Road Safety Series 2022 : ಇಂದಿನಿಂದ ದಿಗ್ಗಜರ ಕ್ರಿಕೆಟ್; ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕ್ರಿಕೆಟ್ ದೇವರು

ಕಾನ್ಪುರ: ಕ್ರಿಕೆಟ್ ದಿಗ್ಗಜರ ರೋಚಕ ಕಾದಾಟಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar), ವಿಶ್ವಕಪ್ ಹೀರೋ ಯುವರಾಜ್ ಸಿಂಗ್ (Yuvraj Singh), ಟರ್ಬನೇಟರ್ ಹರ್ಭಜನ್ ಸಿಂಗ್ (Harbhajan Singh) ಸಹಿತ ಘಟಾನುಘಟಿ ಆಟಗಾರರು ಇಂದು (ಶನಿವಾರ, ಸೆಪ್ಟೆಂಬರ್ 10) ಆರಂಭವಾಗಲಿರುವ ರೋಡ್ ಸೇಫ್ಟಿ ಸೀರೀಸ್ ಟಿ20 ಟೂರ್ನಿಯಲ್ಲಿ (Road Safety Series 2022) ಆಡಲಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ರಾತ್ರಿ 7.30ಕ್ಕೆ ಆರಂಭವಾಗಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ಸ್ ತಂಡ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ( India legends vs South Africa Legends) ತಂಡವನ್ನು ಎದುರಿಸಲಿದೆ.

ಇಂಡಿಯಾ ಲೆಜೆಂಡ್ಸ್ ತಂಡವನ್ನು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮುನ್ನಡೆಸಲಿದ್ದು, ಜಗತ್ತಿನ ಸರ್ವಶ್ರೇಷ್ಠ ಫೀಲ್ಡರ್ ಖ್ಯಾತಿಯ ಜಾಂಟಿ ರೋಡ್ಸ್ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ತಂಡದ ಸಾರಥ್ಯ ವಹಿಸಲಿದ್ದಾರೆ. ಟೂರ್ನಿಯಲ್ಲಿ ಇಂಡಿಯಾ ಲೆಜೆಂಡ್ಸ್, ಇಂಗ್ಲೆಂಡ್ ಲೆಜೆಂಡ್ಸ್, ಆಸ್ಟ್ರೇಲಿಯಾ ಲೆಜೆಂಡ್ಸ್, ದಕ್ಷಿಣ ಆಫ್ರಿಕಾ ಲೆಜೆಂಡ್ಸ್, ವೆಸ್ಟ್ ಇಂಡೀಸ್ ಲೆಜೆಂಡ್ಸ್, ಶ್ರೀಲಂಕಾ ಲೆಜೆಂಡ್ಸ್, ನ್ಯೂಜಿಲೆಂಡ್ ಲೆಜೆಂಡ್ಸ್ ಮತ್ತು ಬಾಂಗ್ಲಾದೇಶ ಲೆಜೆಂಡ್ಸ್ ತಂಡಗಳು ಭಾಗವಹಿಸಲಿವೆ. ಟೂರ್ನಿಯ ಫೈನಲ್ ಪಂದ್ಯ ಅಕ್ಟೋಬರ್ 1ರಂದು ರಾಯ್ಪುರದಲ್ಲಿ ನಡೆಯಲಿದೆ.

ರೋಡ್ ಸೇಫ್ಟಿ ಸಿರೀಸ್ ಟೂರ್ನಿಯ (Road Safety Series 2022 ) ಸಂಪೂರ್ಣ ವೇಳಾಪಟ್ಟಿ

ಸೆಪ್ಟೆಂಬರ್ 10: ಇಂಡಿಯಾ ಲೆಜೆಂಡ್ಸ್ Vs ದಕ್ಷಿಣ ಆಫ್ರಿಕಾ ಲೆಜೆಂಡ್ಸ್ (ಕಾನ್ಪುರ, ರಾತ್ರಿ 7.30ಕ್ಕೆ)

