Jenavac JE vaccine: ಕಾರ್ಕಡ ಶಾಲೆಯಲ್ಲಿ ಮೆದುಳು ಜ್ವರ ಲಸಿಕಾ ಅಭಿಯಾನ

ಬ್ರಹ್ಮಾವರ: (Jenavac JE vaccine) ಜೆನವ್ಯಾಕ್‌ ಜೆಇ ಲಸಿಕೆ ವಿತರಣಾ ಅಭಿಯಾನ ಹಿನ್ನಲೆಯಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಲಸಿಕೆಗಳನ್ನು ನೀಡುತ್ತಿದ್ದು, ಇಂದು ಬ್ರಹ್ಮಾವರ ತಾಲೂಕಿನ ಕಾರ್ಕಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಯಾವುದೇ ಅಡಚಣೆಯಿಲ್ಲದೆ ಲಸಿಕಾ ಅಭಿಯಾನ ನಡೆದಿದೆ.

ಮಕ್ಕಳಲ್ಲಿ ಹರಡುತ್ತಿರುವ ಮೆದುಳು ಜ್ವರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯು ಒಂದರಿಂದ ಹದಿನೈದು ವರ್ಷದೊಳಗಿನ ಮಕ್ಕಳಿಗೆ ಜೆನವ್ಯಾಕ್‌ ಜೆಇ ಲಸಿಕೆ (Jenavac JE vaccine) ವಿತರಣಾ ಅಭಿಯಾನವನ್ನು ಸೋಮವಾರದಿಂದ ಹಮ್ಮಿಕೊಂಡಿದೆ. ಸೋಮವಾರದಿಂದ ಲಸಿಕಾ ವಿತರಣಾ ಅಭಿಯಾನ ಹಮ್ಮಿಕೊಂಡಿದ್ದು, ಎಲ್ಲಾ ಶಾಲೆಗಳಲ್ಲಿ ಅಭಿಯಾನಗಳು ನಡೆಯುತ್ತಿದೆ.

Jenavac JE vaccine: Encephalitis vaccination campaign in Karkada school

ಒಂದರಿಂದ 7 ನೇ ತರಗತಿಯ ವಿದ್ಯಾರ್ಥಿಗಳಿಗೆ ಮೆದುಳು ಜ್ವರ ಬಾರದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ಸರಕಾರದ ಆದೇಶದಂತೆ , ಕೋಟ ಆರೋಗ್ಯ ಕೇಂದ್ರದಿಂದ ಬ್ರಹ್ಮಾವರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆದುಳು ಜ್ವರ ಲಸಿಕಾ ಅಭಿಯಾನ ನೆರವೇರಿದ್ದು, ಮಕ್ಕಳು ಯಾವುದೇ ತೊಂದರೆಯಿಲ್ಲದೆ ಆರೋಗ್ಯವಾಗಿದ್ದಾರೆ. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ಪೋಷಕರು ಹಾಗೂ ಆರೋಗ್ಯ ಇಲಾಖೆಯವರು ಭಾಗಿಯಾಗಿದ್ದರು.

ಈಗಾಗಲೇ ರಾಜ್ಯದಲ್ಲಿ ಜೆಇ ಎಂಡೆಮಿಕ್‌ ಪೀಡಿತ ಎಂದು ಗುರುತಿಸಿರುವ 10 ಜಿಲ್ಲೆಗಳಲ್ಲಿ ಮುನ್ನೆಚ್ಚರಿಕಾ ಲಸಿಕೆ ನೀಡಲಾಗುತ್ತಿದೆ. ಸದ್ಯ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿರ್ದೇಶನದಂತೆ ಹೆಚ್ಚುವರಿಯಾಗಿ ಬಾಗಲಕೋಟೆ, ದಕ್ಷಿಣ ಕನ್ನಡ, ಗದಗ, ಹಾಸನ, ಹಾವೇರಿ, ಕಲಬುರಗಿ, ತುಮಕೂರು, ರಾಮನಗರ, ಉಡುಪಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ

Jenavac JE vaccine: Encephalitis vaccination campaign in Karkada school

ಇದನ್ನೂ ಓದಿ : Jenavac JE vaccine: ಮೆದುಳು ಜ್ವರ ಲಸಿಕೆ ಪಡೆದ ಮಕ್ಕಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಇದನ್ನೂ ಓದಿ : Muruga Math: ನ್ಯಾಯ ಕೊಡಿಸಿ ಇಲ್ಲ ದಯಾಮರಣ ನೀಡಿ : ಸಂತ್ರಸ್ತ ಬಾಲಕಿಯರ ತಾಯಿಯರಿಂದ ರಾಷ್ಟ್ರಪತಿಗೆ ಪತ್ರ

ಇದನ್ನೂ ಓದಿ : MP Tejaswi Surya: ಚಪ್ಪಲಿ ಧರಿಸಿ ದೈವದ ದೀವಟಿಕೆ ಹಿಡಿದ ಸಂಸದ ತೇಜಸ್ವಿ ಸೂರ್ಯ: ಹಿಂದೂಗಳ ಆಕ್ರೋಶ

ಇದನ್ನೂ ಓದಿ : Jayaprakash Hegde: ಟೋಲ್‌ ವಸೂಲಿ ಮನ್ನಾ ಹೋಣೆ ಸಿಎಂ ಹೆಗಲಿಗೆ: ಜಯಪ್ರಕಾಶ್‌ ಹೆಗ್ಡೆ

ಕೇಂದ್ರ ಸರ್ಕಾರ ಉಚಿತವಾಗಿ ಜೆನವ್ಯಾಕ್‌ ಜೆಇ ಲಸಿಕೆಗಳನ್ನು ಸರಬರಾಜು ಮಾಡಿದ್ದು, ಡಿಸೆಂಬರ್‌ ಮೊದಲನೇ ವಾರದಲ್ಲಿ ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಲಾಗಿದೆ. ನಂತರದ ಎರಡು ವಾರಗಳಲ್ಲಿ ಎಲ್ಲ ಆರೋಗ್ಯ ಸಂಸ್ಥೆಗಳು, ಅಂಗನವಾಡಿ ಕೇಂದ್ರ ಹಾಗೂ ಸಮುದಾಯದ ಇನ್ನಿತರ ಪ್ರದೇಶಗಳಲ್ಲಿ ಲಸಿಕೆ ನೀಡಲಾಗುವುದು.

(Jenavac JE vaccine) In the backdrop of the Jenavac JE vaccine distribution campaign, vaccines are being given to children in schools, today the vaccination campaign was conducted without any hindrance in Karkada Government Senior Primary School of Brahmavar Taluk.

Comments are closed.