ಕಪ್ಪು ದ್ರಾಕ್ಷಿಯಿಂದ ಸಿಗುವ ಆರೋಗ್ಯಕಾರಿ ಪ್ರಯೋಜನದ ಬಗ್ಗೆ ನಿಮಗೆಷ್ಟು ಗೊತ್ತು ?

ಕಪ್ಪು ದ್ರಾಕ್ಷಿಯನ್ನು ಸೇವಿಸುವುದ್ದರಿಂದ ನಮ್ಮ ಆರೋಗ್ಯಕ್ಕೆ ಹೆಚ್ಚು (Health Benefits of grapes) ಪ್ರಯೋಜನಕಾರಿಯಾಗಿದೆ. ಏಕೆಂದರೆ ಅವುಗಳಲ್ಲಿ ಅಧಿಕ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಅಷ್ಟೇ ಅಲ್ಲದೇ ಕಪ್ಪು ದ್ರಾಕ್ಷಿಯನ್ನು ತಿನ್ನುವುದರಿಂದ ನಮ್ಮ ನಯವಾದ ಚರ್ಮದ ಕಾಂತಿಗೆ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ. ಈ ಹಣ್ಣುಗಳು ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ. ದ್ರಾಕ್ಷಿ ಹಣ್ಣುಗಳನ್ನು ತಿನ್ನುವುದ್ದರಿಂದ ನಿಮ್ಮ ಆಹಾರವನ್ನು ಸಮತೋಲನಗೊಳಿಸಲು ಮತ್ತು ದೇಹದ ದೈನಂದಿನ ಪ್ರಕ್ರಿಯೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಜೊತೆಗೆ, ದ್ರಾಕ್ಷಿಯ ಸೇವನೆಯು ದೇಹದಲ್ಲಿ ಅತ್ಯುತ್ತಮ ದಕ್ಷತೆಗೆ ಕಾರಣವಾಗುತ್ತದೆ.

ದ್ರಾಕ್ಷಿ ಹಣ್ಣುಗಳು ಪೊಟ್ಯಾಸಿಯಮ್, ಸೋಡಿಯಂ, ಸತು, ಕ್ಯಾಲ್ಸಿಯಂ, ಕಬ್ಬಿಣ ಮತ್ತು ರಂಜಕದಂತಹ ಅಗತ್ಯ ಖನಿಜಗಳಿಗೆ ಖಜಾನೆಗಳಾಗಿವೆ. ಇದರಲ್ಲಿ ವಿಟಮಿನ್‌ ಕೆ, ವಿಟಮುನ್‌ ಸಿ ಮತ್ತು ವಿಟಮಿನ್‌ ಬಿ9 ನಂತಹ ವಿಟಮಿನ್‌ ಸಮೃದ್ಧವಾಗಿರುತ್ತದೆ. ದ್ರಾಕ್ಷಿ ಹಣ್ಣನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್‌ ನಮ್ಮ ದೇಹದಿಂದ ಸಂಪೂರ್ಣವಾಗಿ ಮುಕ್ತವಾಗಿರುತ್ತದೆ. ಈ ಹಣ್ಣು ನಿಮ್ಮ ರಕ್ತನಾಳಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ. ಹೀಗಾಗಿ ದ್ರಾಕ್ಷಿ ಹಣ್ಣಿನಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅವುಗಳನ್ನು ಈ ಕೆಳಗೆ ತಿಳಿಸಲಾಗಿದೆ.

ದ್ರಾಕ್ಷಿ ಹಣ್ಣನ್ನು ತಿನ್ನುವುದರಿಂದ ಚರ್ಮದ ಪ್ರಯೋಜನಗಳ ವಿವರ :