ಸೆಪ್ಟೆಂಬರ್ 11: ಬಾಂಗ್ಲಾದೇಶ ಲೆಜೆಂಡ್ಸ್ Vs ವೆಸ್ಟ್ ಇಂಡೀಸ್ ಲೆಜೆಂಡ್ಸ್ (ಕಾನ್ಪುರ, ಮಧ್ಯಾಹ್ನ 3.30ಕ್ಕೆ)

ಸೆಪ್ಟೆಂಬರ್ 11: ಶ್ರೀಲಂಕಾ ಲೆಜೆಂಡ್ಸ್ Vs ಆಸ್ಟ್ರೇಲಿಯಾ ಲೆಜೆಂಡ್ಸ್ (ಕಾನ್ಪುರ, ರಾತ್ರಿ 7.30ಕ್ಕೆ)

ಸೆಪ್ಟೆಂಬರ್ 12: ನ್ಯೂಜಿಲೆಂಡ್ ಲೆಜೆಂಡ್ಸ್ Vs ದಕ್ಷಿಣ ಆಫ್ರಿಕಾ ಲೆಜೆಂಡ್ಸ್ (ಕಾನ್ಪುರ, ರಾತ್ರಿ 7.30ಕ್ಕೆ)

ಸೆಪ್ಟೆಂಬರ್ 13: ಇಂಗ್ಲೆಂಡ ಲೆಜೆಂಡ್ಸ್ Vs ಶ್ರೀಲಂಕಾ ಲೆಜೆಂಡ್ಸ್ (ಕಾನ್ಪುರ, ರಾತ್ರಿ 7.30ಕ್ಕೆ)

ಸೆಪ್ಟೆಂಬರ್ 14: ಇಂಡಿಯಾ ಲೆಜೆಂಡ್ಸ್ Vs ವೆಸ್ಟ್ ಇಂಡೀಸ್ ಲೆಜೆಂಡ್ಸ್ (ಕಾನ್ಪುರ, ರಾತ್ರಿ 7.30ಕ್ಕೆ)

ಸೆಪ್ಟೆಂಬರ್ 15: ಬಾಂಗ್ಲಾದೇಶ ಲೆಜೆಂಡ್ಸ್ Vs ನ್ಯೂಜಿಲೆಂಡ್ ಲೆಜೆಂಡ್ಸ್ (ಕಾನ್ಪುರ, ರಾತ್ರಿ 7.30ಕ್ಕೆ)

ಸೆಪ್ಟೆಂಬರ್ 17: ಇಂಗ್ಲೆಂಡ್ ಲೆಜೆಂಡ್ಸ್ Vs ವೆಸ್ಟ್ ಇಂಡೀಸ್ ಲೆಜೆಂಡ್ಸ್ (ಇಂದೋರ್, ಮಧ್ಯಾಹ್ನ 3.30ಕ್ಕೆ)

ಸೆಪ್ಟೆಂಬರ್ 17: ಶ್ರೀಲಂಕಾ ಲೆಜೆಂಡ್ಸ್ Vs ದಕ್ಷಿಣ ಆಫ್ರಿಕಾ ಲೆಜೆಂಡ್ಸ್ (ಇಂದೋರ್, ರಾತ್ರಿ 7.30ಕ್ಕೆ)

ಸೆಪ್ಟೆಂಬರ್ 18: ಆಸ್ಟ್ರೇಲಿಯಾ ಲೆಜೆಂಡ್ಸ್ Vs ಬಾಂಗ್ಲಾದೇಶ ಲೆಜೆಂಡ್ಸ್ (ಇಂದೋರ್, ಮಧ್ಯಾಹ್ನ 3.30ಕ್ಕೆ)

ಸೆಪ್ಟೆಂಬರ್ 18: ಇಂಡಿಯಾ ಲೆಜೆಂಡ್ಸ್ Vs ನ್ಯೂಜಿಲೆಂಡ್ ಲೆಜೆಂಡ್ಸ್ (ಇಂದೋರ್, ರಾತ್ರಿ 7.30ಕ್ಕೆ)

