Pramod Muthalik :ಇಂತಿಫಿದಾ ಎಂಬುದು ಆಘಾತಕಾರಿ ಸಂದೇಶ: ಪ್ರಮೋದ್ ಮುತಾಲಿಕ್

ಉಡುಪಿ : Pramod Muthalik Intifida : ಕೇಂದ್ರ ಸರ್ಕಾರ ದೇಶದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ‌ನಿಷೇಧಿಸಿ ಆದೇಶಿಸಿದೆ. ಆದ್ರೆ ಪಿ.ಎಫ್.ಐ ಸೇರಿದಂತೆ ಅದರ ಅಂಗಸಂಸ್ಥೆಗಳು ತಮ್ಮ ಸಂಘಟನೆಗಳ ಹೆಸರನ್ನು ಬದಲಾಯಿಸಿ ಕಾರ್ಯಾಚರಣೆ ಆರಂಭಿಸಿರುವ ಅನುಮಾನ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹಿಂದಿನ ಖಾತೆಗಳ ಹೆಸರನ್ನು ಇಂತಿಫಿದಾ ಎಂಬ ಹೆಸರಾಗಿ ಬದಲಾಯಿಸಿರೋದು ಬೆಳಕಿಗೆ ಬಂದಿದೆ. ಈ ಇಂತಿಫಿದಾ ಹೆಸರು ಇದೀಗ ಬಹಳಷ್ಟು ಪರ ವಿರೋಧದ ಚರ್ಚೆಗೆ ಕಾರಣವಾಗಿದೆ. ಈ ಇಂತಿಫಿದಾ ಎಂಬುದು ಆಘಾತಕಾರಿ ಸಂದೇಶ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪಿಎಫ್ಐ ಎಂಬ ರಾಕ್ಷಸಿ ಶಕ್ತಿ ದೇಶದ್ರೋಹಿ ಕ್ಯಾನ್ಸರ್ ಆಗಿತ್ತು. ಈ ಶಕ್ತಿಗೆ ಕೇಂದ್ರ ಸರ್ಕಾರ ದೊಡ್ಡ ಪ್ರಮಾಣದ ಏಟು ಕೊಟ್ಟಿದೆ. ಆಂತರಿಕವಾಗಿ ದೇಶದ್ರೋಹಿ ಕಂಟಕ ಇನ್ನು ಇದೆ. ದೇಶದ ಎಲ್ಲಾ ಹಿಂದೂ ಸಂಘಟನೆಗಳು ಅಲರ್ಟ್ ಆಗಿ ಇರಬೇಕು ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಸಿದ್ದಾರೆ. ಹಿಂದೂ ಸಂಘಟನೆಗಳು ಸಮಾಜವನ್ನು ಜಾಗೃತ ಕೆಲಸ ಮಾಡುತ್ತಲೇ ಇದ್ದೇವೆ. ಯಾವಾಗ ಆಂತರಿಕ ಆಘಾತವಾಗುತ್ತೋ ಗೊತ್ತಿಲ್ಲ. ಇಂತಿಫಿದಾ ಎಂಬೂದು ಆಘಾತಕಾರಿ ಸಂದೇಶ. ಸಾಮಾಜಿಕ ಜಾಲತಾಣದ ಸಂದೇಶವನ್ನು ನಿರ್ಲಕ್ಷಿಸಬಾರದು. ಎಲ್ಲಾ ತಯಾರಿಗಳನ್ನು ಮಾಡಿಕೊಂಡು ಬೇರೆ ಬೇರೆ ರೂಪದಲ್ಲಿ ಹೊರಬರುವ ಸಿದ್ಧತೆ ಮಾಡಿದ್ದಾರೆ ಎಂದು ಮುತಾಲಿಕ್ ಆತಂಕ ವ್ಯಕ್ತಪಡಿಸಿದರು.

