ಉಡುಪಿ : Manipal : ಶೈಕ್ಷಣಿಕ ಕೇಂದ್ರಗಳ ಮಹಾ ಜಗತ್ತೆ ಎಂದು ಕರೆಸಿಕೊಂಡಿರುವ ಉಡುಪಿಯ ಮಣಿಪಾಲದಲ್ಲಿ ಎತ್ತ ನೋಡಿದರು ಕಾಂಕ್ರೀಟ್ ಕಟ್ಟಡಗಳದ್ದೇ ಸಾಲು. ಆದರೆ ಈ ಕಾಂಕ್ರೀಟ್ ನಾಡಿನ ನಡುವೆ ಹೆಚ್ಚಿನ ಮಂದಿಗೆ ತಿಳಿಯದ ಒಂದು ನೈಸರ್ಗಿಕ ಜಗತ್ತು ಇದೆ. ಹಾಗಾದರೆ ಆ ಜಗತ್ತು ಯಾವುದು, ಅಲ್ಲೇನಿದೆ ವಿಶೇಷ ಎಂಬುದರ ಡಿಟೇಲ್ಸ್ ಈ ಸ್ಟೋರಿಯಲ್ಲಿದೆ.
ಹೌದು ಉಡುಪಿಯ ಮಣಿಪಾಲದ ದಶರಥ ನಗರದಿಂದ ಹೋಗುವ ದಾರಿಯ ವೈಷ್ಣವಿ ದೇವಸ್ಥಾನದ ಅನತಿ ದೂರದ ಅರ್ಬಿ ಎಂಬಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಕಾನನದ ನಡುವೆ ಹಲವು ಕಿರಿದಾದ ಜಲಪಾತಗಳು ಹುಟ್ಟಿಕೊಳ್ಳುತ್ತದೆ. ಹಾಲ್ನೂರೆಯಂತೆ ಹರಿಯುವ ಈ ಜಲಧಾರೆ ಇಲ್ಲಿ ಬರುವ ಪ್ರವಾಸಿಗರ ಕಣ್ಮಣವನ್ನು ಸೆಳೆಯುತ್ತದೆ. ಮಳೆಗಾಲದಿಂದ ಆರಂಭವಾಗಿ ಕಡುಬೇಸಿಗೆಯವರಿಗೆ ಹರಿಯುವ ಈ ಜಲಪಾತಗಳು ಡೇಂಜರಸ್ ಅಂತಾ ಅನಿಸುವುದಿಲ್ಲ. ಏಕೆಂದರೆ ಎಲ್ಲಿಯೂ ಆಳವಾದ ಗುಂಡಿಗಳಿಲ್ಲ, ಬಂಡೆಕಲ್ಲುಗಳು ಜಾರುವುದಿಲ್ಲ. ಹಾಗಾಗಿ ಇಲ್ಲಿಗೆ ಮಕ್ಕಳು,ವಿದ್ಯಾರ್ಥಿಗಳು,ಹಿರಿಯರು ಕಿರಿಯರು ಎನ್ನದೇ ಕುಟುಂಬ ಸಮೇತ ಬಂದು ಜಲಧಾರೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ.
ಜಲಧಾರೆಯನ್ನು ಕಂಡರೆ ಒಮ್ಮೆಲೇ ನೀರಿಗೆ ಜಿಗಿದು ಬಿಡುವ ಎಂದನಿಸುತ್ತದೆ. ಅರ್ಬಿಯ ಸೌಂದರ್ಯವನ್ನು ನೋಡುವುದಕ್ಕೆ ಸ್ಥಳೀಯರು ರಜಾ ದಿನಗಳಲ್ಲಿ ಹೆಚ್ಚಾಗಿ ಬರುತ್ತಾರೆ. ಇಲ್ಲಿ ಜಲಪಾತದಲ್ಲಿ ನೀರಾಟವನ್ನು ಆಡಿ,ಮಿಂದೆದ್ದು ವಿವಿಧ ವಿವಿಧ ಭಂಗಿಗಳಲ್ಲಿ ಫೋಟುವನ್ನು ತೆಗೆಸಿಕೊಳ್ಳುತ್ತಾರೆ.
ಒಟ್ಟಿನಲ್ಲಿ ನಗರದ ಜಂಜಾಟ,ಕೆಲಸಗಳ ಒತ್ತಡದಿಂದ ಬಸವಳಿದ ಜನರಿಗೆ ಮಳೆಗಾಲದ ಸಂದರ್ಭದಲ್ಲಿ ಸೃಷ್ಠಿಯಾಗುವ ಈ ಜಲಧಾರೆಯು ಮನಸ್ಸಿಗೆ ಮುದ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಪ್ರಚಾರವಿಲ್ಲದ ಕಾರಣ ಇದೊಂದು ನಿಗೂಢ ಜಲಪಾತವಾಗಿ ತನ್ನ ಪ್ರಕೃತಿ ಸೌಂದರ್ಯವನ್ನು ಹೊರಚೆಲ್ಲುತ್ತಿದೆ. ಈ ನಿಟ್ಟಿನಲ್ಲಿ ಪ್ರವಾಸೋಧ್ಯಮ ಇಲಾಖೆ ಸ್ವಲ್ಪ ಮಟ್ಟಿನ ಗಮನ ಹರಿಸಿದರೆ ಅರ್ಬಿಯ ಸವಿಯನ್ನು ದೂರದ ಪ್ರವಾಸಿಗರಿಗೂ ಪಸರಿಸಬಹುದಾಗಿದೆ.
ಇದನ್ನೂ ಓದಿ :KL Rahul Dooda Ganesh : ನಮ್ಮ ಕನ್ನಡಿಗ ಕೆ.ಎಲ್ ರಾಹುಲ್ ವಿರುದ್ಧ ಮತ್ತೆ ವಿಷ ಕಾರಿದ ದೊಡ್ಡ ಗಣೇಶ್
Inside the concrete world of Manipal is a wonderful natural world