  • ದ್ರಾಕ್ಷಿ ಹಣ್ಣನ್ನು ತಿನ್ನುವುದರಿಂದ ನಮ್ಮ ಚರ್ಮವನ್ನು ಯುವಿ ಕಿರಣಗಳ ವಿರುದ್ಧ ರಕ್ಷಣೆ ಮಾಡುತ್ತದೆ.
  • ದ್ರಾಕ್ಷಿಯನ್ನು ನಿಯಮಿತವಾಗಿ ಬಳಸುವುದರಿಂದ ವಯಸ್ಸಾಗುವುದನ್ನು ಮರೆ ಮಾಚುತ್ತದೆ.
  • ದ್ರಾಕ್ಷಿಯು ನಮ್ಮ ಚರ್ಮವನ್ನು ಮೃದುವಾಗಿಸುತ್ತದೆ.
  • ದ್ರಾಕ್ಷಿಯು ನಮ್ಮ ಚರ್ಮಕ್ಕೆ ಉತ್ತಮ ಹೊಳಪನ್ನು ಸಹ ನೀಡುತ್ತದೆ.
  • ದ್ರಾಕ್ಷಿ ತಿನ್ನುವುದರಿಂದ ನಮ್ಮ ದೇಹದಲ್ಲಿನ ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ದ್ರಾಕ್ಷಿಯ ಬಳಕೆಯಿಂದ ಕೂದಲಿನ ಬೆಳವಣಿಗೆ ಪ್ರಯೋಜನಕಾರಿ :

  • ದ್ರಾಕ್ಷಿ ತಿನ್ನುವುದರಿಂದ ಕೂದಲು ಉದುರುವುದನ್ನು ನಿಲ್ಲಿಸುತ್ತದೆ.
  • ದ್ರಾಕ್ಷಿಯು ನೈಸರ್ಗಿಕವಾಗಿ ಕೂದಲಿಗೆ ಹೊಳಪನ್ನು ನೀಡುತ್ತದೆ.
  • ದ್ರಾಕ್ಷಿಯು ಕೂದಲು ಬೆಳವಣಿಗೆಗೆ ಪರಿಮಾಣಕಾರಿ ಆಗಿರುತ್ತದೆ.
  • ದ್ರಾಕ್ಷಿಯು ನಮ್ಮ ತಲೆಹೊಟ್ಟು ವಿರುದ್ಧ ಹೋರಾಡುತ್ತದೆ.
  • ದ್ರಾಕ್ಷಿ ತಿನ್ನುವುದರಿಂದ ಕೂದಲನ್ನು ಮೃದು ಮತ್ತು ಆರೋಗ್ಯಕರವಾಗಿಸಿ ಇಡುತ್ತದೆ.

ದ್ರಾಕ್ಷಿಯ ಆರೋಗ್ಯ ಪ್ರಯೋಜನಗಳು :

ದ್ರಾಕ್ಷಿಗಳು ಕ್ಯಾನ್ಸರ್‌ನಿಂದ ರಕ್ಷಣೆ :
ಇತರ ಹಣ್ಣುಗಳಂತೆ, ದ್ರಾಕ್ಷಿಯು ಪ್ರಬಲವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇವುಗಳನ್ನು ಪಾಲಿಫಿನಾಲ್ಗಳು ಎಂದು ಕರೆಯಲಾಗುತ್ತದೆ. ಪಾಲಿಫಿನಾಲ್ಗಳು ಉರಿಯೂತದ ಗುಣಲಕ್ಷಣಗಳನ್ನು ಸಹ ಹೊಂದಿವೆ. ಈ ಫೀನಾಲ್‌ಗಳಲ್ಲಿ ಒಂದು ರೆಸ್ವೆರಾಟ್ರೊಲ್. ಹೀಗಾಗಿ ದ್ರಾಕ್ಷಿಯು ಕ್ಯಾನ್ಸರ್‌ ವೈರಾಣು ಜೊತೆ ಹೋರಾಡುತ್ತದೆ. ದ್ರಾಕ್ಷಿ ಬಳಕೆಯಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಸ್ನಾಯುಗಳಿಗೆ ಪ್ರಯೋಜನಕಾರಿ :
ದ್ರಾಕ್ಷಿಯ ಸೇವನೆಯು ನಮ್ಮ ದೇಹದಲ್ಲಿ ಪೊಟ್ಯಾಸಿಯಮ್ ಮತ್ತು ಫೈಬರ್‌ ಅಂಶವನ್ನು ಹೆಚ್ಚಿಸಬಹುದು. ಈ ಖನಿಜವು ಅಗತ್ಯವಿರುವಂತೆ ರಕ್ತನಾಳಗಳನ್ನು ವಿಶ್ರಾಂತಿ ಮಾಡಲು ಮತ್ತು ಸಂಕುಚಿತಗೊಳಿಸಲು ಕೆಲಸ ಮಾಡುತ್ತದೆ. ಆದ್ದರಿಂದ ನಿಮ್ಮ ರಕ್ತನಾಳಗಳು ಮತ್ತು ಅಪಧಮನಿಗಳು ಸರಿಯಾಗಿ ವಿಶ್ರಾಂತಿ ಪಡೆಯುತ್ತಿದ್ದರೆ, ಇದರರ್ಥ ನೈಸರ್ಗಿಕವಾಗಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ದ್ರಾಕ್ಷಿಯು ನಮ್ಮ ದೇಹದಲ್ಲಿ ಉಂಟಾಗುವ ಸ್ನಾಯು ಸೆಳೆತದಿಂದ ದೂರ ಮಾಡುತ್ತದೆ.

