Comeback Ajinkya Rahane: “ಆಯ್ಕೆಗಾರರೇ ಈಗೆನ್ನುತ್ತೀರಿ..” ನನ್ನನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲು ಈ ದ್ವಿಶತಕ ಸಾಕಲ್ಲವೇ?

ಚೆನ್ನೈ: (Comeback Ajinkya Rahane) ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಮುಂಬೈನ ಹಿರಿಯ ಬ್ಯಾಟ್ಸ್’ಮನ್ ಅಜಿಂಕ್ಯ ರಹಾನೆ ದುಲೀಪ್ ಟ್ರೋಫಿ (Duleep Trophy) ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಬಾರಿಸಿದ್ದಾರೆ. ಆ ಮೂಲಕ ತಮ್ಮನ್ನು ಟೆಸ್ಟ್ ತಂಡದಿಂದ ಹೊರ ಹಾಕಿದ ಬಿಸಿಸಿಐ ಆಯ್ಕೆ ಸಮಿತಿಗೆ ಬ್ಯಾಟ್’ನಿಂದಲೇ ಉತ್ತರ ಕೊಟ್ಟಿದ್ದಾರೆ.

ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಶ್ಚಿಮ ವಲಯ ಹಾಗೂ ಈಶಾನ್ಯ ವಲಯ ನಡುವಿನ ಪಂದ್ಯದಲ್ಲಿ ರಹಾನೆ ಅಮೋಘ ದ್ವಿಶತಕದೊಂದಿಗೆ ಮಿಂಚಿದ್ದಾರೆ. ಪಶ್ಚಿಮ ವಲಯ ತಂಡವನ್ನು ಮುನ್ನಡೆಸುತ್ತಿರುವ ರಹಾನೆ 2ನೇ ದಿನದಂತ್ಯಕ್ಕೆ 264 ಎಸೆತಗಳಲ್ಲಿ ಅಜೇಯ 207 ರನ್ ಗಳಿಸಿದ್ದಾರೆ. ರಹಾನೆ ಇನ್ನಿಂಗ್ಸ್’ನಲ್ಲಿ 18 ಬೌಂಡರಿ ಹಾಗೂ 6 ಸಿಕ್ಸರ್’ಗಳು ಒಳಗೊಂಡಿವೆ.

ಇದೇ ವರ್ಷದ ಜನವರಿಯಲ್ಲಿ ಕೇಪ್ ಟೌನ್’ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ನಂತರ ಅಜಿಂಕ್ಯ ರಹಾನೆ ಅವರನ್ನು ಭಾರತ ತಂಡದಿಂದ ಕೈಬಿಡಲಾಗಿತ್ತು. ನಂತರ ನಡೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ, ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಪಂದ್ಯದಲ್ಲಿ ರಹಾನೆಗೆ ಅವಕಾಶ ಸಿಕ್ಕಿರಲಿಲ್ಲ. ರಹಾನೆ ಬದಲು ಮುಂಬೈನ ಮತ್ತೊಬ್ಬ ಬ್ಯಾಟ್ಸ್’ಮನ್ ಶ್ರೇಯಸ್ ಅಯ್ಯರ್ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಮತ್ತೆ ಟೀಮ್ ಇಂಡಿಯಾ ಪರ ಟೆಸ್ಟ್ ಆಡುವ ಛಲ ಹೊಂದಿರುವ 34 ವರ್ಷದ ಅಜಿಂಕ್ಯ ರಹಾನೆ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಮಿಂಚುವ ಮೂಲಕ ತಮ್ಮ ಗುರಿ ಈಡೇರಿಸಿಕೊಳ್ಳಲು ಮುಂದಾಗಿದ್ದಾರೆ. ಮೊದಲ ಪಂದ್ಯದಲ್ಲೇ ಭರ್ಜರಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.

ರಹಾನೆ ಜೊತೆ ಮುಂಬೈನ ಯುವ ಎಡಗೈ ಆರಂಭಿಕ ಬ್ಯಾಟ್ಸ್’ಮನ್ ಯಶಸ್ವಿ ಜೈಸ್ವಾಲ್ (Yashasvi Jaiswal) ಕೂಡ ದ್ವಿಶತಕ ಬಾರಿಸಿದ್ದು, 321 ಎಸೆತಗಳಲ್ಲಿ 22 ಬೌಂಡರಿಗಳು ಹಾಗೂ 3 ಸಿಕ್ಸರ್ ನೆರವಿನಿಂದ 228 ರನ್ ಗಳಿಸಿ ಔಟಾಗಿದ್ದಾರೆ. ಮತ್ತೊಬ್ಬ ಆರಂಭಕಾರ ಪೃಥ್ವಿ ಶಾ (Prithvi Shaw) ಸ್ಫೋಟಕ ಶತಕ (121 ಎಸೆತಗಳಲ್ಲಿ 113 ರನ್, 11 ಬೌಂಡರಿ, 5 ಸಿಕ್ಸರ್) ಸಿಡಿಸಿದ್ದಾರೆ. ಪೃಥ್ವಿ ಶಾ ಮತ್ತು ಯಶಸ್ವಿ ಜೈಸ್ವಾಲ್ ಜೋಡಿ ಮೊದಲ ವಿಕೆಟ್’ಗೆ 206 ರನ್ ಸೇರಿಸಿ ಪಶ್ಚಿಮ ವಲಯ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ರೆ, 2ನೇ ವಿಕೆಟ್’ಗೆ ಜೈಸ್ವಾಲ್ ಮತ್ತು ನಾಯಕ ಅಜಿಂಕ್ಯ ರಹಾನೆ ಜೋಡಿ ಅಮೋಘ 333 ರನ್’ಗಳ ಜೊತೆಯಾಟವಾಡಿದೆ. ಭಾರತ ಪರ 82 ಟೆಸ್ಟ್ ಪಂದ್ಯಗಳನ್ನಾಡಿರುವ ಅಜಿಂಕ್ಯ ರಹಾನೆ 38.52ರ ಸರಾಸರಿಯಲ್ಲಿ 12 ಶತಕಗಳು ಮತ್ತು 25 ಅರ್ಧಶತಕಗಳ ನೆರವಿನಿಂದ 4,931 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ : Dhoni Kapil Dev US Open tennis : ಯುಎಸ್ ಓಪನ್ ಟೆನಿಸ್ ಅಂಗಣದಲ್ಲಿ 3 ವಿಶ್ವಕಪ್ ವಿಜೇತ ನಾಯಕರು ; ಟೆನಿಸ್ ಎಂಜಾಯ್ ಮಾಡಿದ ಧೋನಿ, ಕಪಿಲ್ ದೇವ್

ಇದನ್ನೂ ಓದಿ : Road Safety Series 2022 : ಇಂದಿನಿಂದ ದಿಗ್ಗಜರ ಕ್ರಿಕೆಟ್; ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕ್ರಿಕೆಟ್ ದೇವರು

On comeback trail Ajinkya Rahane slams double Century in Duleep Trophy

Comments are closed.