Karnataka Rain Alert : ಜುಲೈ 5 ರ ವರೆಗೆ ಕರಾವಳಿಯಲ್ಲಿ ಮಳೆಯ ಆರ್ಭಟ : ಯೆಲ್ಲೋ, ಆರೆಂಜ್‌ ಅಲರ್ಟ್‌ ಘೋಷಣೆ

ಬೆಂಗಳೂರು : Karnataka Rain Alert : ಕಳೆದ ಹತ್ತು ದಿನಗಳಿಂದಲೂ ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಇದೀಗ ರಾಜ್ಯದಾದ್ಯಂತ ಮುಂದಿನ ಐದು ದಿನಗಳ ಕಾಲ ಮಳೆಯ ಆರ್ಭಟ ಹೆಚ್ಚಾಗಲಿದೆ. ಇಂದಿನಿಂದ ಜುಲೈ 5ರ ವರೆಗೆ ಕರಾವಳಿ ಭಾಗದಲ್ಲಿಯೂ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಲಿದೆ. ಜುಲೈ 1 ರಿಂದ 3 ರವರೆಗೆ ಯೆಲ್ಲೋ ಅಲರ್ಟ್‌ ಹಾಗೂ ಜುಲೈ 4 ಮತ್ತು 5 ರಂದು ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಜುಲೈ 3 ರಂದು ಭಾರಿ ಮಳೆ ಸುರಿಯಲಿದ್ದು, ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಭಾರೀ ಮಳೆ ಸುರಿದಿದೆ. ಅಂಕೋಲಾ, ಗೋಕರ್ಣ, ಕುಮಟಾದಲ್ಲಿ ತಲಾ 9 ಸೆಂ.ಮೀ, ಮಳೆಯಾಗಿದ್ದರೆ, ಹೊನ್ನಾವರದಲ್ಲಿ 8 ಸೆಂ.ಮೀ., ಶಿರಾಲಿ, ಕಾರವಾರದಲ್ಲಿ ತಲಾ 7 ಸೆಂ.ಮೀ., ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ 6 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿಯನ್ನು ನೀಡಿದೆ.

ಜುಲೈ 3 ರ ವರೆಗೆ ಕರಾವಳಿ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಿದ್ದರೆ, ಜುಲೈ 4 ಮತ್ತು 5 ರಂದು ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರುವಂತೆ ಎಚ್ಚರಿಕೆ ವಹಿಸಲಾಗಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿ ಈಗಾಗಲೇ ಸೂಚಿಸಿದೆ.

ಇದನ್ನೂ ಓದಿ : Mangalore Honeytrap Case : ಮಂಗಳೂರು ಹನಿಟ್ರ್ಯಾಪ್ ಕೇಸ್ : ವಂಚನೆಗೊಳ್ಳಗಾದ 4 ತಿಂಗಳ ಬಳಿಕ ದೂರು | ಯುವತಿ ಸೇರಿ 8 ಮಂದಿ ಅರೆಸ್ಟ್‌

ಇದನ್ನೂ ಓದಿ : Bangalore Mysore Expressway : ಮೈಸೂರು – ಬೆಂಗಳೂರು ಹೆದ್ದಾರಿಯಲ್ಲಿ 2 ಕಡೆ ಟೋಲ್ ಆರಂಭ : ಪ್ರಯಾಣಿಕರಿಗೆ ಮತ್ತೆ ಬರೆ

Comments are closed.