ಜೀರ್ಣಕ್ರಿಯೆ, ಮಧುಮೇಹದಿಂದ ರಕ್ಷಣೆ :
ದ್ರಾಕ್ಷಿಯಲ್ಲಿರುವ ನೀರು ಮತ್ತು ನಾರಿನಂಶವು ನಮ್ಮ ದೇಹದ ಜೀರ್ಣಕ್ರಿಯೆಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ದ್ರಾಕ್ಷಿಯಲ್ಲಿ ಪಾಲಿಫಿನಾಲ್ಸ್ ಎಂಬ ವಿಶಿಷ್ಟ ರಾಸಾಯನಿಕವಿದೆ. ಈ ಪಾಲಿಫಿನಾಲ್ಗಳು ಜೀರ್ಣಕ್ರಿಯೆಯ ಪ್ರಕ್ರಿಯೆಯಲ್ಲಿ ನಿರ್ದಿಷ್ಟವಾಗಿ ಪ್ರಯೋಜನಕಾರಿಯಾಗಿದೆ. ಅವು ದೇಹದೊಳಗಿನ ಪೋಷಕಾಂಶಗಳ ಜೀರ್ಣಕ್ರಿಯೆ ಮತ್ತು ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುವ ಮೂಲಕ ಚಯಾಪಚಯವನ್ನು ಬಲಪಡಿಸುತ್ತವೆ. ಹಾಗೆ ನಮ್ಮ ದೇಹವನ್ನು ಮಧುಮೇಹದಿಂದ ಕೂಡ ರಕ್ಷಣೆ ಮಾಡುತ್ತದೆ.

ದೃಷ್ಟಿಗೆ ಪ್ರಯೋಜನಕಾರಿ :
ದ್ರಾಕ್ಷಿಯಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕಗಳಾದ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಕಣ್ಣಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅವರು ಸ್ವತಂತ್ರ ರಾಡಿಕಲ್‌ಗಳನ್ನು ತಟಸ್ಥಗೊಳಿಸುತ್ತಾರೆ. ದ್ರಾಕ್ಷಿಯು ಒತ್ತಡ ಮತ್ತು ರೆಟಿನಾದ ಹಾನಿಯನ್ನು ಕಡಿಮೆ ಮಾಡುತ್ತದೆ. ದ್ರಾಕ್ಷಿ ಹಣ್ಣಿನ ಬಳಕೆಯಿಂದ ಕಣ್ಣಿನ ಪೊರೆ ಮತ್ತು ಇತರ ಸಮಸ್ಯೆಗಳನ್ನು ತಡೆಯುತ್ತದೆ.

ಇದನ್ನೂ ಓದಿ : ಚಳಿಗಾಲದಲ್ಲಿ ಈ ಪೌಷ್ಟಿಕ ಸೂಪ್‌ಗಳು ವೃದ್ದಿಸುತ್ತವೆ ನಿಮ್ಮ ಆರೋಗ್ಯ

ಇದನ್ನೂ ಓದಿ : Healthy herbal tea: ಚಳಿಗಾಲದಲ್ಲಿ ಆರೋಗ್ಯವಾಗಿರಲು ಕುಡಿಯಿರಿ ಈ 5 ಆರೋಗ್ಯಕರ ಗಿಡಮೂಲಿಕೆ ಚಹಾ

ಇದನ್ನೂ ಓದಿ : ಚಳಿಗಾಲದಲ್ಲಿ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಈ 5 ಅಡುಗೆ ಪದಾರ್ಥ

ಸೂಚನೆ : ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಹೆಚ್ಚಿನ ಮಾಹಿತಿಗಾಗಿ ವೃತ್ತಿಪರ ವೈದ್ಯರ ಬಳಿ ಸಲಹೆ ತೆಗೆದುಕೊಳ್ಳಿ.

Health Benefits of grapes: How much do you know about the health benefits of black grapes?

Comments are closed.