Kanthara panjurli: ಪಂಜುರ್ಲಿ ದೈವದ ವೇಷ ತೊಟ್ಟ ವಿದ್ಯಾರ್ಥಿ : ದೈವಾರಾಧಕರಿಂದ ತೀವ್ರ ಆಕ್ರೋಶ

ವಿಟ್ಲ: (Kanthara panjurli) ರಿಷಬ್‌ ಶೆಟ್ಟಿ ಅಭಿನಯದ ಕಾಂತಾರ ಚಲನಚಿತ್ರ ಯಶಸ್ವಿ ಕಂಡ ಬಳಿಕ ಎಲ್ಲೆಡೆ ದೈವಾರಾದನೆ, ಭೂತರಾಧನೆ ಬಗ್ಗೆ ಜನತೆಗೆ ಒಲವು ಜಾಸ್ತಿಯಾಗಿದೆ. ಇದೇ ವೇಳೆ ಕೆಲವರು ಭೂತರಾಧನೆಯ ವೇಷ ಹಾಕಿಕೊಂಡು ವೇದಿಕೆಯಲ್ಲಿ ಕುಣಿದು ದೈವಕ್ಕೆ ಅಪಚಾರ ಎಸಗುವ ಕೆಲಸ ಮಾಡುತ್ತಿದ್ದಾರೆ. ಇದೀಗ ವಿಟ್ಲದ ಖಾಸಗಿ ಶಾಲೆಯೊಂದರಲ್ಲಿ ಅಂತಹದೇ ಒಂದು ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಬಂಟ್ವಾಳ ತಾಲೂಕಿನ ವಿಟ್ಲದ ಖಾಸಗಿ ಶಾಲೆಯೊಂದರಲ್ಲಿ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಾಂತಾರ ಚಿತ್ರದ ದೈವಾರಾಧನೆಯ (Kanthara panjurli) ಸನ್ನಿವೇಶವನ್ನು ಛದ್ಮವೇಶದ ಮೂಲಕ ಪ್ರದರ್ಶನ ನೀಡಿದ್ದು, ಇದರ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಬಾಲಕನೋರ್ವ ಕೈಯಲ್ಲಿ ಪಂಜುರ್ಲಿ ವೇಷ ಹಾಕಿಕೊಂಡು, ದೈವದ ಆಯುಧವನ್ನು ಹಿಡಿದು, ಹಾಡು ಹಾಕಿ ಕುಣಿದಿದ್ದು, ನೆರೆದ ಪುಟ್ಟ ಮಕ್ಕಳು ಮತ್ತು ಶಿಕ್ಷಕರು ಚಪ್ಪಾಳೆ ತಟ್ಟಿ ಆತನಿಗೆ ಪ್ರೋತ್ಸಾಹಿಸಿದ್ದಾರೆ. ಇದರಿಂದಾಗಿ ದೈವಕ್ಕೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೈವಾರಾಧಕರು ಹಾಗೂ ತುಳುನಾಡಿನ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Brahmavara Road accident: ಟೂರಿಸ್ಟ್‌ ಬಸ್‌ ಚಾಲಕನ ಅಜಾಗರೂಕತೆಗೆ ಓರ್ವ ಬಲಿ

ಇದನ್ನೂ ಓದಿ : ಮಂಗಳೂರಲ್ಲಿ ಸಿಟಿ ಬಸ್ ಚಾಲಕನ ಅಟ್ಟಹಾಸ : ಇಂಜಿನಿಯರ್ ಸಾವು, ಸಾರ್ವಜನಿಕರ ಆಕ್ರೋಶ

ಪೂಜ್ಯ ಭಾವನೆಯಿಂದ ಕಾಣಬೇಕಾದ ದೈವದ ನರ್ತನವನ್ನು ಶಾಲಾ ಕಾಲೇಜಿನ ವೇದಿಕೆಯಲ್ಲಿ ತಂದಿರುವುದಕ್ಕೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದು, ಕೆಲವು ದೈವಾರಾಧಕರು ಕೂಡ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

(Kanthara panjurli) After the success of Rishabh Shetty starrer Kanthara movie, people are more fond of deity and ghost worship everywhere. At the same time, some people are dancing on the stage in the guise of ghost worshipers and doing disservice to God. Now, a similar incident has taken place in a private school in Whitla, and a lot of outrage is being expressed on social media.

Comments are closed.