ಸೆಪ್ಟೆಂಬರ್ 19: ಇಂಗ್ಲೆಂಡ್ ಲೆಜೆಂಡ್ಸ್ Vs ದಕ್ಷಿಣ ಆಫ್ರಿಕಾ ಲೆಜೆಂಡ್ಸ್ (ಇಂದೋರ್, ರಾತ್ರಿ 7.30ಕ್ಕೆ)

ಸೆಪ್ಟೆಂಬರ್ 21: ಇಂಡಿಯಾ ಲೆಜೆಂಡ್ಸ್ Vs ಬಾಂಗ್ಲಾದೇಶ ಲೆಜೆಂಡ್ಸ್ (ಡೆಹ್ರಾಡೂನ್, ರಾತ್ರಿ 7.30ಕ್ಕೆ)

ಸೆಪ್ಟೆಂಬರ್ 22: ವೆಸ್ಟ್ ಇಂಡೀಸ್ ಲೆಜೆಂಡ್ಸ್ Vs ನ್ಯೂಜಿಲೆಂಡ್ ಲೆಜೆಂಡ್ಸ್ (ಡೆಹ್ರಾಡೂನ್, ರಾತ್ರಿ 7.30ಕ್ಕೆ)

ಸೆಪ್ಟೆಂಬರ್ 23: ಆಸ್ಟ್ರೇಲಿಯಾ ಲೆಜೆಂಡ್ಸ್ Vs ದಕ್ಷಿಣ ಆಫ್ರಿಕಾ ಲೆಜೆಂಡ್ಸ್ (ಡೆಹ್ರಾಡೂನ್, ರಾತ್ರಿ 7.30ಕ್ಕೆ)

ಸೆಪ್ಟೆಂಬರ್ 24: ಇಂಡಿಯಾ ಲೆಜೆಂಡ್ಸ್ Vs ಇಂಗ್ಲೆಂಡ್ ಲೆಜೆಂಡ್ಸ್ (ಡೆಹ್ರಾಡೂನ್, ರಾತ್ರಿ 7.30ಕ್ಕೆ)

ಸೆಪ್ಟೆಂಬರ್ 25: ಶ್ರೀಲಂಕಾ ಲೆಜೆಂಡ್ಸ್ Vs ನ್ಯೂಜಿಲೆಂಡ್ ಲೆಜೆಂಡ್ಸ್ (ಡೆಹ್ರಾಡೂನ್, ಮಧ್ಯಾಹ್ನ 3.30ಕ್ಕೆ)

ಸೆಪ್ಟೆಂಬರ್ 25: ಆಸ್ಟ್ರೇಲಿಯಾ ಲೆಜೆಂಡ್ಸ್ Vs ವೆಸ್ಟ್ ಇಂಡೀಸ್ ಲೆಜೆಂಡ್ಸ್ (ಡೆಹ್ರಾಡೂನ್, ರಾತ್ರಿ 7.30ಕ್ಕೆ)

ಸೆಪ್ಟೆಂಬರ್ 27: ಶ್ರೀಲಂಕಾ ಲೆಜೆಂಡ್ಸ್ Vs ಬಾಂಗ್ಲಾದೇಶ ಲೆಜೆಂಡ್ಸ್ (ರಾಯ್ಪುರ, ಮಧ್ಯಾಹ್ನ 3.30ಕ್ಕೆ)

ಸೆಪ್ಟೆಂಬರ್ 27: ಇಂಗ್ಲೆಂಡ್ ಲೆಜೆಂಡ್ಸ್ Vs ಆಸ್ಟ್ರೇಲಿಯಾ ಲೆಜೆಂಡ್ಸ್ (ರಾಯ್ಪುರ, ರಾತ್ರಿ 7.30ಕ್ಕೆ)

ಸೆಪ್ಟೆಂಬರ್ 28: ಸೆಮಿಫೈನಲ್-1 (ರಾಯ್ಪುರ, ರಾತ್ರಿ 7.30ಕ್ಕೆ)

