Karkala Suicide case: ಡೆತ್‌ ನೋಟ್‌ ಬರೆದಿಟ್ಟು ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಚಾಲಕ ಆತ್ಮಹತ್ಯೆ

ಕಾರ್ಕಳ: (Karkala Suicide case) ವ್ಯಕ್ತಿಯೊಬ್ಬರು ಡೆತ್‌ ನೋಟ್‌ ಬರೆದಿಟ್ಟು ಕಾರಿನೊಳಗೆ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರ್ಕಳದ ಮುಂಡ್ಕೂರು ಗ್ರಾಮದ ಸಚ್ಚರೀಪೇಟೆ ಕುದ್ರುಟ್ಟು ಎಂಬಲ್ಲಿ ನಡೆದಿದೆ. ಕುದ್ರುಟ್ಟು ನಿವಾಸಿ ಕೃಷ್ಣ ಸಫಲಿಗ (46 ವರ್ಷ) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.

ಕಾರು ಚಾಲಕನಾಗಿದ್ದ ಕೃಷ್ಣ ಅವರು ಯಾವುದೋ ಕಾರಣಕ್ಕೆ ಮಾನಸಿಕವಾಗಿ ನೊಂದಿದ್ದರು. ನಿನ್ನೆಯ ದಿನ ರಾತ್ರಿ ತಮ್ಮನ ಮನೆಯಲ್ಲಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗಿದ್ದ ಕೃಷ್ಣ ಅವರು ತಮ್ಮ ಮಾರುತಿ ಕಾರಿನ ಒಳಗೆ ಕುಳಿತು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೇ ಸಾಯುವ ಮೊದಲು ಡೆತ್‌ ನೋಟ್‌ ಕೂಡ ಬರೆದಿಟ್ಟಿದ್ದಾರೆ.

“ನನ್ನ ಪ್ರೀತಿಯ ಗೆಳೆಯರೆ ನಾನು ಮನ ನೊಂದು ಬರೆಯುತ್ತಿರುವ ಪತ್ರ” ಎಂಬುದಾಗಿ ಹೇಳಿ ನಂತರ ತನಗಾಗಿರುವ ವಂಚನೆಯ ಬಗ್ಗೆ ಹೇಳಿಕೊಂಡು ಡೆತ್‌ ನೋಟ್‌ ಬರೆದಿಟ್ಟಿದ್ದು, ಅದರಲ್ಲಿ ತಾನು ರೊನಿ ಎನ್ನುವ ವ್ಯಕ್ತಿಯಿಂದ ಲಕ್ಷಾಂತರ ರೂ. ವಂಚನೆಗೊಳಗಾಗಿದ್ದು, ತನಗಷ್ಟೇ ಅಲ್ಲದೇ ಗ್ರಾಮದ ತುಂಬಾ ಜನರಿಗೆ ವಂಚನೆ ಮಾಡಿರುವುದಾಗಿ ತಿಳಿಸಿದ್ದಾರೆ. ತಮ್ಮ ಭೂಮಿಯ ಸರ್ವೇ ವಿಷಯದಲ್ಲಿ ದಿನೇಶ ಹಾಗೂ ಶಶಿ ಎನ್ನುವವರು ಕೂಡ ಲಕ್ಷಾಂತರ ರೂ ವಂಚನೆ ಮಾಡಿದ್ದು, ಹಲವರು ಇದೇ ರೀತಿಯಾಗಿ ತನಗೆ ವಂಚನೆ ಮಾಡಿದ್ದಾರೆ. ಅಲ್ಲದೇ ತನ್ನ ಮನೆಯವರ ಮೇಲೆ ಬೇರೊಂದು ಮನೆಯವರು ಮಾಟಾಮಂತ್ರ ಮಾಡಿ ತನ್ನ ಸಂಸಾರವನ್ನು ಸರ್ವನಾಶ ಮಾಡಿದ್ದಾರೆ. ಇವರಿಗೆ ಕಠಿಣ ಶಿಕ್ಷೆಯಾಗಬೇಕು. ತಾನು ಮಾನಸಿಕ ಹಿಂಸೆಯಿಂದ ಈ ರೀತಿಯಾಗಿ ಮಾಡಿರುವುದಾಗಿ ಪತ್ರದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ : Agra Building collapse: ಉತ್ಖನನ ಕಾರ್ಯಕ್ಕೆ ನೆಲಸಮವಾದ 6 ಮನೆ : 4 ವರ್ಷದ ಬಾಲಕಿ ಸಾವು

ಇದನ್ನೂ ಓದಿ : Contractor killed the worker: ಹಣದ ವಿಚಾರಕ್ಕೆ ಕಿರಿಕ್ : ಕಾರ್ಮಿಕನ ಕೊಲೆಗೈದು ಪೊದೆಯಲ್ಲಿ ಎಸೆದ ಗುತ್ತಿಗೆದಾರ

ಇದನ್ನೂ ಓದಿ : ಲೈಂಗಿಕ ದೌರ್ಜನ್ಯಕ್ಕೆ ಹೆದರಿ ಚಲಿಸುತ್ತಿದ್ದ ಬಸ್‌ನಿಂದ ಜಿಗಿದ ಮಹಿಳೆ

ಸ್ಥಳಕ್ಕೆ ಕಾರ್ಕಳ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಘಟನೆಯ ಬಗ್ಗೆ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ

Karkala Suicide case: Driver commits suicide by writing a death note and setting fire inside the car

Comments are closed.