ದೇಶದೊಳಗೆ ಇಂದಲ್ಲ ನಾಳೆ ಆಂತರಿಕ ಯುದ್ಧ ಆಗುತ್ತದೆ ಇದನ್ನು ಯಾರು ತಪ್ಪಿಸಲು ಸಾಧ್ಯವಿಲ್ಲ. ಇದಕ್ಕೆ ಉತ್ತರ ಕೊಡಲು ಹಿಂದೂ ಸಮಾಜ ಸಿದ್ಧವಿದೆ ಎಂದ ಮುತಾಲಿಕ್ ರಾಕ್ಷಸರು ಮತ್ತು ದೇವತೆಯ ನಡುವೆ ನಡೆದ ಯುದ್ಧದ ತರ ನಡೆಯುತ್ತದೆ. ಹಿಂದುಗಳು ಮತ್ತು ಇಸ್ಲಾಮಿಕ್ ಶಕ್ತಿಗಳ ನಡುವೆ ಸಂಘರ್ಷ ಆಗುತ್ತದೆ. ಆಂತರಿಕವಾಗಿ ಅವರು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಹಿಜಾಬ್ ಬೆಂಬಲಿಸಿ ಬಂದ್ ಮಾಡಿದಾಗ ಏಕತೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಹಿಂದೂ ಸಮಾಜ ಧರ್ಮ ಯುದ್ಧಕ್ಕೆ ಸಿದ್ಧವಾಗಬೇಕು ಎಂದು ಮುತಾಲಿಕ್ ಕರೆಕೊಟ್ಟರು.

ದಾಂಡಿಯಾ ಪೆಂಡಾಲ್ ಗೆ ಮುಸಲ್ಮಾನ ಯುವಕರಿಗೆ ನಿರ್ಬಂಧ ವಿಚಾರದ ಕುರಿತು ಮಾತನಾಡಿದ ಪ್ರಮೋದ್ ಮುತಾಲಿಕ್ ಮುಸಲ್ಮಾನ ಯುವಕರು ದಾಂಡಿಯಾದಲ್ಲಿ ಭಾಗವಹಿಸಲು ಬಿಡಬಾರದು. ಮುಸಲ್ಮಾನರು ನಮ್ಮ ದೇವರನ್ನು ಒಪ್ಪಲ್ಲ ಅವರಿಗೆ ಅಲ್ಲಾಹು ಒಬ್ಬನೇ ದೇವರು. ದಾಂಡಿಯಾ ಹಿಂದೂಗಳ ಧಾರ್ಮಿಕ ಸಂಪ್ರದಾಯ. ವಿಕೃತಿ ಮತ್ತು ಹಿಂದೂ ಹುಡುಗಿಯರನ್ನು ಪಟಾಯಿಸುವ ಉದ್ದೇಶಕ್ಕೆ ಬರುತ್ತಾರ. ಲವ್ ಜಿಹಾದ್ ಉದ್ದೇಶಕ್ಕೆ ದಾಂಡಿಯಾ ಪೆಂಡಾಲ್ ಗೆ ಬರುತ್ತಾರೆ. ನಮ್ಮ ಸಮಾಜ ಅವರನ್ನ ಸಂಪೂರ್ಣವಾಗಿ ಬಹಿಷ್ಕಾರ ಮಾಡಬೇಕು ಎಂದು ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.

ಇದನ್ನು ಓದಿ : Yellow Alert : ಮತ್ತೆ ಶುರುವಾಯ್ತಾ ವರುಣನ ನರ್ತನ : ಹಳದಿ ಅಲರ್ಟ್‌ ಘೋಷಣೆ

ಇದನ್ನೂ ಓದಿ : KL Rahul Virat Kohli : ದಕ್ಷಿಣ ಆಫ್ರಿಕಾ ವಿರುದ್ಧದ ಟಿ20: ರಾಹುಲ್, ಕೊಹ್ಲಿಗೆ ರೆಸ್ಟ್, ಓಪನರ್ ಯಾರು ?

Intifida is a shocking message: Pramod Muthalik

Comments are closed.