ಸೆಪ್ಟೆಂಬರ್ 29: ಸೆಮಿಫೈನಲ್-2 (ರಾಯ್ಪುರ, ರಾತ್ರಿ 7.30ಕ್ಕೆ)

ಅಕ್ಟೋಬರ್ 01: ಫೈನಲ್ (ರಾಯ್ಪುರ, ರಾತ್ರಿ 7.30ಕ್ಕೆ)

Live: Colors Cineplex HD, Colors Cineplex, Colors Cineplex Superhits, and Sports18 Khel

live stream: Voot app, Jio TV app

ರೋಡ್ ಸೇಫ್ಟಿ ಸಿರೀಸ್ ಟೂರ್ನಿಯಲ್ಲಿ ಆಡಲಿರುವ ತಂಡಗಳ ವಿವರ

ಇಂಡಿಯಾ ಲೆಜೆಂಡ್ಸ್ ತಂಡ (India Iegends):
ಸಚಿನ್ ತೆಂಡೂಲ್ಕರ್(Sachin Tendulkar) (ನಾಯಕ), ಯುವರಾಜ್ ಸಿಂಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್, ಮುನಾಫ್ ಪಟೇಲ್, ಎಸ್.ಬದ್ರಿನಾಥ್, ನಮನ್ ಓಜಾ (ವಿಕೆಟ್ ಕೀಪರ್), ಸ್ಟುವರ್ಟ್ ಬಿನ್ನಿ, ಆರ್.ವಿನಯ್ ಕುಮಾರ್, ಅಭಿಮನ್ಯು ಮಿಥುನ್, ಮನ್ಪ್ರೀತ್ ಗೋನಿ, ಪ್ರಜ್ಞಾನ್ ಓಜಾ, ರಮೇಶ್ ಪವಾರ್, ರಾಹುಲ್ ಶರ್ಮಾ.

ನ್ಯೂಜಿಲೆಂಡ್ ಲೆಜೆಂಡ್ಸ್ ತಂಡ (New Zealand Legends):
ರಾಸ್ ಟೇಲರ್ (ನಾಯಕ), ಜೇಕಬ್ ಓರಮ್, ಜೇಮಿ ಹೌ, ಜೇಸನ್ ಸ್ಪೈಸ್, ಕೈಲ್ ಮಿಲ್ಸ್, ಸ್ಕಾಟ್ ಸ್ಟೈರಿಸ್, ಶೇನ್ ಬಾಂಡ್, ಡೀನ್ ಬ್ರೌನ್ಲೀ, ಬ್ರೂಸ್ ಮಾರ್ಟಿನ್, ನೀಲ್ ಬ್ರೂಮ್, ಆರೋನ್ ರೆಡ್ಮಂಡ್, ಆಂಟನ್ ಡೆವ್ಸಿಚ್, ಕ್ರೆಗ್ ಮೆಕ್’ಮಿಲನ್, ಗೆರೆತ್ ಹಾಪ್’ಕಿನ್ಸ್, ಹ್ಯಾಮಿಶ್ ಬೆನೆಟ್.

ಇದನ್ನೂ ಓದಿ : KL Rahul Dooda Ganesh : ನಮ್ಮ ಕನ್ನಡಿಗ ಕೆ.ಎಲ್ ರಾಹುಲ್ ವಿರುದ್ಧ ಮತ್ತೆ ವಿಷ ಕಾರಿದ ದೊಡ್ಡ ಗಣೇಶ್

ಇದನ್ನೂ ಓದಿ : Dhoni Kapil Dev US Open tennis : ಯುಎಸ್ ಓಪನ್ ಟೆನಿಸ್ ಅಂಗಣದಲ್ಲಿ 3 ವಿಶ್ವಕಪ್ ವಿಜೇತ ನಾಯಕರು ; ಟೆನಿಸ್ ಎಂಜಾಯ್ ಮಾಡಿದ ಧೋನಿ, ಕಪಿಲ್ ದೇವ್

Road Safety Series 2022 India legends vs South Africa Legends

Comments are closed.