಗ್ಯದ ಹಠಾತ್‌ ಕ್ಷೀಣಿಸಲಿಎ. ನವವಿವಾಹಿತರು ಶುಭ ಸುದ್ದಿಯನ್ನು ಕೇಳುವರು.

ಮೀನ ರಾಶಿ ದಿನಭವಿಷ್ಯ
ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ದೊರೆಯಲಿದೆ. ವ್ಯಾಪಾರಿಗಳಿಗೆ ಹೆಚ್ಚಿನ ಆದಾಯ ಅವಕಾಶಗಳು ದೊರೆಯಲಿದೆ. ಸಹೋದರ ಸಹೋದರಿ ಯರು ನಿಮಗೆ ಕೆಲವೊಂದು ಉತ್ತಮ ಸಲಹೆಗಳನ್ನು ನೀಡುತ್ತಾರೆ. ಸಂಗಾತಿಯೊಂದಿಗೆ ಕೆಲವೊಂದು ಭವಿಷ್ಯ ಯೋಜನೆಗಳ ಬಗ್ಗೆ ಚರ್ಚಿಸುವಿರಿ. ಸಂಬಂಧಿಕರು ನಿಮಗೆ ಹಣದ ಸಹಕಾರ ಮಾಡಲಿದ್ದಾರೆ.

Horoscope today 31 October 2023 Zordic sign

Comments are closed.